janadhvani

Kannada Online News Paper

ಸಾಗರ ಮುಹಮ್ಮದ್ ಹಾಜಿಗೆ “ಡಾ. ಎಸ್.ಅಬ್ದುಲ್ ರಹ್ಮಾನ್ ಅವಾರ್ಡ್” – ಅರ್ಹತೆಗೆ ಸಂದ ಗೌರವ

✍️ಅಶ್ರಫ್ ಸಅದಿ ಮಲ್ಲೂರು
(ವರ್ಕಿಂಗ್ ಕನ್ವೀನರ್: SჄS-30 ನಿರ್ವಹಣಾ ಸಮಿತಿ)

ನಾಳೆ (ಜ.24) ಶಿವಮೊಗ್ಗ ಫಲಕ್ ಪ್ಯಾಲೇಸ್‌ನಲ್ಲಿ ನಡೆಯುವ SჄS ನ ಮೂವತ್ತನೇ ವರ್ಷಾಚರಣೆಯ ಉಧ್ಘಾಟನಾ ವೇದಿಕೆಯಲ್ಲಿ ಪ್ರಥಮ “ಡಾ. ಎಸ್.ಅಬ್ದುಲ್ ರಹ್ಮಾನ್ ಇಂಜಿನಿಯರ್ ಅವಾರ್ಡ್”ಅನ್ನು ಖ್ಯಾತ ಉದ್ಯಮಿ, ಧಾರ್ಮಿಕ ಮುಂದಾಳು ಸಾಗರ ಮುಹಮ್ಮದ್ ಹಾಜಿ ಅವರಿಗೆ ಪ್ರದಾನ ಮಾಡಲಾಗುವುದು.

ಸಾಗರ್ ಮುಹಮ್ಮದ್ ಹಾಜಿ
ಈ ಹೆಸರು ಕೇಳದ ಮುಸ್ಲಿಮರು ಕನ್ನಡ ನಾಡಿನಲ್ಲಿ ವಿರಳ. ಹುಟ್ಟೂರು ಮಂಗಳೂರು ಆದರೂ ಉದ್ಯಮವನ್ನು ವಿವಿಧ ಕಡೆಗಳಿಗೆ ಹರಡಿ ಶಿವಮೊಗ್ಗ ಜಿಲ್ಲೆಯ ಸಾಗರದ ಹೆಸರಿನಲ್ಲಿ ಪ್ರಸಿದ್ಧರಾದವರು. ಉದ್ಯಮದ ಜೊತೆ ಧಾರ್ಮಿಕ ಮತ್ತು ಸಾಮಾಜಿಕ ಸೇವೆಯಿಂದ ಜನಪ್ರಿಯರಾದರು.

ಉದಾರ ಮನಸ್ಸಿನಿಂದ ಪ್ರಚಾರದ ಬಯಕೆ ಇಲ್ಲದೆ ಬಲಗೈ ಕೊಟ್ಟರೆ ಎಡಗೈ ತಿಳಿಯದಂತೆ ಕೊಡುವ ಕೊಡುಗೈ ದಾನಿ. ಸಿದ್ಧಾಂತದಲ್ಲಿ ಅಪ್ಪಟ ಸುನ್ನಿ. ಆ ವಿಷಯದಲ್ಲಿ ಯಾವತ್ತಿಗೂ ಯಾರೊಂದಿಗೂ ರಾಜಿ ಇಲ್ಲದ ವ್ಯಕ್ತಿ. ಸುನ್ನೀ ಉಲಮಾ ಸಾದಾತುಗಳೆಂದರೆ ಅತೀವ ಪ್ರೀತಿ, ಗೌರವ. ತನ್ನ ಮಕ್ಕಳಲ್ಲಿ ಒಬ್ಬನನ್ನು ಆಲಿಂ ಮಾಡಲು ಮುಂದಾಗುವ ಮೂಲಕ ತನ್ನ ಉಲಮಾ ಗೌರವವನ್ನು ಪ್ರಾಯೋಗಿಕವಾಗಿಯೂ ತೋರಿಸಿಕೊಟ್ಟಿದ್ದಾರೆ. ಎಷ್ಟೇ ಒತ್ತಡಗಳಿದ್ದರೂ ನಮಾಜಿನ ಸಮಯವಾದಾಗ ಜಮಾಅತ್ ನಲ್ಲಿ ಸೇರಿಕೊಂಡೇ ನಿರ್ವಹಿಸಲು ಅವರು ತೋರುವ ಉತ್ಸಾಹ ಅವರ ದೀನೀ ಪ್ರಜ್ಞೆಗೊಂದು ಸಾಕ್ಷಿ.

ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘದ ಪ್ರಥಮ ಪ್ರಧಾನ ಕಾರ್ಯದರ್ಶಿ ಡಾ. ಪ್ರೊಫೆಸರ್ ಎಸ್ ಅಬ್ದುಲ್ ರಹ್ಮಾನ್ ಇಂಜಿನಿಯರ್ ಅವರ ಹೆಸರಲ್ಲಿ ಎಸ್‌ವೈಎಸ್ ನೀಡುತ್ತಿರುವ ಪ್ರಥಮ ಪುರಸ್ಕಾರಕ್ಕೆ ಸಾಗರ್ ಮುಹಮ್ಮದ್ ಹಾಜಿ ಇವರನ್ನು ಆರಿಸಿರುವುದು ಅತ್ಯಂತ ಅರ್ಹ ಸಂಗತಿ. ಅಲ್ಲಾಹು ಅವರನ್ನು ಇನ್ನಷ್ಟು ಎತ್ತರಕ್ಕೇರಿಸಲಿ ಎಂದು ಪ್ರಾರ್ಥಿಸುತ್ತೇನೆ.

error: Content is protected !! Not allowed copy content from janadhvani.com