ಮಾಣಿ : ಒಳಿತಿನಡೆಗೆ ಅಹ್ವಾನಿಸುವ, ಒಳ್ಳೆಯದನ್ನು ಆಜ್ಞಾಪಿಸುವ ಕೆಟ್ಟದ್ದನ್ನು ನಿಷೇಧಿಸುವ ಒಂದು ಸಮೂಹವು ನಿಮ್ಮ ಮಧ್ಯೆಯಿರಲಿ ಅವರು ವಿಜಯಶಾಲಿಗಳು ಎಂದು ಅಲ್ಲಾಹನು ಕುರ್ಆನ್ ನಲ್ಲಿ ಹೇಳಿರುತ್ತಾನೆ ,ಆ ನಿಟ್ಟಿನಲ್ಲಿ ಇಲ್ಲಿ ಕಾರ್ಯಾಚರಿಸುವ ಎಸ್ಸೆಸ್ಸೆಫ್ ಎಸ್ವೈಎಸ್ ಕರ್ನಾಟಕ ಮುಸ್ಲಿಂ ಜಮಾಅತ್ ನಂತಹಾ ಸುನ್ನೀ ಸಂಘಟನೆಗಳಲ್ಲಿ ಕಾರ್ಯಾಚರಿಸಲು ಭಾಗ್ಯ ಬೇಕು,ಆ ಭಾಗ್ಯ ಎಲ್ಲರಿಗೂ ಸಿಗದು,ಸಿಕ್ಕಿದವರು ಇಖ್ಲಾಸ್ ನಿಂದ ಕಾರ್ಯಾಚರಿಸಿರಿ ಹಲವಾರು ಉಲಮಾ ಸಯ್ಯಿದ್ ಗಳ ದುಆ ಲಭಿಸಿ ವಿಜಯಹೊಂದುವಿರಿ ಎಂದು ಸಯ್ಯಿದ್ ಮುಶ್ತಾಕುರ್ರಹ್ಮಾನ್ ತಂಙಳ್ ಚಟ್ಟೆಕ್ಕಲ್ ಹೇಳಿದರು.
ಅವರು ಎಸ್ವೈಎಸ್, ಎಸ್ಸೆಸ್ಸೆಫ್, ಕರ್ನಾಟಕ ಮುಸ್ಲಿಂ ಜಮಾಅತ್,ಸೂರಿಕುಮೇರು ಯುನಿಟ್ ವತಿಯಿಂದ ಅಧ್ಯಕ್ಷ ಅಬ್ದುಲ್ ಬಶೀರ್ ಝುಹ್ರಿ ಉಸ್ತಾದರ ಸಜಿಪಮುನ್ನೂರು ನಿವಾಸದಲ್ಲಿ ನಡೆದ ಸುಲ್ತಾನುಲ್ ಉಲಮಾ ಎಪಿ ಉಸ್ತಾದರ ಇಜಾಝತ್ ನಂತೆ ನಡೆದ ಮಹ್ಳರತುಲ್ ಬದ್ರಿಯಾ ಕಾರ್ಯಕ್ರಮಕ್ಕೆ ನೇತೃತ್ವ ನೀಡಿ ದುಆ ಮಾಡಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಬಶೀರ್ ಮದನಿ ಉರುಮಣೆ, ಬಾತಿಶ್ ಸಅದಿ ನಂದಾವರ, ಮಹ್ಮೂದ್ ಸಅದಿ ಮುಡಿಪು, ಖಲೀಲ್ ಸಅದಿ ಕಾಸರಗೋಡು, ಹಮೀದ್ ಮುಸ್ಲಿಯಾರ್ ನಂದಾವರ, ಅಬ್ದುಲ್ ಕರೀಂ ಸೂರಿಕುಮೇರು, ಎಸ್ ಆರ್ ಸುಲೈಮಾನ್ ಸೂರಿಕುಮೇರು, ಯೂಸುಫ್ ಹಾಜಿ ಸೂರಿಕುಮೇರು, ಸುಲೈಮಾನ್ ನೆಲ್ಲಿ, ಅಬ್ದುಲ್ ಖಾದರ್ ಬರಿಮಾರು, ಫಾರೂಕ್ ಶೂಪ್ಯಾಲೇಸ್ ಸೂರಿಕುಮೇರು, ಮನ್ಸೂರ್ ಕಲ್ಲಡ್ಕ , ಸಿರಾಜ್ ಆಲಂಪಾಡಿ, ಹಾರಿಸ್ ಆಲಂಪಾಡಿ, ಮುಂತಾದವರು ಉಪಸ್ಥಿತರಿದ್ದರು.
ಸಲೀಂ ಮಾಣಿ ಸ್ವಾಗತಿಸಿದರು, ಅಕ್ಬರ್ ಮದನಿ ಆಲಂಪಾಡಿ ಧನ್ಯವಾದಗೈದರು.
















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ