✍️ಅಶ್ರಫ್ ಸಅದಿ ಮಲ್ಲೂರು
(ವರ್ಕಿಂಗ್ ಕನ್ವೀನರ್: SჄS-30 ನಿರ್ವಹಣಾ ಸಮಿತಿ)
ನಾಳೆ (ಜ.24) ಶಿವಮೊಗ್ಗ ಫಲಕ್ ಪ್ಯಾಲೇಸ್‌ನಲ್ಲಿ ನಡೆಯುವ SჄS ನ ಮೂವತ್ತನೇ ವರ್ಷಾಚರಣೆಯ ಉಧ್ಘಾಟನಾ ವೇದಿಕೆಯಲ್ಲಿ ಪ್ರಥಮ “ಡಾ. ಎಸ್.ಅಬ್ದುಲ್ ರಹ್ಮಾನ್ ಇಂಜಿನಿಯರ್ ಅವಾರ್ಡ್”ಅನ್ನು ಖ್ಯಾತ ಉದ್ಯಮಿ, ಧಾರ್ಮಿಕ ಮುಂದಾಳು ಸಾಗರ ಮುಹಮ್ಮದ್ ಹಾಜಿ ಅವರಿಗೆ ಪ್ರದಾನ ಮಾಡಲಾಗುವುದು.

ಸಾಗರ್ ಮುಹಮ್ಮದ್ ಹಾಜಿ
ಈ ಹೆಸರು ಕೇಳದ ಮುಸ್ಲಿಮರು ಕನ್ನಡ ನಾಡಿನಲ್ಲಿ ವಿರಳ. ಹುಟ್ಟೂರು ಮಂಗಳೂರು ಆದರೂ ಉದ್ಯಮವನ್ನು ವಿವಿಧ ಕಡೆಗಳಿಗೆ ಹರಡಿ ಶಿವಮೊಗ್ಗ ಜಿಲ್ಲೆಯ ಸಾಗರದ ಹೆಸರಿನಲ್ಲಿ ಪ್ರಸಿದ್ಧರಾದವರು. ಉದ್ಯಮದ ಜೊತೆ ಧಾರ್ಮಿಕ ಮತ್ತು ಸಾಮಾಜಿಕ ಸೇವೆಯಿಂದ ಜನಪ್ರಿಯರಾದರು.
ಉದಾರ ಮನಸ್ಸಿನಿಂದ ಪ್ರಚಾರದ ಬಯಕೆ ಇಲ್ಲದೆ ಬಲಗೈ ಕೊಟ್ಟರೆ ಎಡಗೈ ತಿಳಿಯದಂತೆ ಕೊಡುವ ಕೊಡುಗೈ ದಾನಿ. ಸಿದ್ಧಾಂತದಲ್ಲಿ ಅಪ್ಪಟ ಸುನ್ನಿ. ಆ ವಿಷಯದಲ್ಲಿ ಯಾವತ್ತಿಗೂ ಯಾರೊಂದಿಗೂ ರಾಜಿ ಇಲ್ಲದ ವ್ಯಕ್ತಿ. ಸುನ್ನೀ ಉಲಮಾ ಸಾದಾತುಗಳೆಂದರೆ ಅತೀವ ಪ್ರೀತಿ, ಗೌರವ. ತನ್ನ ಮಕ್ಕಳಲ್ಲಿ ಒಬ್ಬನನ್ನು ಆಲಿಂ ಮಾಡಲು ಮುಂದಾಗುವ ಮೂಲಕ ತನ್ನ ಉಲಮಾ ಗೌರವವನ್ನು ಪ್ರಾಯೋಗಿಕವಾಗಿಯೂ ತೋರಿಸಿಕೊಟ್ಟಿದ್ದಾರೆ. ಎಷ್ಟೇ ಒತ್ತಡಗಳಿದ್ದರೂ ನಮಾಜಿನ ಸಮಯವಾದಾಗ ಜಮಾಅತ್ ನಲ್ಲಿ ಸೇರಿಕೊಂಡೇ ನಿರ್ವಹಿಸಲು ಅವರು ತೋರುವ ಉತ್ಸಾಹ ಅವರ ದೀನೀ ಪ್ರಜ್ಞೆಗೊಂದು ಸಾಕ್ಷಿ.
ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘದ ಪ್ರಥಮ ಪ್ರಧಾನ ಕಾರ್ಯದರ್ಶಿ ಡಾ. ಪ್ರೊಫೆಸರ್ ಎಸ್ ಅಬ್ದುಲ್ ರಹ್ಮಾನ್ ಇಂಜಿನಿಯರ್ ಅವರ ಹೆಸರಲ್ಲಿ ಎಸ್‌ವೈಎಸ್ ನೀಡುತ್ತಿರುವ ಪ್ರಥಮ ಪುರಸ್ಕಾರಕ್ಕೆ ಸಾಗರ್ ಮುಹಮ್ಮದ್ ಹಾಜಿ ಇವರನ್ನು ಆರಿಸಿರುವುದು ಅತ್ಯಂತ ಅರ್ಹ ಸಂಗತಿ. ಅಲ್ಲಾಹು ಅವರನ್ನು ಇನ್ನಷ್ಟು ಎತ್ತರಕ್ಕೇರಿಸಲಿ ಎಂದು ಪ್ರಾರ್ಥಿಸುತ್ತೇನೆ.
















ಇನ್ನಷ್ಟು ಸುದ್ದಿಗಳು
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್‌ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
“ನಾವು ಭಾರತೀಯರೆಂದು ಹೇಳಿರಲಿಲ್ಲವೇ?”- ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದ್ದ ಕುಟುಂಬಗಳು ವಾಪಸ್