ದಮ್ಮಾಮ್ : ಅರಬ್ ಶೃಂಗಸಭೆಯು ದಮ್ಮಾಮ್ ನಲ್ಲಿ ಪ್ರಾರಂಭಗೊಂಡಿತು. ಸೌದಿ ಆಡಳಿತಾಧಿಕಾರಿ ಸಲ್ಮಾನ್ ರಾಜರ ನೇತೃತ್ವದಲ್ಲಿ ನಡೆಯುವ ಶೃಂಗಸಭೆಯಲ್ಲಿ 22 ರಾಷ್ಟ್ರಗಳ ನಾಯಕರು ಭಾಗವಹಿಸುತ್ತಿದ್ದಾರೆ.
ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟುರಸ್ ಸಹ ಈ ಸಮಾವೇಶಕ್ಕೆ ಹಾಜರಾಗಲಿದ್ದಾರೆ. ಶೃಂಗಸಭೆಯಲ್ಲಿ ಪೆಲೆಸ್ತೀನಿಯನ್ ಸಮಸ್ಯೆ ಪ್ರದಾನ ಚರ್ಚಾ ವಿಷಯವಾಗಲಿದೆ.
ಜೋರ್ಡಾನ್ ರಾಜ ಎರಡನೇ ಅಬ್ದುಲ್ಲಾ ಶೃಂಗಸಭೆಯನ್ನು ಉದ್ಘಾಟಿಸಿದರು.
ಅಮೆರಿಕನ್ ದೂತಾವಾಸವನ್ನು ಜೆರುಸ್ಲೇಮ್ ಗೆ ಬದಲಾಯಿಸುವ ಟ್ರಂಪ್ ನಿರ್ಧಾರವನ್ನು ಅವರು ಖಂಡಿಸಿದರು.
ಇಸ್ರೇಲ್ನ ರಾಯಭಾರಿ ಕಚೇರಿಯನ್ನು ಟೆಲ್ ಅವೀವ್ ನಿಂದ ಜೆರುಸ್ಲೇಮ್ಗೆ ಸ್ಥಾಳಾಂತರಿಸಿದ ಡೊನಾಲ್ಡ್ ಟ್ರಂಪ್ ನಡೆಯನ್ನು ಸೌದಿ ರಾಜ ಖಂಡಿಸಿದ್ದಾರೆ.
ಸಲ್ಮಾನ್ ರ ಟೀಕೆಯು ರವಿವಾರ ಪ್ರಾರಂಭಗೊಂಡ ಅರಬ್ ಲೀಗ್ ನಲ್ಲಿ ಕೇಳಿ ಬಂತು.
ದಹರಾನ್ನಲ್ಲಿ ನಡೆಯುವ ಅರಬ್ ಲೀಗ್ ನಲ್ಲಿ ಮಾತನಾಡಿದ ಅವರು, ಅಮೆರಿಕದ ನಿರ್ಧಾರವನ್ನು ತಿರಸ್ಕರಿಸುವುದಾಗಿ ಹೇಳಿದರು.
ಪೂರ್ವ ಜೆರುಸಲೆಮ್ ಫ್ಯಲಸ್ತೀನ್ನ ಅವಿಭಾಜ್ಯ ಅಂಗವಾಗಿದೆ.
ಜೆರುಸಲೆಮ್ನಲ್ಲಿ ಇಸ್ಲಾಮಿಕ್ ಪರಂಪರೆಯನ್ನು ರಕ್ಷಿಸಲು 120 ಮಿಲಿಯನ್ ಯುರೋ ಸಂಭಾವನೆಯನ್ನು ಈ ಸಂದರ್ಭದಲ್ಲಿ ಅವರು ಘೋಷಿಸಿದರು.
ನಾನು ದಹ್ರಾನ್ ಶೃಂಗಸಭೆ ಯನ್ನು ಜೆರುಸಲೆಮ್ ಶೃಂಗಸಭೆ ಎಂದು ಕರೆಯಲು ಇಚ್ಛಿಸುತ್ತೇನೆ. ಫೆಲಸ್ತೀನ್ ಮತ್ತು ಅಲ್ಲಿನ ಜನರಿಗೆ ಅರಬ್ ಲೀಗ್ನ ಪೂರ್ಣ ಬೆಂಬಲವಿದೆ. ಫೆಲಸ್ತೀನಿಯನ್ ನಿರಾಶ್ರಿತರಿಗೆ ಸಹಾಯ ಮಾಡಲು ಯುನೈಟೆಡ್ ನೇಷನ್ಸ್ ನಿಧಿಗೆ ಸಲ್ಮಾನ್ ರಾಜ ನೆರವು ಘೋಷಿಸಿದರು.
ದಹ್ರಾನ್ನ ರಾಜ ಅಬ್ದುಲ್ ಅಝೀಝ್ ಸಾಂಸ್ಕೃತಿಕ ಕೇಂದ್ರದಲ್ಲಿ ಸಮ್ಮೇಳನವನ್ನು ನಡೆಸಲಾಗುತ್ತಿದೆ.
ಅರಬ್ ವಲಯದ ರಾಜಕೀಯ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಶೃಂಗಸಭೆಯಲ್ಲಿ ಚರ್ಚಿಸಲಾಗುವುದು















ಇನ್ನಷ್ಟು ಸುದ್ದಿಗಳು
ಅಮೆರಿಕ-ಇರಾನ್ ಒಪ್ಪಂದ: ‘ಮಿಸ್ಟರ್ ಸೆಕ್ಯೂರಿಟಿ’ಗೆ ಭಾರಿ ಹಿನ್ನಡೆ- ನೆತನ್ಯಾಹು ರಾಜಕೀಯ ವರ್ಚಸ್ಸಿಗೆ ಧಕ್ಕೆ
‘ಪಶ್ಚಿಮ ಏಷ್ಯಾದಲ್ಲಿ ಶಾಂತಿಯ ಉದಯ’ ;ಅಮೆರಿಕ-ಇರಾನ್ ಕದನ ವಿರಾಮ ತಿಳುವಳಿಕಾ ಪತ್ರಕ್ಕೆ ಸಹಿ- ಹಾರ್ಮುಜ್ ಜಲಸಂಧಿ ಶೀಘ್ರದಲ್ಲೇ ಮುಕ್ತ
ಇರಾನ್ ಒಪ್ಪಂದ ಪಾಲಿಸದಿದ್ದರೆ ನೆತ್ತಿ ಮೇಲೆ ಬಾಂಬ್ ವರ್ಷಣ- ಡೊನಾಲ್ಡ್ ಟ್ರಂಪ್ ಖಡಕ್ ಎಚ್ಚರಿಕೆ!
ಇರಾನ್-ಯುಎಸ್ ಕದನ ವಿರಾಮ: ಡೊನಾಲ್ಡ್ ಟ್ರಂಪ್ ಘೋಷಣೆ- ಇರಾನ್ನಿಂದಲೂ ದೃಢೀಕರಣ
ಮುಂದಿನ 24 ಗಂಟೆಗಳಲ್ಲಿ ಯು.ಎಸ್-ಇರಾನ್ ಶಾಂತಿ ಒಪ್ಪಂದ ಅಂತಿಮ: ಪಾಕ್ ಪ್ರಧಾನಿ ಶಹಬಾಝ್ ಷರೀಫ್
“ಬೆಲೆ ಏರಿಕೆ ನನಗೆ ಇಷ್ಟ”-ಇರಾನ್ ಯುದ್ಧದ ಕಾರಣದಿಂದ ಉಂಟಾದ ಬೆಲೆ ಏರಿಕೆಯ ಬಗ್ಗೆ ಟ್ರಂಪ್ ವಿವಾದಾತ್ಮಕ ಹೇಳಿಕೆ
’60 ದಿನಗಳಲ್ಲಿ ಹೊಸ ಕೆಲಸ ಹುಡುಕಿ, ಇಲ್ಲದಿದ್ದರೆ ದೇಶ ತೊರೆಯಿರಿ’- ಭಾರತೀಯ ಉದ್ಯೋಗಿಗಳಿಗೆ ಆತಂಕ
ಗಲ್ಫ್ ನಾಯಕರ ವಿನಂತಿಗೆ ಮನ್ನಣೆ ; ಇರಾನ್ ಮೇಲಿನ ದಾಳಿ ತಾತ್ಕಾಲಿಕ ರದ್ದು- ಟ್ರಂಪ್
‘ಯುದ್ಧ ಕೊನೆಗೊಳಿಸುವುದಕ್ಕೆ ಆದ್ಯತೆ ನೀಡಬೇಕು’- ಅಮೆರಿಕದ 14 ಅಂಶಗಳ ಪ್ರಸ್ತಾವನೆಗೆ ಇರಾನ್ ಪ್ರತಿಕ್ರಿಯೆ
ಕೊಲೆ ಬೆದರಿಕೆ, ದಂಗೆಯ ಸಾಧ್ಯತೆ; ನಿವಾಸ ಬಿಟ್ಟು ಹೊರಬಾರದ ಪುಟಿನ್- ಭದ್ರತಾ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆ