ಮಂಗಳೂರು: ದೇಶದ ಪ್ರಸಕ್ತ ಪರಿಸ್ಥಿಯನ್ನು ಆಧರಿಸಿ ಪವಿತ್ರ ಹಬ್ಬದ ದಿನಗಳಲ್ಲಿ ವ್ಯತ್ಯಸ್ತ ಕಾನೂನಾತ್ಮಕ ಬಿಕ್ಕಟ್ಟಿನ ಸಂದರ್ಭಗಳಲ್ಲಿ ಅತ್ಯಂತ ಎಚ್ಚರಿಕೆ ನಡೆ ಹೊಂದಬೇಕಾಗಿದೆ.
ಈದ್ ಉಲ್ ಅಝ್ಹಹಾ ಸಂದರ್ಭದ ಖಡ್ಡಾಯ ಪ್ರಾಣಿಬಲಿ ಪದ್ಧತಿಯನ್ನು, ಪ್ರಸಕ್ತ ಸರಕಾರ ಪ್ರಾಣಿ ಹಿಂಸಾ ನಿಷೇಧ ಕಾಯ್ದೆ ಮುಂದಿಟ್ಟು, ವಿವಿಧ ಇಲಾಖೆಗಳ ಸಹಕಾರದೊಂದಿಗೆ ತಡೆಯುವ ಸರ್ವ ಪ್ರಯತ್ನಗಳನ್ನು ಮಾಡುತ್ತಿದೆ.ಸರಕಾರದ ಈ ಕ್ರಮ ಒಂದು ನಿರ್ಧಿಷ್ಟ ಸಮುದಾಯದ ಜನರನ್ನು ತಾತ್ಕಾಲಿಕವಾಗಿ ಸಂತುಷ್ಟ ಪಡಿಸುವ ಉದ್ದೇಶದಿಂದ ಕೂಡಿದ್ದು,ದೇಶದ ಒಂದು ನಿರ್ಧಿಷ್ಟ ಸಮುದಾಯದ ಜನರ ಧಾರ್ಮಿಕ ನಂಬಿಕೆಗೆ ವಿರುದ್ದವಾದ ನಡೆಯಾಗಿದೆ.
ಅನಾದಿ ಕಾಲದಿಂದ ಧಾರ್ಮಿಕವಾಗಿ ಅನುಮೋದನೆಗೊಂಡ ಈ ಬಲಿ ಕರ್ಮವನ್ನು ಸಾಂದರ್ಭಿಕ ಈ ಕಾಲಕ್ಕೆ ಮಾತ್ರ ತಡೆ ಹಿಡಿಯುವಂತಹ ಈ ಪ್ರಯತ್ನ ಅಧಿಕ ಅವಧಿಗೆ ಬಾಳಿಕೆ ಬರುವಂತದ್ದಲ್ಲ. ನಿಸರ್ಗ ನಿಯಮದ ವಿರುದ್ಧದ ಯಾವುದೇ ಕಾನೂನು ಅಧಿಕ ಕಾಲ ಬಾಳಿಕೆ ಬಂದಿಲ್ಲ. ಈ ಪರಿಸ್ಥಿತಿಯನ್ನು ಬಹುಸಂಖ್ಯಾತ ಜನತೆ ಮುಂದೊಂದು ದಿನ ತಿದ್ದುಪಡಿ ಗೊಳಿಸುವ ಆಂದೋಲನ ಬರಲಿದೆ. ಪ್ರಸ್ತುತ ಪರಿಸ್ಥಿತಿಯನ್ನು ತಾತ್ಕಾಲಿಕ ಎಂದು ಕೊಂಡು ಮುಸ್ಲಿಮರು ಪ್ರಸಕ್ತ ಸನ್ನಿವೇಶಕ್ಕೆ ಅನುಗುಣವಾಗಿ ತಮ್ಮನ್ನು ತಾವು ಹೊಂದಿಸಿಕೊಂಡು ಮುನ್ನಡೆಯುವುದು ಬುದ್ದಿವಂತಿಕೆ ಆಗಿದೆ.
ಆದುದರಿಂದ ಮುಸ್ಲಿಮರು ಪ್ರಸಕ್ತ ಸಾಲಿನ ಪಶು ಬಲಿ ಕರ್ಮದಿಂದ ತಾತ್ಕಾಲಿಕ ಮಟ್ಟದಲ್ಲಿ ಹಿಂಜರಿದು, ಪ್ರಸಕ್ತ ಪರಿಸ್ಥಿಯ ಕಾನೂನಾತ್ಮಕ ನಡೆಯೊಂದಿಗೆ ಸಹಕರಿಸಬೇಕಾಗಿ ಕೋರಿಕೆ.
ಜಿಲ್ಲೆಯ ಪ್ರಮುಖ ಸಂಘಟನೆಗಳ ಮುಖ್ಯಸ್ಥರು, ಜನಪ್ರತಿನಿಧಿಗಳು ಈಗಾಗಲೇ ಉನ್ನತ ಮಟ್ಟದ ಅಧಿಕಾರಿಗಳಲ್ಲಿ ಹಲವು ಹಂತದ ಮಾತುಕತೆ ನಡೆಸಿದರೂ ಕೂಡಾ ವಿಶೇಷ ಸಂದರ್ಭದಲ್ಲಿ ಕೂಡಾ ಬಕ್ರೀದ್ ಪಶುಬಲಿ ಬಗ್ಗೆ ಒಂದು ನಿರ್ಣಾಯಕ ನಿರ್ಧಾರಕ್ಕೆ ತಲುಪಲು ಜಿಲ್ಲಾಡಾಳಿತ ವಿಫಲವಾದ ಕಾರಣದಿಂದ ವ್ಯತ್ಯಸ್ತ ಸಂಧರ್ಬದಲ್ಲಿ ಅನಿವಾರ್ಯವಾಗಿ ಸೃಷ್ಟಿಯಾಗುವ ಕ್ರಿಮಿನಲ್ ಹೊಣೆಗಾರಿಕೆ ಗಳಿಂದ ಮುಕ್ತಿ ಹೊಂದುವ ನಿಟ್ಟಿನಲ್ಲಿ ಈದ್ ಪಶು ಬಲಿ ಕರ್ಮದಿಂದ ಮುಕ್ತ ಹೊಂದುವ ವಿವೇಚನಾ ನಡೆ ಹೊಂದುವುದು ಒಳಿತು ಎಂದು ಜಿಲ್ಲೆಯ ಸರ್ವ ಮುಸ್ಲಿಮರು ಅರ್ಥಮಾಡಿಕೊಳ್ಳುವಂತೆ ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಇದರ ಅಧ್ಯಕ್ಷರಾದ ಕೆ.ಅಶ್ರಫ್. ಪತ್ರಿಕಾ ಪ್ರಕಟನೆಯಲ್ಲಿ ವಿನಂತಿಸಿದ್ದಾರೆ.
















ಇನ್ನಷ್ಟು ಸುದ್ದಿಗಳು
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
“ನಾವು ಭಾರತೀಯರೆಂದು ಹೇಳಿರಲಿಲ್ಲವೇ?”- ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದ್ದ ಕುಟುಂಬಗಳು ವಾಪಸ್
ಮದ್ರಸಾ ಅಧ್ಯಾಪಕರ ಮೇಲಿನ ಹಲ್ಲೆ ಅತ್ಯಂತ ಖಂಡನೀಯ- ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ SJM ಕಿನ್ನಿಗೋಳಿ ರೇಂಜ್ ಆಗ್ರಹ