ಮದೀನಾ ಮುನವ್ವರ: ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಸಹಕಾರದೊಂದಿಗೆ, ಸೆ.24 ರಂದು ಮದೀನಾ ಮುನವ್ವರದಲ್ಲಿ ಮರಣ ಹೊಂದಿದ್ದ ಉಮ್ರಾ ಯಾತ್ರಾರ್ಥಿ ಫಾತಿಮಾ ಹೊಸನಗರ ಎಂಬವರ ದಫನ ಕಾರ್ಯ ಪೂರ್ಣಗೊಂಡಿದೆ.
ಮದೀನಾ ಮುನವ್ವರದ ಕರ್ನಾಟಕ ಕಲ್ಚರಲ್ ಫೌಂಡೇಶನ್ ಇದರ ಸಾಂತ್ವನ ಕಾರ್ಯಕರ್ತರು, ದಫನ ಕಾರ್ಯಕ್ಕೆ ಬೇಕಾದ ಕಾನೂನು ಪ್ರಕ್ರಿಯೆಗಳನ್ನು ಪೂರ್ತಿಗೊಳಿಸಿ. ಮರಣೋತ್ತರ ಕಾರ್ಯದಲ್ಲಿ ಅವರ ಕುಟುಂಬಕ್ಕೆ ನೆರವಾದರು.
ದಫನ ಕಾರ್ಯಕ್ಕೆ ಬೇಕಾದ ಎಲ್ಲಾ ಅವಶ್ಯ ದಾಖಲೆಗಳನ್ನು ಸರಿಪಡಿಸಿ, ಭಾರತ ರಾಯಭಾರಿ ಕಚೇರಿ ಯಿಂದ ನಿರಪೇಕ್ಷಣಾ ಪತ್ರ ಪಡೆಯುವ ಹಾಗೂ ಮತ್ತಿತರ ಕಾನೂನು ಪ್ರಕ್ರಿಯೆಗಳಿಗೆ ನೆರವಾಗಿ ಅಂತಿಮ ಸಂಸ್ಕಾರದವರೆಗೆ ಕೆಸಿಎಫ್ ಕಾರ್ಯಕರ್ತರು ಮೃತರ ಸಂಬಂಧಿಕರೊಡನೆ ಕೈಜೋಡಿಸಿದ್ದು, ಸೆ.25 ರಂದು ಜನ್ನತುಲ್ ಬಖೀನಲ್ಲಿ ದಫನ ಕಾರ್ಯ ನಡೆಸಲಾಯಿತು.
ಭಾರತದ ವಿವಿಧ ರಾಜ್ಯಗಳಿಂದ ಆಗಮಿಸುವ ಉಮ್ರಾ ಯಾತ್ರಾರ್ಥಿಗಳು ಮದೀನಾ ಮುನವ್ವರದಲ್ಲಿ ಮರಣ ಸಂಭವಿಸಿದ ಮಾಹಿತಿ ಲಭಿಸಿದ ಕೂಡಲೇ ಕೆಸಿಎಫ್ ಸಾಂತ್ವನ ಇಲಾಖೆಯ ಕಾರ್ಯಕರ್ತರು ದಫನ ಕಾರ್ಯಕ್ಕೆ ಬೇಕಾದ ಎಲ್ಲಾ ಕಾನೂನು ಪ್ರಕ್ರಿಯೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ.
ಮಾತ್ರವಲ್ಲದೆ ಮರಣೋತ್ತರ ಕಾರ್ಯದಲ್ಲೂ ಭಾಗಿಯಾಗಿ ಮೃತರ ಕುಟುಂಬದವರನ್ನು ಸಾಂತ್ವನ ಪಡಿಸಲಾಗುತ್ತದೆ. ಕಳೆದ ಒಂದು ವರ್ಷದಲ್ಲಿ ಮದೀನಾ ಮುನವ್ವರದಲ್ಲಿ 36 ಕ್ಕೂ ಅಧಿಕ ಮಂದಿಯ ದಫನ ಕಾರ್ಯಕ್ಕೆ ಬೇಕಾದ ದಾಖಲೆ ಪತ್ರಗಳನ್ನು ಸಿದ್ಧಪಡಿಸುವಲ್ಲಿ ಮದೀನಾ ಕೆ.ಸಿ.ಎಫ್ ಸಾಂತ್ವನ ಇಲಾಖೆಯು ಯಶಸ್ವಿಯಾಗಿದೆ.
















ಇನ್ನಷ್ಟು ಸುದ್ದಿಗಳು
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ
ಮಾದರಿ ಮದುವೆ ಅಭಿಯಾನದ ಸಮಾರೋಪ ಪ್ರಚಾರ; ಎ.28, 29 ರಂದು ವಾಹನ ಸಂದೇಶ ಜಾಥಾ
ಮುಂಬೈಯನ್ನು ನಡುಗಿಸಿದ ಘಟನೆ: ಬಿರಿಯಾನಿ ಮತ್ತು ಕಲ್ಲಂಗಡಿ ತಿಂದ ಕುಟುಂಬ ಬೆಳಗಾಗುವಷ್ಟರಲ್ಲಿ ಅಂತ್ಯ
‘ಮಾದರಿ ಮದುವೆ ಅಭಿಯಾನ’ ಸಮಾರೋಪ ಸಮಾರಂಭ – ಎಸ್ವೈಎಸ್ ಬಂಟ್ವಾಳ ಝೋನ್ ಯಶಸ್ವಿಗೆ ಕರೆ
ಮಂಗಳೂರು ಪೊಲೀಸ್ ಕಮಿಷನರ್: ವರ್ಗಾವಣೆ ವಿಚಾರ ಕೈಬಿಡುವಂತೆ ಮನವಿ- ಡಿಜಿಪಿಗೆ ಇಕ್ಬಾಲ್ ಬಾಳಿಲ ಪತ್ರ
ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ತೆಗೆಸಿದ ಘಟನೆ: ಸಚಿವ ದಿನೇಶ್ ಗುಂಡೂರಾವ್ ತೀವ್ರ ಖಂಡನೆ
ಇಂಡಿಯನ್ ಗ್ರಾಂಡ್ ಮುಫ್ತಿ ಜಿಲ್ಲೆಗೆ- ಯಶಸ್ವಿಗಾಗಿ ಸಮಾಲೋಚನಾ ಸಭೆ
ಭಾರತವನ್ನು ‘ನರಕ’ ಎಂದ ಟ್ರಂಪ್ ಪೋಸ್ಟ್- ಮೌನಕ್ಕೆ ಶರಣಾದ ವಿದೇಶಾಂಗ ಇಲಾಖೆ
ಅಲ್ ಮದೀನ ಇಂಗ್ಲಿಷ್ ಮೀಡಿಯಂ ಶಾಲೆಗೆ ಶೇ.100 ಫಲಿತಾಂಶ- ನಾಲ್ವರು ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ
ಈಶ್ವರಮಂಗಲ ತ್ವೈಬಾ ವಿದ್ಯಾಸಂಸ್ಥೆಗೆ ಎಸ್ಸೆಸ್ಸೆಲ್ಸಿಯಲ್ಲಿ ಶೇ. 100 ಫಲಿತಾಂಶ- ಅಭೂತಪೂರ್ವ ಸಾಧನೆ