ಅಬುಧಾಬಿ: ಫೋನ್ ವಂಚಕರಾದ ಹನ್ನೊಂದು ಮಂದಿಗಳ ತಂಡವನ್ನು ಪೊಲೀಸರು ಬಂಧಿಸಿದ್ದಾರೆ.ಅಬುಧಾಬಿ-ದುಬೈ ಕಾರ್ಯಪಡೆಗಳ ಜಂಟಿ ಕಾರ್ಯಾಚರಣೆಯಿಂದ ಈ ಬಂಧನ ನಡೆದಿದೆ.
ಏಷ್ಯಾ ಮೂಲದವರಾದ ಕದೀಮರು ಹೆಚ್ಚಾಗಿ ಯುಎಇ ದೇಶಿಯರನ್ನು ನಿರಂತರವಾಗಿ ವಂಚಿಸುತ್ತಿದ್ದರು.ಬೃಹತ್ ಬಹುಮಾನಗಳು ಲಭಿಸಿರುವ ಸಂದೇಶದೊಂದಿಗೆ ಹಗರಣ ಪ್ರಾರಂಭವಾಗುತ್ತದೆ. ಹಣವನ್ನು ಕಳುಹಿಸಲು ನಂತರ ಬ್ಯಾಂಕ್‌ನ ಮಾಹಿತಿಯನ್ನು ಕೇಳಲಾಗುತ್ತದೆ. ಉಡುಗೊರೆಯ ಆಸೆಯಿಂದ ಮಾಹಿತಿ ನೀಡಿದಾಗ ತಂಡವು ಬ್ಯಾಂಕ್ ಖಾತೆ ಮಾಹಿತಿಯನ್ನು ಬಳಸಿ ಹಣವನ್ನು ಲಪಟಾಯಿಸಲಾಗುತ್ತದೆ.
ಇಂತಹ ಘಟನೆಗಳ ಬಗ್ಗೆ ಅನೇಕ ಕುಟುಂಬಗಳು ದೂರು ನೀಡಿದ್ದಾರೆ ಮತ್ತು ಪ್ರತಿಯೊಬ್ಬರೂ ಇದೇ ಶೈಲಿಯಲ್ಲಿ ವಂಚಿಸಲ್ಪಟ್ಟಿದ್ದಾರೆ ಎಂದು ಅಲ್ ಐನ್ ಪೋಲಿಸ್ ನಿರ್ದೇಶನಾಲಯದ ನಿರ್ದೇಶಕ ಕರ್ನಲ್ ಮುಬಾರಕ್ ಸೈಫ್ ಅಲ್-ಸಬೂಸಿ ಹೇಳಿದರು.
ಆರೋಪಿಗಳಿಂದ ಕ್ರೆಡಿಟ್ ಕಾರ್ಡ್, ಬ್ಯಾಂಕ್ ನೋಟ್, ಚೆಕ್ ಬುಕ್, ಸಿಮ್ ಕಾರ್ಡ್ ಮತ್ತು ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಹಲವಾರು ಸವಾಲುಗಳನ್ನು ಎದುರಿಸಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ ಎಂದಿದ್ದಾರೆ.ಈ ರೀತಿಯ ವಂಚನೆಗಳನ್ನು ಜನರಿಗೆ ಮನವರಿಕೆ ಮಾಡುವಂತಹ ಕಾರ್ಯಕ್ರಮಗಳು ಮುಂದುವರಿಯುತ್ತಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.