ಸೌದಿ ಅರೇಬಿಯಾದಲ್ಲಿ ಮನೆ ಚಾಲಕರು ಮತ್ತು ಗೃಹ ಕಾರ್ಮಿಕರಿಗೆ ಲೆವಿ ಅನ್ವಯಿಸುವ ನಿರ್ಧಾರ ಜಾರಿಗೆ ಬಂದಿದೆ ಎಂದು ಮಾನವ ಸಂಪನ್ಮೂಲ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯ ಪ್ರಕಟಿಸಿದೆ.
ನಾಲ್ಕಕ್ಕಿಂತ ಹೆಚ್ಚು ಮನೆಕೆಲಸಗಾರರನ್ನು ಹೊಂದಿರುವ ದೇಶೀಯ ಪೌರರು ಹಾಗೂ ಎರಡಕ್ಕಿಂತ ಹೆಚ್ಚು ಕೆಲಸಗಾರರನ್ನು ಹೊಂದಿರುವ ವಿದೇಶಿಗರು ಲೆವಿಯನ್ನು ಪಾವತಿಸಬೇಕು. ಎರಡು ಹಂತದ ಯೋಜನೆಯ ಮೊದಲ ಹಂತವು ಇಂದಿನಿಂದ ಆರಂಭಗೊಂಡಿದೆ. ಪ್ರತಿ ಕೆಲಸಗಾರನಿಗೆ ವರ್ಷಕ್ಕೆ 9,600 ರಿಯಾಲ್ಗಳು ಅಥವಾ ತಿಂಗಳಿಗೆ 800 ರಿಯಾಲ್ಗಳು ಲೆವಿ ಪಾವತಿಸಬೇಕು. ನಿರ್ಧಾರವನ್ನು ಎರಡು ಹಂತಗಳಲ್ಲಿ ಜಾರಿಗೊಳಿಸಲಾಗುತ್ತದೆ. ಇಂದು ಆರಂಭಗೊಂಡ ಮೊದಲ ಹಂತದಲ್ಲಿ ಹೊಸ ಮನೆಕೆಲಸ ವೀಸಾದಲ್ಲಿ ಬರುವ ಕಾರ್ಮಿಕರಿಗೆ ಮಾತ್ರ ಲೆವಿಯನ್ನು ಪಾವತಿಸಬೇಕಿದೆ. ಅದೂ, ಪ್ರಾಯೋಜಕರ ಅಡಿಯಲ್ಲಿ ನಾಲ್ಕಕ್ಕಿಂತ ಹೆಚ್ಚು ಉದ್ಯೋಗಿಗಳಿದ್ದರೆ ಮಾತ್ರ.
ಪ್ರಸ್ತುತ, ಸೌದಿಯಲ್ಲಿರುವ ಗೃಹ ಕಾರ್ಮಿಕರಿಗೆ ಒಂದು ವರ್ಷದ ನಂತರ ಮಾತ್ರ ಲೆವಿ ಅನ್ವಯಿಸುತ್ತದೆ. ಅವರು ಮೇ 13, 2023 ರಿಂದ ಲೆವಿಯನ್ನು ಪಾವತಿಸಬೇಕಾಗುತ್ತದೆ. ಗೃಹ ಕಾರ್ಮಿಕರಿಗಾಗಿ ಕಾರ್ಮಿಕ ಕಾನೂನುಗಳಲ್ಲಿ ಪ್ರಮುಖ ಸುಧಾರಣೆಗಳನ್ನು ಮಾಡಲಾಗತ್ತದೆ ಎಂದು ಅಧಿಕಾರಿಗಳು ನಿನ್ನೆ ಘೋಷಿಸಿದರು. ಅದರ ಬೆನ್ನಲ್ಲೇ ಲೇವಿಯನ್ನು ಜಾರಿಗೆ ತರಲಾಗಿದೆ.
2018 ರ ಜನವರಿಯಿಂದ ಸೌದಿ ಅರೇಬಿಯಾದಲ್ಲಿ ವಿದೇಶಿಯರಿಗೆ ತದನಂತರ ಅವಲಂಬಿತರಿಗೆ ಲೆವಿ ಕಡ್ಡಾಯಗೊಳಿಸಲಾಗಿದೆ,ಆದರೆ , ಗೃಹ ಕಾರ್ಮಿಕರಿಗೆ ಲೆವಿ ಅನ್ವಯವಾಗಿರಲಿಲ್ಲ. ಆದ್ದರಿಂದಲೇ, ಅನೇಕ ವಿದೇಶಿಗರು ಮನೆ ಚಾಲಕರು ಮುಂತಾದ ಮನೆಕೆಲಸಗಾರರ ವೀಸಾದಲ್ಲಿ ಬಂದು ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದರು.
ಪ್ರಾಯೋಜಕರ ಅಡಿಯಲ್ಲಿ ನಾಲ್ಕಕ್ಕಿಂತ ಹೆಚ್ಚು ಮನೆ ಕೆಲಸಗಾರರು ಇದ್ದರೆ, ಅವರೆಲ್ಲರೂ ಒಂದು ವರ್ಷದ ನಂತರ ಲೆವಿಯನ್ನು ಪಾವತಿಸಬೇಕಾಗುತ್ತದೆ. ಆದರೆ ಈಗ ಹೌಸ್ ಡ್ರೈವರ್ ಹುದ್ದೆಯಲ್ಲಿರುವವರು ವೃತ್ತಿಯನ್ನು ಬದಲಾಯಿಸಲು ಅನುಮತಿಸಲಾಗಿರುವುದರಿಂದ ಹೆಚ್ಚು ಸುರಕ್ಷಿತ ಉದ್ಯೋಗಗಳನ್ನು ಹುಡುಕಿ ಬದಲಾಯಿಸಬಹುದಾಗಿದೆ.
.
















ಇನ್ನಷ್ಟು ಸುದ್ದಿಗಳು
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ