janadhvani

Kannada Online News Paper

ಸೌದಿಯಲ್ಲಿ ಅರಬ್ ಶೃಂಗ ಸಭೆ- ಜೆರುಸಲೇಮ್ ಮುಖ್ಯ ಚರ್ಚಾ ವಿಷಯ

ದಮ್ಮಾಮ್ : ಅರಬ್ ಶೃಂಗಸಭೆಯು ದಮ್ಮಾಮ್ ನಲ್ಲಿ ಪ್ರಾರಂಭಗೊಂಡಿತು. ಸೌದಿ ಆಡಳಿತಾಧಿಕಾರಿ ಸಲ್ಮಾನ್ ರಾಜರ ನೇತೃತ್ವದಲ್ಲಿ ನಡೆಯುವ ಶೃಂಗಸಭೆಯಲ್ಲಿ 22 ರಾಷ್ಟ್ರಗಳ ನಾಯಕರು ಭಾಗವಹಿಸುತ್ತಿದ್ದಾರೆ.

ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟುರಸ್ ಸಹ ಈ ಸಮಾವೇಶಕ್ಕೆ ಹಾಜರಾಗಲಿದ್ದಾರೆ. ಶೃಂಗಸಭೆಯಲ್ಲಿ ಪೆಲೆಸ್ತೀನಿಯನ್ ಸಮಸ್ಯೆ ಪ್ರದಾನ ಚರ್ಚಾ ವಿಷಯವಾಗಲಿದೆ.

ಜೋರ್ಡಾನ್ ರಾಜ ಎರಡನೇ ಅಬ್ದುಲ್ಲಾ ಶೃಂಗಸಭೆಯನ್ನು ಉದ್ಘಾಟಿಸಿದರು.
ಅಮೆರಿಕನ್ ದೂತಾವಾಸವನ್ನು ಜೆರುಸ್ಲೇಮ್ ಗೆ ಬದಲಾಯಿಸುವ ಟ್ರಂಪ್ ನಿರ್ಧಾರವನ್ನು ಅವರು ಖಂಡಿಸಿದರು.

ಇಸ್ರೇಲ್‌ನ ರಾಯಭಾರಿ ಕಚೇರಿಯನ್ನು ಟೆಲ್ ಅವೀವ್ ನಿಂದ ಜೆರುಸ್ಲೇಮ್‌ಗೆ ಸ್ಥಾಳಾಂತರಿಸಿದ ಡೊನಾಲ್ಡ್ ಟ್ರಂಪ್ ನಡೆಯನ್ನು ಸೌದಿ ರಾಜ ಖಂಡಿಸಿದ್ದಾರೆ.

ಸಲ್ಮಾನ್ ರ ಟೀಕೆಯು ರವಿವಾರ ಪ್ರಾರಂಭಗೊಂಡ ಅರಬ್ ಲೀಗ್ ನಲ್ಲಿ ಕೇಳಿ ಬಂತು.
ದಹರಾನ್‌ನಲ್ಲಿ ನಡೆಯುವ ಅರಬ್ ಲೀಗ್ ನಲ್ಲಿ ಮಾತನಾಡಿದ ಅವರು, ಅಮೆರಿಕದ ನಿರ್ಧಾರವನ್ನು ತಿರಸ್ಕರಿಸುವುದಾಗಿ ಹೇಳಿದರು.

ಪೂರ್ವ ಜೆರುಸಲೆಮ್ ಫ್ಯಲಸ್ತೀನ್‌ನ ಅವಿಭಾಜ್ಯ ಅಂಗವಾಗಿದೆ.
ಜೆರುಸಲೆಮ್‌ನಲ್ಲಿ ಇಸ್ಲಾಮಿಕ್ ಪರಂಪರೆಯನ್ನು ರಕ್ಷಿಸಲು 120 ಮಿಲಿಯನ್ ಯುರೋ ಸಂಭಾವನೆಯನ್ನು ಈ ಸಂದರ್ಭದಲ್ಲಿ ಅವರು ಘೋಷಿಸಿದರು.

ನಾನು ದಹ್ರಾನ್ ಶೃಂಗಸಭೆ ಯನ್ನು ಜೆರುಸಲೆಮ್ ಶೃಂಗಸಭೆ ಎಂದು ಕರೆಯಲು ಇಚ್ಛಿಸುತ್ತೇನೆ. ಫೆಲಸ್ತೀನ್ ಮತ್ತು ಅಲ್ಲಿನ ಜನರಿಗೆ ಅರಬ್ ಲೀಗ್‌ನ ಪೂರ್ಣ ಬೆಂಬಲವಿದೆ. ಫೆಲಸ್ತೀನಿಯನ್ ನಿರಾಶ್ರಿತರಿಗೆ ಸಹಾಯ ಮಾಡಲು ಯುನೈಟೆಡ್ ನೇಷನ್ಸ್ ನಿಧಿಗೆ ಸಲ್ಮಾನ್ ರಾಜ ನೆರವು ಘೋಷಿಸಿದರು.

ದಹ್‌ರಾನ್‌ನ ರಾಜ ಅಬ್ದುಲ್ ಅಝೀಝ್ ಸಾಂಸ್ಕೃತಿಕ ಕೇಂದ್ರದಲ್ಲಿ ಸಮ್ಮೇಳನವನ್ನು ನಡೆಸಲಾಗುತ್ತಿದೆ.
ಅರಬ್ ವಲಯದ ರಾಜಕೀಯ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಶೃಂಗಸಭೆಯಲ್ಲಿ ಚರ್ಚಿಸಲಾಗುವುದು

error: Content is protected !! Not allowed copy content from janadhvani.com