ಮಾಣಿ : ಸುನ್ನೀ ಯುವಜನ ಸಂಘ ಎಸ್ವೈಎಸ್ ಮಾಣಿ ಸರ್ಕಲ್ ಇದರ ವತಿಯಿಂದ ವ್ಯಾಪ್ತಿಯ ಎಲ್ಲಾ ಯುನಿಟ್ ಗಳ ಕಾರ್ಯಕರ್ತರು ಗಿಡ ನೆಡುವ ಮೂಲಕ ಪರಿಸರ ದಿನಾಚರಣೆ ಮಾಡಲು ಕರೆ ಕೊಡುವುದರೊಂದಿಗೆ ಶೇರಾ ಬುಡೋಳಿ ಖಿಳ್ರ್ ಜುಮ್ಮಾ ಮಸೀದಿಯ ವಠಾರದಲ್ಲಿ ವಿಶ್ವ ಪರಿಸರ ದಿನಾಚರಣೆ ನಡೆಸಲಾಯಿತು,ಕರ್ನಾಟಕ ಮುಸ್ಲಿಂ ಜಮಾಅತ್ ಮಾಣಿ ಸರ್ಕಲ್ ನಾಯಕರುಗಳಾದ ಶೇರಾ ಇಬ್ರಾಹಿಂ ಹಾಜಿ ಹಾಗೂ ಹಬೀಬ್ ಶೇರಾ ಗಿಡ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು,.
ಎಸ್ವೈಎಸ್ ಮಾಣಿ ಸರ್ಕಲ್ ಅದ್ಯಕ್ಷ ಹೈದರ್ ಸಖಾಫಿ ಶೇರಾ ದುಆ ಮಾಡಿದರು,ಪ್ರಧಾನ ಕಾರ್ಯದರ್ಶಿ ಸಲೀಂ ಮಾಣಿ ಪರಿಸರ ದಿನಾಚರಣೆಯ ಬಗ್ಗೆ ಮದ್ರಸಾ ವಿದ್ಯಾರ್ಥಿಗಳಿಗೆ ವಿಷಯ ಮಂಡಿಸಿ ರಸ್ತೆಗಳ ನಿರ್ಮಾಣ ಕಟ್ಟಡ ನಿರ್ಮಾಣ ಮುಂತಾದ ಕಾರಣಗಳಿಗಾಗಿ ಇಂದು ಮರ ಗಿಡಗಳನ್ನು ಕತ್ತರಿಸಿ ಪರಿಸರವನ್ನು ಹಾಳು ಮಾಡಿರುವುದರಿಂದ ಪಕೃತಿಯ ತಂಪಾದ ಗಾಳಿ ನೆರಳು ಲಭಿಸದೆ ಎಸಿ ಕೂಲರ್ ಫ್ಯಾನ್ ಮುಂತಾದ ಯಂತ್ರಗಳ ಮೊರೆ ಹೋಗಿಯೂ ನೆಮ್ಮದಿ ಸಿಗದೇ ಮನುಷ್ಯ ಚಡಪಡಿಸುತ್ತಿರುವುದು ಕಾಣಬಹುದಾಗಿದೆ,ಆದ್ದುದ್ದರಿಂದ ಹಳೆಯ ಸನ್ನಿವೇಶಗಳನ್ನು ಮತ್ತೆ ಉಂಟು ಮಾಡಲು ಗಿಡಗಳನ್ನು ನೆಡುತ್ತಾ ತಂಪಾದ ಗಾಳಿ ನೆರಳು ಪಡೆಯುವಲ್ಲಿ ಎಲ್ಲರೂ ಕೈ ಜೋಡಿಸಬೇಕು ಎಂದರು,ಪರಿಸರ ದಿನಾಚರಣೆಯ ಪ್ರಯುಕ್ತ ಮದ್ರಸಾ ಮಕ್ಕಳಿಗೆ ಸಿಹಿತಿಂಡಿ ವಿತರಿಸಲಾಯಿತು.
















ಇನ್ನಷ್ಟು ಸುದ್ದಿಗಳು
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ