ಕೇರಳ ಮುಸ್ಲಿಂ ಜಮಾಅತ್ ರಾಜ್ಯ ನಾಯಕರೂ, ಕೇರಳ ರಾಜ್ಯದ ಹಲವು ಸುನ್ನೀ ಸಂಘಟನೆಗಳ ಪ್ರಮುಖ ಸುನ್ನೀ ನಾಯಕರೂ,ಪ್ರೌಡೋಜ್ಜಲ ವಾಗ್ಮಿಯೂ ಆಗಿದ್ದ ಅಬ್ದುಲ್ ಲತೀಫ್ ಸಅದಿ ಪಯಶ್ವಿ ರವರು ಜುಲೈ 30 ಶನಿವಾರ ಮಧ್ಯಾಹ್ನ 3:30 ಗಂಟೆಗೆ ವಫಾತರಾದರು.
ಅವರ ಅಗಲಿಕೆಗೆ ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅಬ್ದುಲ್ಲತೀಫ್ ಸಅದಿ ಶಿವಮೊಗ್ಗ , ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ, ಕೋಶಾಧಿಕಾರಿ ಸುಫಿಯಾನ್ ಸಖಾಫಿ ಹಾಗೂ ರಾಜ್ಯ ನಾಯಕರು ತೀವ್ರ ಸಂತಾಪ ಸೂಚಿಸಿದ್ದಾರೆ.
ಪಯಶ್ವಿ ಉಸ್ತಾದರ ಅಗಲಿಕೆಯು ಸುನ್ನೀ ಸಮುದಾಯಕ್ಕೆ ತುಂಬಲಾರದ ನಷ್ಟ ಎಂದು ಸಂತಾಪದಲ್ಲಿ ಅಭಿಪ್ರಾಯಪಟ್ಟಿದೆ.
ಎಲ್ಲಾ ಕಾರ್ಯಕರ್ತರು ಪಯಶ್ವಿ ಉಸ್ತಾದರ ಹೆಸರಿನಲ್ಲಿ ಸಾಧ್ಯವಾದಷ್ಟು ಖುರ್ ಆನ್,ತಹ್ಲೀಲ್ ಹದ್ಯಾ ಮಾಡಿ ವಿಶೇಷ ಪ್ರಾರ್ಥನೆ ಮಾಡುವಂತೆಯೂ, ಮಯ್ಯಿತ್ ನಮಾಜ್ ನಿರ್ವಹಿಸುವಂತೆಯೂ ವಿನಂತಿಸಲಾಗಿದೆ.








ಉತ್ತಮ ವರದಿ. ವರದಿ ವೋಯ್ಸ್ ಸೌಲಭ್ಯ ಅತ್ಯುತ್ತಮ. ಧನ್ಯವಾದಗಳು