ಮೂಡುಬಿದಿರೆ: ಅಲ್ ಮಫಾಝ್ ಮೂಡಬಿದ್ರೆ ಸಂಸ್ಥೆಯಿಂದ ಪ್ರಾಂತ್ಯ ಗ್ರಾಮದಲ್ಲಿ ನಿರ್ಮಿಸಲಾದ ಕಟ್ಟಡದ ಕಡಿತಗೊಳಿಸಿರುವ ವಿದ್ಯುತ್ ಸಂಪರ್ಕವನ್ನು ಪುನರ್ಜೋಡಿಸುವಂತೆ ಮೆಸ್ಕಾಂಗೆ ಉಚ್ಚನ್ಯಾಯಾಲಯ ಆದೇಶ ನೀಡಿದೆ.
ಪುರಸಭೆಯಿಂದ ಪರವಾನಿಗೆ ಪಡೆದು ಕಟ್ಟಡವನ್ನು ಕಟ್ಟಲಾಗಿತ್ತು,ಆ ಬಳಿಕ ಸದ್ರಿ ಕಟ್ಟಡವನ್ನು ವಾಣಿಜ್ಯ ಬಳಕೆಯ ಉದ್ದೇಶದಿಂದ ಕಾನೂನು ಪ್ರಕಾರವೇ ಪುರಸಭೆಗೆ ಮನವಿಯನ್ನು ಸಲ್ಲಿಸಲಾಗಿತ್ತು.ಆ ಸಂದರ್ಭದಲ್ಲಿ ಅಶಾಂತಿಯನ್ನು ಉಂಟು ಮಾಡುವ ಉದ್ದೇಶದಿಂದಲೇ ಕೆಲವರು ಆಕ್ಷೇಪವನ್ನು ಸಲ್ಲಿಸಿದ್ದರು. ಈ ಬಗ್ಗೆ ಪುರಸಭೆಯ ಕೌನ್ಸಿಲ್ ನಲ್ಲಿ ಮೀಟಿಂಗ್ ಹಂತದಲ್ಲಿ ಇರುವಾಗಲೇ ಒತ್ತಡಕ್ಕೆ ಮಣಿದು ಅಧಿಕಾರಿಗಳು ಅಲ್ ಮಫಾಝ್ ಗೆ ಯಾವುದೇ ಅವಕಾಶವನ್ನು ನೀಡದೇ ಕಾನೂನು ಬಾಹಿರವಾಗಿ ಕಟ್ಟಡದ ವಿದ್ಯುತ್ ಸಂಪರ್ಕ ವನ್ನುಕಡಿತ ಗೊಳಿಸಿದ್ದರು.
ವಿದ್ಯುತ್ ಕಡಿತ ಗೊಳಿಸಿದ ಬಗ್ಗೆ ಹಾಗೂ ಪರವಾನಿಗೆ ನೀಡುವ ಬಗ್ಗೆ ಪುರಸಭೆಯು ನೊಟೀಸ್ ಮಾಡಿರುವ ಬಗ್ಗೆ ಬೆಂಗಳೂರು ಮಾನ್ಯ ಉಚ್ಚನ್ಯಾಯಾಲಯದಲ್ಲಿ ದಾವೆ ಹೂಡಿದ್ದು. ಪ್ರಕರಣವನ್ನು ಗಮನಿಸಿ ಮಾನ್ಯ ಉಚ್ಚನ್ಯಾಯಾಲಯವು ಕಾನೂನು ಬಾಹಿರ ವಾಗಿ ಯಾವುದೇ ಕ್ರಮ ಜರುಗಿಸದಂತೆ ತಡೆಯಾಜ್ಞೆಯನ್ನು ನೀಡಿದೆ. ಹಾಗೂ, ಕಡಿತಗೊಳಿಸಿರುವ ವಿದ್ಯುತ್ ಸಂಪರ್ಕವನ್ನು ತಕ್ಷಣವೇ ಪುನರ್ಜೋಡಿಸುವಂತೆ ಮೆಸ್ಕಾಂಗೆ ಆದೇಶ ನೀಡಿದೆ. ಮೆಸ್ಕಾಂ ಇಲಾಖೆಯು ಉಚ್ಚನ್ಯಾಯಾಲಯದ ಆದೇಶದಂತೆ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ವನ್ನು ಪುನರ್ಜೊಡಣೆ
ಮಾಡಿರುತ್ತಾರೆ. ಕಾನೂನು ಹೋರಾಟದಲ್ಲಿ ಅಲ್ ಮಫಾಝ್ ಮೂಡಬಿದ್ರೆ ಸಂಸ್ಥೆಗೆ ಜಯವಾಗಿದೆ.