ಲಕ್ನೋ: ಮುಸ್ಲಿಂ ಮಹಿಳೆಯರ ಮೇಲೆ ಅತ್ಯಾಚಾರ ಬೆದರಿಕೆ ಹಾಕಿದ್ದ ಉತ್ತರ ಪ್ರದೇಶದ ಭಜರಂಗ ಮುನಿ ದಾಸ್ ಅವರನ್ನು ಬಂಧಿಸಲಾಗಿದೆ. ಖೈರಾಬಾದ್ನಲ್ಲಿರುವ ಮಹರ್ಷಿ ಶ್ರೀ ಲಕ್ಷ್ಮಣ ದಾಸ್ ಉದಾಸಿನ್ ಆಶ್ರಮದ ಮುಖ್ಯಸ್ಥ ಭಜರಂಗ ಮುನಿ ದಾಸ್ ಅವರನ್ನು ಪೊಲೀಸರು ಸೀತಾಪುರದಿಂದ ಬಂಧಿಸಿ ಕರೆತಂದಿದ್ದಾರೆ.
ಪೊಲೀಸರ ಸಮ್ಮುಖದಲ್ಲೇ ಧಾರ್ಮಿಕ ಮೆರವಣಿಗೆಯಲ್ಲಿ ಆಘಾತಕಾರಿ ಬೆದರಿಕೆ ಹಾಕಿದ 11 ದಿನಗಳ ನಂತರ ಭಜರಂಗ್ ಮುನಿ ದಾಸ್ ಬಂಧನವಾಗಿದೆ.
ಎಪ್ರಿಲ್ 2 ರಂದು ಭಾಷಣದ ವೇಳೆ ಮುಸ್ಲಿಂ ಮಹಿಳೆಯರನ್ನು ಅಪಹರಿಸಿ ಅತ್ಯಾಚಾರ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಈ ವಿಡಿಯೋ ವೈರಲ್ ಆಗ್ತಿದ್ದಂತೆ ರಾಷ್ಟ್ರೀಯ ಮಹಿಳಾ ಆಯೋಗ ತೀಕ್ಷ್ಣವಾಗಿ ವಿರೋಧಿಸಿತ್ತು. ಇಂತಹ ಹೇಳಿಕೆ ನೀಡುವಾಗ ಸ್ಥಳದಲ್ಲೇ ಇದ್ದ ಪೊಲೀಸರು ಮೂಕಪ್ರೇಕ್ಷಕರಂತೆ ಇದ್ದುದ್ದನ್ನ ಸಹಿಸಲು ಸಾಧ್ಯವಿಲ್ಲ ಎಂದು ಹೇಳಿ ಭಜರಂಗ್ ಮುನಿ ದಾಸ್ ಅವರನ್ನು ಬಂಧಿಸುವಂತೆ ಆಯೋಗ ಕೋರಿತ್ತು.
ಭಜರಂಗ್ ಮುನಿ ದಾಸ್ ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ದ್ವೇಷದ ಭಾಷಣ ಮತ್ತು ಅವಹೇಳನಕಾರಿ ಹೇಳಿಕೆಗಳಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಗಿದೆ.
ಒಂದು ಧರ್ಮದ ಪ್ರಚಾರಕರಾದ ಸ್ವಾಮೀಜಿಗಳ ಬಾಯಿಂದ ಇಂತಹಾ ನೀಚ ಮಾತುಗಳು ಹೊರಬರುವುದು, ಆ ಧರ್ಮವನ್ನು ಧಿಕ್ಕರಿಸುವುದಕ್ಕೆ ಸಮಾನವಾಗಿದೆ. ಯಾವುದೇ ಒಂದು ಧಾರ್ಮಿಕ ಪಂಡಿತ ಆಯಾ ಧರ್ಮದ ಆಚಾರ ವಿಚಾರಗಳ ಬಗ್ಗೆ ವಿವರಿಸುತ್ತಾರೆಯೇ ಹೊರತು ಅಸಭ್ಯ, ನೀಚ, ಕೊಳಕು ಪದಗಳನ್ನು ಬಳಸುವುದಿಲ್ಲ , ಅದು ಅವರ ವರ್ಚಸ್ಸಿಗೆ ಶೋಭೆಯಲ್ಲ , ಇಂತಹಾ ನೀಚ ಪದಗಳನ್ನು ಬಳಸುತ್ತಿರುವ ಧಾರ್ಮಿಕ ಮುಖಂಡರನ್ನು ಧರ್ಮದ ಅನುಯಾಯಿಗಳು ಸರಿದಾರಿಗೆ ತರಲು ಪ್ರಯತ್ನಿಸಬೇಕೇ ಹೊರತು ಅದನ್ನು ಬೆಂಬಲಿಸಿ ಕೇಕೆ ಹೊಡೆಯುವುದಲ್ಲ. ಹಿಂದೂ ಧರ್ಮವೆಂದರೆ ಅದು ಕೇವಲ ಆರ್ ಎಸ್ ಎಸ್ ನವರಿಗೆ ಮಾತ್ರ ಇರುವುದಲ್ಲ, ದೇಶದಲ್ಲಿರುವ ಬಹುಸಂಖ್ಯಾತ ಹಿಂದೂಗಳು ಶಾಂತಿ ಪ್ರಿಯರಾಗಿದ್ದು, ಅವರು ಯಾವತ್ತೂ ಇಂತಹಾ ನೀಚ ಕೃತ್ಯಕ್ಕೆ ಮುಂದಾಗುವುದಿಲ್ಲ.
















ಇನ್ನಷ್ಟು ಸುದ್ದಿಗಳು
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
“ನಾವು ಭಾರತೀಯರೆಂದು ಹೇಳಿರಲಿಲ್ಲವೇ?”- ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದ್ದ ಕುಟುಂಬಗಳು ವಾಪಸ್
ಮದ್ರಸಾ ಅಧ್ಯಾಪಕರ ಮೇಲಿನ ಹಲ್ಲೆ ಅತ್ಯಂತ ಖಂಡನೀಯ- ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ SJM ಕಿನ್ನಿಗೋಳಿ ರೇಂಜ್ ಆಗ್ರಹ