ಕುವೈಟ್ :ಕೆಸಿಎಫ್ ಸೌತ್ ಝೋನ್ ಕುವೈಟ್ ವತಿಯಿಂದ ಮುಹಿಯುದ್ದೀನ್ ರಾತೀಬ್ ಆಲಪಾನೆ
ಶೈಖ್ ಜೀಲಾನಿ (ಖ. ಸಿ )ತಾಜುಲ್ ಉಲಮಾ, ನೂರುಲ್ ಉಲಮಾ ಶೈಖುಲ್ ಹದೀಸ್ ನೆಲ್ಲಿಕುತ್ತು ಇಸ್ಮಾಯಿಲ್ ಮುಸ್ಲಿಯಾರ್ ಅನುಸ್ಮರಣೆ ಕಾರ್ಯಕ್ರಮ ದಿನಾಂಕ 11/11/2022 ಫಹಾಹೀಲ್ ಕೆಸಿಎಫ್ ಕಛೇರಿಯಲ್ಲಿ ನಡೆಯಿತು.

ಸೌತ್ ಝೋನ್ ಅಧ್ಯಕ್ಷ ಜನಾಬ್ ಎಸ್ ಎಂ ಉಮರಬ್ಬ ಕೊಳಕೆ ರವರ ಅಧ್ಯಕ್ಷತೆಯಲ್ಲಿ ಬಹುಮಾನ್ಯ ಸಾಹುಲ್ ಹಮೀದ್ ಸಅದಿ ಝುಹುರಿ ಉಸ್ತಾದ್ ರವರ ದುವಾ ದೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿದ್ದು ಸೌತ್ ಝೋನ್ ಕಾರ್ಯದರ್ಶಿ ಜನಾಬ್ ಮುನೀರ್ ಕಾರ್ಕಳ ಸ್ವಾಗತ ಮಾಡಿ ಮುಹಿಯದ್ದೀನ್ ರಾತೀಬ್ ಆಲಪಾನೆ ಯನ್ನು ಬಹುಮಾನ್ಯ ಸಾಹುಲ್ ಹಮೀದ್ ಸಅದಿ ಝುಹುರಿ ಉಸ್ತಾದರ ಸಮ್ಮುಖದಲ್ಲಿ ನೆರವೇರಿತು.


ಕೆಸಿಎಫ್ ಕುವೈಟ್ ರಾಷ್ಟ್ರೀಯ ಸಮಿತಿಯ ಶಿಕ್ಷಣ ಅಧ್ಯಕ್ಷ ಬಹುಮಾನ್ಯ ಬಾದುಷಾ ಸಖಾಫಿ ಉದ್ಘಾಟನೆ ಭಾಷಣಗೈದು, ಆಶಂಸ ಭಾಷಣ ವನ್ನು ಕೆಸಿಎಫ್ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಜನಾಬ್ ಯಾಕೂಬ್ ಕಾರ್ಕಳ, ಕೆಸಿಎಫ್ ನೋರ್ತ್ ಝೋನ್ ಅಧ್ಯಕ್ಷ ಜನಾಬ್ ಖಲಂದರ್ ಶಾಫಿಗೈದರು ಅದೇ ರೀತಿ ರಾಷ್ಟ್ರೀಯ ಸಮಿತಿ ಪಬ್ಲಿಕೇಶನ್ ವಿಭಾಗದ ಅಧ್ಯಕ್ಷ ಬಹುಮಾನ್ಯ ಸಾಹುಲ್ ಹಮೀದ್ ಸಅದಿ ಝುಹುರಿರವರು ಮುಹಿ ಯದ್ದಿನ್ ಶೈಖ್ ರವರ ಚರಿತ್ರೆ ಬಗ್ಗೆ ಸವಿವಿವರವಾಗಿ ತಿಳಿಸಿದರು.
ಅದೇ ರೀತಿ ಕಾರ್ಯಕ್ರಮದಲ್ಲಿ ಕೆಸಿಎಫ್ ರಾಷ್ಟ್ರೀಯ ಸಮಿತಿಯ ಫೈನಾನ್ಸ್ ಕಂಟ್ರೋಲರ್ ಹಾಜಿ ಮೂಸ ಇಬ್ರಾಹಿಂ, ಆಡಳಿತ ವಿಭಾಗ ಅಧ್ಯಕ್ಷ ಜನಾಬ್ ಅಬ್ಬಾಸ್ ಬಳಂಜ,ಸಾಂತ್ವನ ವಿಭಾಗದ ಅಧ್ಯಕ್ಷ ಜನಾಬ್ ಇಕ್ಬಾಲ್ ಕಂದಾವರ ಸಂಘಟನಾ ಕಾರ್ಯದರ್ಶಿ ಜನಾಬ್ ಅಹ್ಮದ್ ಸಮೀರ್ ಕೆಸಿರೋಡ್, ಪಬ್ಲಿಕೇಶನ್ ವಿಭಾಗ ಕಾರ್ಯದರ್ಶಿ ಜನಾಬ್ ಇಬ್ರಾಹಿಂ ವೇಣೂರು,ಸಾಂತ್ವನ ಕಾರ್ಯದರ್ಶಿ ಜನಾಬ್ ಅಬ್ದುಲ್ ಮಲಿಕ್ ಸೂರಿಂಜೆ,ಫಹಾಹಿಲ್ ಸೆಕ್ಟರ್ ಅಧ್ಯಕ್ಷ ಜನಾಬ್ ಇಬ್ರಾಹಿಂ ಅಡ್ಕಾರ್ ಬಾಯರ್ ಮುಜಮ್ಮು ಇದರ ಸಾರಥಿ ಜನಾಬ್ ಹೈದರ್ ಹಾಜಿ ಪಟ್ಟೋರಿ ಜಹರ ಸೆಕ್ಟರ್ ಅಧ್ಯಕ್ಷ ಜನಾಬ್ ಅಬ್ಬಾಸ್ ಪಾಳ್ಯ,ಮೆಹಬುಲ ಸೆಕ್ಟರ್ ಅಧ್ಯಕ್ಷ ಜನಾಬ್ ಸಂಶುದ್ದಿನ್ ಕುಂದಾಪುರ ಉಪಸ್ಥಿತರಿದ್ದರು.
ಕೊನೆಯಲ್ಲಿಕೆಸಿಎಫ್ INC ನಾಯಕ ಆಡಳಿತ ವಿಭಾಗದ ಕೊರ್ಡಿನೇಟರ್ ಬಹುಮಾನ್ಯ ಅಬ್ದುಲ್ ರಹ್ಮಾನ್ ಸಖಾಫಿ ಉಸ್ತಾದರ ನಸೀಹತ್ ಹಾಗೂ ದುವಾ ನಡೆಸಿ ಕೊಟ್ಟರು ಕಾರ್ಯಕ್ರಮ ದಲ್ಲಿ ರಾಷ್ಟ್ರೀಯ ಸಮಿತಿಯ ನಾಯಕರು ಝೋನ್ ನಾಯಕರು ಸೆಕ್ಟರ್ ನಾಯಕರು ಉಪಸ್ಥಿತಿರಿದ್ದರು ಅದೇ ರೀತಿ ಕೊನೆಯಲ್ಲಿ ಸೌತ್ ಝೋನ್ ಸಂಘಟನಾ ಅಧ್ಯಕ್ಷ ಸಂಸುಂದ್ದಿನ್ ಬೆಜ್ಜವಳ್ಳಿ ಧನ್ಯವಾದಗೈದು ಮೂರು ಸ್ವಲಾತ್ ನೊಂದಿಗೆ ಕಾರ್ಯಕ್ರಮ ಮುಕ್ತಾಯ ಗೊಂಡಿತು.
ವರದಿ: ಇಬ್ರಾಹಿಂ ವೇಣೂರು ಕುವೈಟ್
















ಇನ್ನಷ್ಟು ಸುದ್ದಿಗಳು
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
“ನಾವು ಭಾರತೀಯರೆಂದು ಹೇಳಿರಲಿಲ್ಲವೇ?”- ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದ್ದ ಕುಟುಂಬಗಳು ವಾಪಸ್
ಮದ್ರಸಾ ಅಧ್ಯಾಪಕರ ಮೇಲಿನ ಹಲ್ಲೆ ಅತ್ಯಂತ ಖಂಡನೀಯ- ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ SJM ಕಿನ್ನಿಗೋಳಿ ರೇಂಜ್ ಆಗ್ರಹ