janadhvani

Kannada Online News Paper

ಅಲ್ ಬದ್ರಿಯಾ ಜುಮಾ ಮಸೀದಿ ಜರಿಗುಡ್ಡೆ: 75ನೇ ಸ್ವಾತಂತ್ರ್ಯ ದಿನಾಚರಣೆ

ದೇಶದ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಭಾಗವಾಗಿ ಅಲ್ ಬದ್ರಿಯಾ ಜುಮಾ ಮಸೀದಿ ಜರಿಗುಡ್ಡೆಯ ವಠಾರದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.

ಜಮಾಅತ್ ಅಧ್ಯಕ್ಷರಾದ ರಝಾಕ್ ಜರಿಗುಡ್ಡೆ ಧ್ವಜಾರೋಹಣಗೈದರು.ಮದ್ರಸಾ ಅಧ್ಯಾಪಕರಾದ ಫಾರೂಕ್ ಮಳ್ ಹರಿ ಕಣ್ಣಂಗಾರ್ ದುಆ ನೇತೃತ್ವ ನೀಡಿದರು. ಮಸೀದಿಯ ಖತೀಬರಾದ ತ್ವಯ್ಯಿಬ್ ಮಳ್ ಹರಿ ಸಂದೇಶ ಭಾಷಣ ನಿರ್ವಹಿಸಿದರು.

ಊರಿನ ಹಿರಿಯರು, ಆಡಳಿತ ಸಮೀತಿಯ ಪದಾಧಿಕಾರಿಗಳು, ಎಸ್ ಬಿ ಎಸ್ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.ಜಮಾಅತ್ ಕಾರ್ಯದರ್ಶಿ ಹಾರಿಸ್ ಜರಿಗುಡ್ಡೆ ಸ್ವಾಗತಿಸಿ, ಕೊನೆಯಲ್ಲಿ ಅಭಿನಂದನೆ ಸಲ್ಲಿಸಿದರು.