janadhvani

Kannada Online News Paper

ಕೊಣಾಜೆ ಸೆಕ್ಟರ್ ; ಮಸ್‌ಊಲಿಯ್ಯ ಕ್ಯಾಂಪ್

ಕೊಣಾಜೆ; ಎಸ್ಸೆಸ್ಸೆಫ್ ಕೊಣಾಜೆ ಸೆಕ್ಟರ್ ವತಿಯಿಂದ ಯೂನಿಟ್ ನಾಯಕರಿಗಾಗಿ ನಡೆಸಲಾದ ‘ಮಸ್‌ಊಲಿಯ್ಯ ಕ್ಯಾಂಪ್’ ಸೆಕ್ಟರ್ ಅಧ್ಯಕ್ಷರಾದ ಅಬೂಸ್ವಾಲಿಹ್ ಫಜೀರ್ ರವರ ಅಧ್ಯಕ್ಷತೆಯಲ್ಲಿ ಫಜೀರ್ ತಝ್ಕಿಯತುಲ್ ವಿಲ್‌ದಾನ್ ಮದ್ರಸಾ ಹಾಲ್‌ನಲ್ಲಿ ನಡೆಯಿತು.

ಮಿಅ್ರಾಜ್ ಇಫ್ತಾರಿನೊಂದಿಗೆ ಆರಂಭಗೊಂಡ ಕಾರ್ಯಕ್ರಮವನ್ನು ಮುಡಿಪು ಡಿವಿಶನ್ ಕಾರ್ಯದರ್ಶಿ ಶರೀಫ್ ಪಾಣೇಲ ಉದ್ಘಾಟಿಸಿದರು. ನಿಝಾರ್ ಸಹದಿ ದುಆಗೈದರು. ಸಂಪನ್ಮೂಲ ವ್ಯಕ್ತಿಗಳಾಗಿ ಮುಡಿಪು ಡಿವಿಶನ್ ಅಧ್ಯಕ್ಷ ಮನ್ಸೂರ್ ಹಿಮಮಿ, ಎಸ್.ವೈ.ಎಸ್ ರಾಜ್ಯ ಕಾರ್ಯದರ್ಶಿ ಜಿ.ಎಂ.ಕಾಮಿಲ್ ಸಖಾಫಿ ಪೆರ್ನೆ ತರಗತಿ ಮಂಡಿಸಿದರು.

ತೌಸೀಫ್ ಸ‌ಅದಿ ಹರೇಕಳ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮುಸ್ಲಿಂ ಜಮಾಅತ್ ಕೊಣಾಜೆ ಸರ್ಕಲ್ ಕೋಶಾಧಿಕಾರಿ ರಝಾಕ್ ಹಾಜಿ ಮಲಾರ್, ಮುಸ್ಲಿಂ ಜಮಾಅತ್ ಹರೇಕಳ ಸರ್ಕಲ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಫರೀದ್‌ನಗರ, ಎಸ್‌.ವೈ.ಎಸ್ ಕೊಣಾಜೆ ಸರ್ಕಲ್ ಕೋಶಾಧಿಕಾರಿ ಇಸ್ಮಾಈಲ್ ಗ್ರಾಮಚಾವಡಿ, ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಫಜೀರ್, ದ‌ಅ್‌ವಾ ಕಾರ್ಯದರ್ಶಿ ಅಲ್ತಾಫ್ ಫಾಳಿಲಿ ಇನೋಳಿ, ಜಿಲ್ಲಾ ಕ್ಯಾಂಪಸ್ ಕನ್ವೀನರ್ ಉಬೈದುಲ್ಲಾ ಆರ್ ಜಿ ನಗರ, ಡಿವಿಶನ್ ನಾಯಕ ಮುನೀರ್ ಬೈತಾರ್, ಎಸ್ಸೆಸ್ಸೆಫ್ ಹರೇಕಳ ಸೆಕ್ಟರ್ ಅಧ್ಯಕ್ಷ ಮುಸ್ತಫಾ ತೋಕರಬೆಟ್ಟು, ಪ್ರಧಾನ ಕಾರ್ಯದರ್ಶಿ ರಮೀಝ್ ಆಲಡ್ಕ, ಮಾಜಿ ಪ್ರಧಾನ ಕಾರ್ಯದರ್ಶಿ ಸಲಾಮ್ ಆಲಡ್ಕ ಇನ್ನಿತರ ನಾಯಕರು ಉಪಸ್ಥಿತರಿದ್ದರು.

ಇಕ್ಬಾಲ್ ಮದನಿ ಸ್ವಾಗತಿಸಿ, ಇಜಾಝ್ ಫಜೀರ್ ಕಾರ್ಯಕ್ರಮ ನಿರೂಪಿಸಿದರು.