ಲಂಡನ್: ಪ್ರಧಾನಿ ನರೇಂದ್ರ ಮೋದಿ ಬುಧವಾರ ಲಂಡನ್ಗೆ ಬಂದಿಳಿದಾಗ ನೂರಾರು ಮಂದಿ ಪ್ರತಿಭಟನಾಕಾರರು ಪ್ಲೆಕಾರ್ಡ್ ಹಿಡಿದು ಮೋದಿ ವಿರುದ್ಧ ಘೋಷಣೆ ಕೂಗಿದ್ದಾರೆ ಎಂದು ರಾಯಿಟರ್ಸ್ ಪತ್ರಿಕೆ ವರದಿ ಮಾಡಿದೆ.
ಬಾಲಕಿಯರ ಮೇಲೆ ಪೈಶಾಚಿಕ ರೀತಿಯಲ್ಲಿ ನಡೆದ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯವನ್ನು ಖಂಡಿಸಿ ಪ್ರತಿಭಟನಾಕಾರರು ಮೋದಿ ವಿರುದ್ಧ ಘೋಷಣೆ ಕೂಗಿದ್ದಾರೆ. ಸ್ವೀಡನ್ ಮತ್ತು ಬ್ರಿಟನ್ ರಾಷ್ಟ್ರಗಳ 5 ದಿನಗಳ ಪ್ರವಾಸದ ಅಂಗವಾಗಿ ಮೋದಿ ಲಂಡನ್ಗೆ ತೆರಳಿದ್ದರು.
ಬ್ರಿಟನ್ ಪ್ರಧಾನಿ ತೆರೆಸಾ ಮೇ ಜತೆ ಮಾತುಕತೆ ನಡೆಸಲು ಮೋದಿ ಪಾರ್ಲಿಮೆಂಟ್ಗೆ ಆಗಮಿಸಿದ ವೇಳೆ ರಸ್ತೆಯ ಇಕ್ಕೆಲಗಳಲ್ಲಿ ನೆರೆದು ನಿಂತ ಪ್ರತಿಭಟನಾಕಾರರು ‘Modi go home’ , ‘we stand against Modi’s agenda of hate and greed’ ಎಂದು ಬರೆದ ಪ್ಲೆಕಾರ್ಡ್ ಹಿಡಿದು ಪ್ರತಿಭಟಿಸಿದ್ದಾರೆ.
ಭಾರತದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ರಾಜಕೀಯ ಸಮಸ್ಯೆಯಾಗಿದೆ. ಹೀಗಿರುವಾಗ ಮಹಿಳೆಯರ ರಕ್ಷಣೆ ಕಲ್ಪಿಸುವುದರಲ್ಲಿ ಮೋದಿ ವಿಫಲರಾಗಿದ್ದಾರೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.
ಇಷ್ಟೆಲ್ಲಾ ನಡೆಯುತ್ತಿದ್ದರೂ ಭಾರತ ಸರ್ಕಾರ ಏನೂ ಮಾಡದೆ ಕುಳಿತಿದೆ. ಅನ್ಯಾಯಕ್ಕೀಡಾಗಿರುವ ಆ ಕುಟುಂಬಗಳ ಬಗ್ಗೆ ನಮಗೆ ಕನಿಕರವಿದೆ. ಕಳೆದ ನಾಲ್ಕು ವರ್ಷಗಳಿಂದ ಅವರು ಅಧಿಕಾರದಲ್ಲಿದ್ದಾರೆ. ಆದರೆ ಮಹಿಳೆ ಮತ್ತು ಮಕ್ಕಳ ರಕ್ಷಣೆಗಾಗಿ ಅವರು ಯಾವುದೇ ನೀತಿ ರಚಿಸಿಲ್ಲ ಎಂದು ಬ್ರಿಟನ್ನಲ್ಲಿ ನೆಲೆಸಿರುವ ಭಾರತ ಸಂಜಾತ ವಕೀಲ ನವಿಂದರ್ ಸಿಂಗ್ ಹೇಳಿದ್ದಾರೆ.
ಕೃಪೆ:ಪ್ರಜಾವಾಣಿ















ಇನ್ನಷ್ಟು ಸುದ್ದಿಗಳು
ಇರಾಕ್ನ ನೂತನ ಪ್ರಧಾನ ಮಂತ್ರಿಯಾಗಿ ಉದ್ಯಮಿ ಅಲಿ ಅಲ್-ಝೈದಿ ಆಯ್ಕೆ- ದೇಶದ ರಾಜಕೀಯದಲ್ಲಿ ಹೊಸ ಯುಗ?
ಅಮೆರಿಕಕ್ಕೆ ಇರಾನ್ನಿಂದ ‘ಬಿಗ್ ಡೀಲ್’: ಹೋರ್ಮುಜ್ ಜಲಸಂಧಿ ತೆರೆಯಲು ಸಿದ್ಧ, ಆದರೆ ಒಂದು ಷರತ್ತು!
ಟ್ರಂಪ್ ಔತಣಕೂಟದಲ್ಲಿ ಶೂಟೌಟ್: ನಾಸಾ ಫೆಲೋಶಿಪ್ ಪಡೆದ ಎಂಜಿನಿಯರ್ ಬಂಧನ
ಇರಾನ್ ಜೊತೆಗಿನ ಸಂಧಾನಕ್ಕೆ ಬ್ರೇಕ್? – ಅಮೆರಿಕ ನಿಯೋಗದ ಪ್ರವಾಸ ರದ್ದುಪಡಿಸಿದ ಟ್ರಂಪ್
ಇಸ್ರೇಲ್ ಪ್ರಧಾನಿಗೆ ಕ್ಯಾನ್ಸರ್: ಇರಾನ್ ಭಯದಿಂದ ವಿಷಯ ಮುಚ್ಚಿಟ್ಟಿದ್ದಾಗಿ ಸ್ಪಷ್ಟನೆ
ಇರಾನ್ ಪರ ಗುಂಪುಗಳ ದಾಳಿ ಹಿನ್ನೆಲೆ: ಇರಾಕ್ಗೆ ಸೇರಬೇಕಿದ್ದ 500 ಮಿಲಿಯನ್ ಡಾಲರ್ ನಗದು ಸಾಗಾಟವನ್ನು ತಡೆದ ಅಮೆರಿಕ
ಹೋರ್ಮುಝ್ ಜಲಸಂಧಿಯಲ್ಲಿ ಉದ್ವಿಗ್ನತೆ: ಮೂರು ವಾಣಿಜ್ಯ ಹಡಗುಗಳ ಮೇಲೆ ಗುಂಡಿನ ದಾಳಿ
ನಾಳೆ ಮಾತುಕತೆ: ಒಪ್ಪಂದಕ್ಕೆ ಬಾರದಿದ್ದರೆ ಇರಾನ್ನ ವಿದ್ಯುತ್ ಸ್ಥಾವರ, ಸೇತುವೆಗಳ ಧ್ವಂಸ- ಟ್ರಂಪ್ ಎಚ್ಚರಿಕೆ
ಯುಎಸ್-ಇರಾನ್ ಕದನ ವಿರಾಮ ಅಂತ್ಯಕ್ಕೆ ದಿನಗಣನೆ- ಪಶ್ಚಿಮ ಏಷ್ಯಾದಲ್ಲಿ ಮತ್ತೆ ಯುದ್ಧದ ಭೀತಿ
ನೌಕಾ ದಿಗ್ಬಂಧನವನ್ನು ಹಿಂಪಡೆಯದ ಅಮೆರಿಕ- ಹಾರ್ಮುಜ್ ಜಲಸಂಧಿಯನ್ನು ಮತ್ತೆ ಮುಚ್ಚಿದ ಇರಾನ್