ಮಹಿಳೆಯರ ಧಾರ್ಮಿಕ ಶಿಕ್ಷಣ ಮತ್ತು ವಿವಿಧ ತರಬೇತಿಗಳಿಗಾಗಿ ರೂಪಿಸಲ್ಪಟ್ಟ ‘ವಿಮೆನ್ಸ್ ಇಸ್ಲಾಮಿಕ್ ಎಜುಕೇಶನ್ ಕೌನ್ಸಿಲ್ (ರಿ)’ ಇದರ ಸಾಕ್ಷ್ಯಚಿತ್ರದ ಬಿಡುಗಡೆ ಕಾರ್ಯಕ್ರಮವು ಸೌದಿ ಅರೇಬಿಯಾದ ಜುಬೈಲ್ ಕೆಸಿಎಫ್ ಸಭಾಂಗಣದಲ್ಲಿ ನಡೆಯಿತು.
ಮಂಗಳೂರು ಕೇಂದ್ರವಾಗಿ ಕಾರ್ಯಾಚರಣೆ ಮಾಡುವ ಕೌನ್ಸಿಲ್ನ ವತಿಯಿಂದ ಮಹಿಳಾ ಶರೀಅತ್ ಕಾಲೇಜುಗಳ ಪಠ್ಯ ಪುಸ್ತಕ ಹಾಗೂ ಟ್ರೈನಿಂಗ್ ಅಲ್ಲದೆ ಆನ್ಲೈನ್ ಇಸ್ಲಾಮೀ ಶಿಕ್ಷಣ ನೀಡುವ ‘ಖಮರಿಯಾ ಕೋರ್ಸ್’, ಖುರ್ಆನ್ ಪಾರಾಯಣ ತರಬೇತಿ ನೀಡುವ ‘ಅಲ್ ಮುಜವ್ವಿದಾ’ ಕೋರ್ಸ್ಗಳನ್ನೂ ನಡೆಸಲಾಗುತ್ತದೆ.
ಮರ್ಕಝುಲ್ ಹುದಾ ಮಹಿಳಾ ಕಾಲೇಜು ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಹಾಜಿ ಮುಹಮ್ಮದ್ ಫಾರೂಖ್ ಕನ್ಯಾನ ಡಾಕ್ಯುಮೆಂಟರಿ ಬಿಡುಗಡೆ ಮಾಡಿದರು.
‘ವಿಮೆನ್ಸ್ ಇಸ್ಲಾಮಿಕ್ ಎಜುಕೇಶನ್ ಕೌನ್ಸಿಲ್’ ಅಧ್ಯಕ್ಷ ಡಾ.ಎಮ್ಮೆಸ್ಸೆಂ ಝೈನೀ ಕಾಮಿಲ್, ಕೆಸಿಎಫ್ ಜುಬೈಲ್ ಝೋನ್ ಅಧ್ಯಕ್ಷ ಅಬ್ದುಲ್ ಅಝೀಝ್ ಸಅದಿ ಕುಡ್ತಮುಗೇರು,ಮರ್ಕಝುಲ್ ಹುದಾ ಸೌದಿ ಅರೇಬಿಯಾದ ಮುಖಂಡರಾದ ನೌಶಾದ್ ಪೋಲ್ಯ, ಅಬ್ದುಲ್ ಹಮೀದ್ ಅರಮೆಕ್ಸ್,ಶಂಸುದ್ದೀನ್ ಬೈರಿಕಟ್ಟೆ,ಮುಹಮ್ಮದ್ ಅಲಿ ನೆಕ್ಕಿಲಾಡಿ,ಡಿಕೆಎಸ್ಸಿ ಸಂಚಾಲಕ ಇಸ್ಮಾಯಿಲ್ ಮುಸ್ಲಿಯಾರ್ ಮುಂತಾದವರು ಭಾಗವಹಿಸಿದರು.
ಕೆಸಿಎಫ್ ಅಂತಾರಾಷ್ಟ್ರೀಯ ಮುಖಂಡರಾದ ಹಾಜಿ ಅಬೂಬಕರ್ ರೈಸ್ಕೋ, ಖಮರುದ್ದೀನ್ ಗೂಡಿನಬಳಿ ಶುಭ ಹಾರೈಸಿದರು
ಖಮರಿಯಾ ಅಕಾಡೆಮಿ ಹಳೆ ವಿದ್ಯಾರ್ಥಿನಿ ಹನಾನ ಅಬೂಬಕರ್ ಅಲ್ ಖಮರಿಯಾ ರೈಸ್ಕೋ ಈ ಸಾಕ್ಷ್ಯಚಿತ್ರ ನಿರ್ಮಿಸಿದ್ದಾರೆ.
ಕಾರ್ಯಕ್ರಮದಲ್ಲಿ ಅಬ್ದುಲ್ ರಶೀದ್ ಸಖಾಫಿ ಮಿತ್ತೂರು ಸ್ವಾಗತಿಸಿ ರಫೀಖ್ ಶಿಬರೂರು ಧನ್ಯವಾದ ಸಲ್ಲಿಸಿದರು.
















ಇನ್ನಷ್ಟು ಸುದ್ದಿಗಳು
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ
ಸುಳ್ಯ – ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ
ಉಳ್ತೂರು : ದರ್ಸ್ ವಾರ್ಷಿಕ ಮತ್ತು ಅನುಸ್ಮರಣೆ
ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
SSF ಬೆಂಗಳೂರು ಜಿಲ್ಲಾ ವಾರ್ಷಿಕ ಮಹಾಸಭೆ ಸಮಾಪ್ತಿ