ಬೆಂಗಳೂರು,ಫೆ.26- ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಹಿಜಾಬ್ ವಿವಾದಕ್ಕೆ ಸಂಬಂಸಿದಂತೆ ಹೈಕೋರ್ಟ್‍ನಲ್ಲಿ ನಡೆದ 11 ದಿನಗಳ ಕಲಾಪವನ್ನು ನ್ಯಾಯಾಲಯದ ಅಧಿಕೃತ ಯುಟ್ಯೂಬ್ ಚಾನಲ್‍ನಲ್ಲಿ ಬರೋಬ್ಬರಿ 33.5 ಲಕ್ಷ ಮಂದಿ ವೀಕ್ಷಿಸಿದ್ದಾರೆ.ಯೂಟ್ಯೂಬ್‍ನಲ್ಲಿ ಹಿಜಾಬ್ ಕಲಾಪ ವೀಕ್ಷಣೆ ಭಾರತ ನ್ಯಾಯಾಂಗ ಇತಿಹಾಸದಲ್ಲಿ ನೂತನ ದಾಖಲೆ ಬರೆದಿದೆ. ಹೊಸ ವರ್ಷದ ಮೊದಲ ದಿನದಿಂದಲೇ ನ್ಯಾಯಾಲಯದ ಕಲಾಪಗಳನ್ನು ಯೂಟ್ಯೂಬ್ ಮೂಲಕ ಲೈವ್ ಮಾಡುವುದನ್ನು ಹೈಕೋರ್ಟ್ ಕಡ್ಡಾಯಗೊಳಿಸಿತು.
ಹಿಜಾಬ್ ಕುರಿತಾದ ವಿವಾದದ ವಿಚಾರಣೆ ಅಪಾರ ನೋಡುಗರು ಮತ್ತು ಚಂದಾದಾರರನ್ನು ತಂದುಕೊಟ್ಟಿದ್ದು, ಭಾರತೀಯ ನ್ಯಾಯಾಂಗ ಇತಿಹಾಸದಲ್ಲಿ ಹೈಕೋರ್ಟ್‍ನ ಹೊಸ ದಾಖಲೆಗೆ ಕಾರಣವಾಗಿದೆ. ಚಂದಾದಾರರ ಸಂಖ್ಯೆ ಒಂದು ಲಕ್ಷ ದಾಟಿದೆ.
ಬೇರೆ ಯಾವ ಹೈಕೋರ್ಟ್‍ನ ಚಂದದಾರರ ಸಂಖ್ಯೆಯು ಒಂದು ಲಕ್ಷ ದಾಟಿಲ್ಲ. ಬಹುತೇಕ ಹೈಕೋರ್ಟ್‍ಗಳಲ್ಲಿ ಯೂಟ್ಯೂಬ್ ಲೈವ್ ಸ್ಟ್ರೀಮ್ ಇನ್ನಷ್ಟೇ ಆರಂಭವಾಗಬೇಕಿದೆ. ತರಗತಿಗಳಲ್ಲಿ ಹಿಜಾಬ್ ನಿಷೇಧಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಮುಸ್ಲಿಂ ವಿದ್ಯಾರ್ಥಿನಿಯರು ಸಲ್ಲಿಸಿದ್ದ ಮನವಿಗಳನ್ನು ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ, ನ್ಯಾಯಮೂರ್ತಿಗಳಾದ ಕೃಷ್ಣ ಎಸ್.ದೀಕ್ಷಿತ್ ಮತ್ತು ಜೆ.ಎಂ.ಖಾಜಿ ಅವರ ನೇತೃತ್ವದ ತ್ರಿಸದಸ್ಯ ಪೀಠ ಫೆ.10ರಿಂದ 25ರವರೆಗೆ 11 ದಿನಗಳ ಕಾಲ ಪ್ರತಿದಿನ ಸರಾಸರಿ ಎರಡು ತಾಸಿನಂತೆ ಒಟ್ಟು 23.5 ಗಂಟೆ ವಿಚಾರಣೆ ನಡೆಸಿ ತೀರ್ಪನ್ನು ಕಾಯ್ದಿರಿಸಿದ್ದು, ಈಗ ಎಲ್ಲರ ಚಿತ್ತ ತೀರ್ಪಿನತ್ತ ನೆಟ್ಟಿದೆ.
ವಿಶ್ವಾದ್ಯಂತ ಭಾರೀ ಚರ್ಚೆ ಹುಟ್ಟು ಹಾಕಿರುವ ಹಿಜಾಬ್ ವಿವಾದವು ಮೊದಲು ಉಡುಪಿಯಲ್ಲಿ ಆರಂಭವಾಗಿತ್ತು. ಈ ವಿವಾದ ಮೊದಲು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ ಏಕಸದಸ್ಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಸರ್ಕಾರದ ಕ್ರಮ ಪ್ರಶ್ನಿಸಿ ಮನವಿ ಸಲ್ಲಿಕೆ ಯಾಗಿದ್ದವು. ಸಾಂವಿಧಾನಿಕ ಅಂಶಗಳು ಅಡಕವಾಗಿರುವುದರಿಂದ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವಹಿಸುವಂತೆ ನ್ಯಾಯ ಮೂರ್ತಿ ದೀಕ್ಷಿತ್ ಅವರು ಮುಖ್ಯ ನ್ಯಾಯ ಮೂರ್ತಿ ರಿತುರಾಜ್ ಅವಸ್ತಿ ಅವರನ್ನು ಕೋರಿದ್ದರು.
ಫೆ.9ರಂದು ಮುಖ್ಯ ನ್ಯಾಯಮೂರ್ತಿಗಳು ಪೂರ್ಣಪೀಠ ರಚಿಸಿ ಫೆ.10ರಿಂದಲೇ ವಿಚಾರಣೆ ಆರಂಭಿಸಿದ್ದರು. ಇಡೀ ಕಲಾಪ ವನ್ನು ಅರ್ಜಿದಾರರ ಒಪ್ಪಿಗೆಯೊಂದಿಗೆ ಯೂಟ್ಯೂಬ್‍ನಲ್ಲಿ ಲೈವ್ ಸ್ಟ್ರೀಮ್ ಮಾಡಲು ಪೀಠವು ನಿರ್ಧರಿಸಿತು. ವಚ್ರ್ಯುವಲ್ ವಿಚಾರಣೆಗೆ ಕರ್ನಾಟಕ ಹೈಕೋರ್ಟ್‍ನಲ್ಲಿ ಜೂಮ್ ಮೀಟ್ ಸಾಫ್ಟ್ ವೇರ್ ಬಳಸಲಾಗುತ್ತಿದ್ದು, ಇಲ್ಲಿ ಗರಿಷ್ಠ 500 ಮಂದಿ ಮಾತ್ರ ಕಲಾಪದಲ್ಲಿ ಭಾಗ ವಹಿಸಬಹುದು ಅಥವಾ ವೀಕ್ಷಿಸಬಹುದು.
ಇಷ್ಟು ಜನರು ಏಕಕಾಲದಲ್ಲಿ ಲಾಗಿನ್ ಆದರೆ ತಾಂತ್ರಿಕ ಸಮಸ್ಯೆಗಳು ಸೃಷ್ಟಿಯಾಗುವ ಸಾಧ್ಯತೆ ಉಂಟು. ಇದರಿಂದ ವಕೀಲರು ಮತ್ತು ಆಯ್ದ ಮಾಧ್ಯಮದವರಿಗೆ ಜೂಮ್ ಮೀಟ್‍ನಲ್ಲಿ ಅವಕಾಶ ಕಲ್ಪಿಸಿದ ಹೈಕೋರ್ಟ್‍ನ ಕಂಪ್ಯೂಟರ್ ವಿಭಾಗವು ಆಸಕ್ತರಿಗೆ ಕಲಾಪವನ್ನು ಯೂಟ್ಯೂಬ್‍ನಲ್ಲಿ ವೀಕ್ಷಿಸುವಂತೆ ಸೂಚಿಸಿತ್ತು.
ಹಿಜಾಬ್ ಪ್ರಕರಣ ದೇಶವಲ್ಲದೆ ಹೊರ ದೇಶಗಳಲ್ಲೂ ಭಾರೀ ಕುತೂಹಲ ಸೃಷ್ಟಿಸಿದ್ದರಿಂದ ಅಪಾರ ಮಂದಿ ಹೈಕೋರ್ಟ್‍ನ ಯೂಟ್ಯೂಬ್ ಚಾನಲ್ ಮೂಲಕ ಕಲಾಪವನ್ನು ವೀಕ್ಷಿಸಿದ್ದಾರೆ. ಒಂದು ಹಂತದಲ್ಲಿ ಹಿಜಾಬ್ ಪ್ರಕರಣದ ಲೈವ್ ಸ್ಟ್ರೀಮ್‍ನಲ್ಲೇ ಗರಿಷ್ಠ 25 ಸಾವಿರ ಮಂದಿ ವೀಕ್ಷಿಸಿದ್ದು, ಇದು ಭಾರತದ ನ್ಯಾಯಂಗ ಇತಿಹಾಸದಲ್ಲೇ ವಿನೂತನ ಸಾಧನೆ ಎಂಬುದು ಹೆಗ್ಗಳಿಕೆ.
ನ್ಯಾಯಾಂಗದಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಇ- ಸಂಸ್ಥೆಯು ಎಲ್ಲ ನ್ಯಾಯಾಲಯಗಳ ಕಲಾಪವನ್ನ ಯೂಟ್ಯೂಬ್‍ನಲ್ಲಿ ಲೈವ್ ಸ್ಟ್ರೀಮ್ ಮಾಡಲು ಆದೇಶಿಸಿದೆ. ಇದರ ಭಾಗವಾಗಿ ದೇಶದಲ್ಲೇ ಮೊದಲ ಬಾರಿಗೆ ಗುಜರಾತ್ ಹೈಕೋರ್ಟ್ ಯೂಟ್ಯೂಬ್ ಲೈವ್ ಸ್ಟ್ರೀಮಿಂಗ್ ಆರಂಭಿಸಿತ್ತು. ಇದರ ನಂತರ ಕರ್ನಾಟಕ ಹೈಕೋರ್ಟ್ ಸಹ ಇಂದಿನ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಅವರ ಸೂಚನೆ ಮೇರೆಗೆ ಪ್ರಾಯೋಗಿಕವಾಗಿ ಕಲಾಪವನ್ನು ಲೈವ್ ಸ್ಟ್ರೀಮ್ ಮಾಡುವ ಪ್ರಕ್ರಿಯೆಯನ್ನು ಆರಂಭಿಸಿತು.
ನ್ಯಾಯಮೂರ್ತಿ ಓಕಾ ಬಳಿಕ ಮುಖ್ಯ ನ್ಯಾಯ ಮೂರ್ತಿಯಾಗಿ ಬಂದಿರುವ ರಿತುರಾಜ್ ಆವಸ್ತಿಯವರು ಕಲಾಪ ಲೈವ್‍ಸ್ಟ್ರೀಮ್ ಮಾಡುವುದನ್ನು ಕಡ್ಡಾಯ ಮಾಡುವಂತೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿಗಳ ಮನವಿಗಳ ಹಿನ್ನೆಲೆಯಲ್ಲಿ ಕರ್ನಾಟಕ ನ್ಯಾಯಾಲಯಗಳ ಕಲಾಪಗಳ ನೇರಪ್ರಸಾರ(ಲೈವ್ ಸ್ಟ್ರೀಮ್ ) ಮತ್ತು ರೆಕಾರ್ಡಿಂಗ್ ನಿಯಮಗಳು 2021ನ್ನು ಜಾರಿ ಮಾಡಿ ಜ.1ರಿಂದಲೇ ಅಸ್ತಿತ್ವಕ್ಕೆ ಬರುವಂತೆ ಆದೇಶ ಮಾಡಿದ್ದರು.
ಆ ಬಳಿಕ ಪ್ರತಿದಿನ ಹೈಕೋರ್ಟ್‍ನ ಕೆಲವು ಪೀಠಗಳ ವಿಚಾರಣೆಯನ್ನು ಯೂಟ್ಯೂಬ್ ಚಾನಲ್‍ನಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುತ್ತಿದೆ. ಹಿಜಾಬ್ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ ಪರಿಣಾಮ ಜನಸಮುದಾಯದಲ್ಲಿ ಉಂಟಾದ ಭಾರೀ ಕುತೂಹಲದಿಂದಾಗಿ ಕಲಾಪದ ವೀಕ್ಷಣೆ ಮತ್ತು ಚಂದಾದಾರರ ಸಂಖ್ಯೆಯಲ್ಲಿ ಗಣನೀಯ ಏರಿಕೆ ದಾಖಲಾಗಿದೆ.
















ಇನ್ನಷ್ಟು ಸುದ್ದಿಗಳು
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
“ನಾವು ಭಾರತೀಯರೆಂದು ಹೇಳಿರಲಿಲ್ಲವೇ?”- ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದ್ದ ಕುಟುಂಬಗಳು ವಾಪಸ್
ಮದ್ರಸಾ ಅಧ್ಯಾಪಕರ ಮೇಲಿನ ಹಲ್ಲೆ ಅತ್ಯಂತ ಖಂಡನೀಯ- ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ SJM ಕಿನ್ನಿಗೋಳಿ ರೇಂಜ್ ಆಗ್ರಹ