ಮಂಗಳೂರು: ಇತ್ತೀಚೆಗಷ್ಟೇ ಪ್ರವೀಣ್ ತೊಗಾಡಿಯಾ ಮುಸ್ಲಿಮ್ ಹೊರತಾದ ಸಂವಿಧಾನದ ಬಗ್ಗೆ ಹೇಳಿಕೆ ಕೊಟ್ಟು ನಗೆಪಾಟಲಿಗೀಡಾದ ಬೆನ್ನಿಗೇ,ಮಂಗಳೂರಿನ ಕದ್ರಿ ಕ್ಷೇತ್ರದ ಜಾತ್ರೆಯ ಹೊರಾಂಗಣದಲ್ಲಿ ಸಂಘ ಪರಿವಾರವು ಮುಸ್ಲಿಮ್ ವರ್ತಕರಿಗೆ ನಿಷೇಧದ ಫಲಕ ಅಳವಡಿಸಿದೆ!.ಸಂಘ ಪರಿವಾರ ಇನ್ನೂ ಕೂಡಾ ತನ್ನ ಎಂದಿನ ಚಾಳಿಯಾದ ಮುಸ್ಲಿಮ್ ವರ್ತಕರ ಬಹಿಷ್ಕಾರ ವನ್ನು ತ್ಯಜಿಸಿದಂತೆ ಕಾಣುತ್ತಿಲ್ಲ!.
ದ.ಕ ಜಿಲ್ಲೆ ಸೇರಿದಂತೆ ರಾಜ್ಯದ ಇತರೆಡೆ ವ್ಯಾಪಾರ ವಹಿವಾಟು ನಡೆಸುವ ಸಂಘ ಪರಿವಾರದ ಪೋಷಕ ವರ್ತಕರು, ಉದ್ಯಮಿಗಳು ಸಾಧ್ಯವಾದರೆ ತಮ್ಮ ಮಳಿಗೆಗಳಿಗೆ ಮುಸ್ಲಿಮ್ ಗ್ರಾಹಕರನ್ನು ಬಹಿರಂಗವಾಗಿ ನಿಷೇಧಿಸುವ ಫಲಕಗಳನ್ನು ಅಳವಡಿಸಲಿ! ಎಂದು ಮುಸ್ಲಿಂ ಒಕ್ಕೂಟದ ಅಧ್ಯಕ್ಷರಾದ ಕೆ.ಅಶ್ರಫ್ ಅವರು ಸವಾಲು ಹಾಕಿದ್ದಾರೆ.
ಬೀದಿ ವ್ಯಾಪಾರವನ್ನೇ ತಲೆಮಾರುಗಳಿಂದ ನಂಬಿ ಬಂದಿರುವ ಬೀದಿ ವರ್ಥಕರನ್ನು ನಿಷೇಧಿಸುವ ಚಾಳಿಯನ್ನು ಬದಿಗಿಟ್ಟು, ಉದ್ಯಮ ಬಹಿಷ್ಕಾರವನ್ನು ಪ್ರೋತ್ಸಾಹಿಸಿ, ರಾಜಕೀಯ ಮತ ದ್ರುವೀಕರಣ ಮಾಡುತ್ತಿರುವ ಸಂಘದ ಇತರ ಉದ್ಯಮಿಗಳಿಗೆ, ಮುಸ್ಲಿಮ್ ಗ್ರಾಹಕ ರಹಿತ ವ್ಯವಸ್ಥೆ ಏನೆಂದು ಆಗ ಅರಿವಾಗುವ ಸಾದ್ಯತೆ ಅಧಿಕ.
ಈ ದೇಶದಲ್ಲಿ ಅನಾದಿ ಕಾಲದಿಂದಲೂ ಕೊಡು, ಕೊಳ್ಳುವಿಕೆಯ ಪ್ರಭಲ ಸಂಸ್ಕೃತಿ ಯಿಂದಾಗಿ ಆರ್ಥಿಕ ವ್ಯವಹಾರ ನೆಲೆ ನಿಂತಿದೆ. ಮುಸ್ಲಿಮರೊಂದಿಗೆ ವ್ಯವಹಾರ ನಿಲ್ಲಿಸುವುದು, ಉಪವಾಸ ಇರುವುದು ಎರಡೂ ಒಂದೇ ಎಂಬ ಸ್ಥಿತಿಗೆ ತಳ್ಳುವಂತಾಗದಿರಲಿ ಎಂದು ಕೆ.ಅಶ್ರಫ್( ಮಾಜಿ ಮೇಯರ್)
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ತಾಕೀತು ನೀಡಿದರು.
















ಇನ್ನಷ್ಟು ಸುದ್ದಿಗಳು
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ
ಸ್ಕಾಯ್ ಕರಾಟೆಯಲ್ಲಿ ಫಾತಿಮತ್ ರಿಫಾತ್ಗೆ ಚಿನ್ನದ ಪದಕ
ಶೈಖ್ ಅಬೂಬಕ್ಕರ್ ಅಹ್ಮದ್ ಮುಸ್ಲಿಯಾರ್- ಜಗತ್ತು ಕಂಡ ಆಧುನಿಕ ದಾರ್ಶನಿಕ ನಾಯಕ
ಸೌಹಾರ್ದ ಹಾಗೂ ಸಾಮರಸ್ಯದ ಸಂಗಮಕ್ಕೆ ಸಾಕ್ಷಿಯಾದ ಬಳಕುಂಜೆ