ಮಂಗಳೂರು, ಫೆ.18: ಉಳ್ಳಾಲ ಸಯ್ಯಿದ್ ಮದನಿ ಅರಬಿಕ್ ಕಾಲೇಜಿನಲ್ಲಿ ಸುದೀರ್ಘ ನಾಲ್ಕು ದಶಕಗಳ ಕಾಲ ಮುದರ್ರಿಸ್ ಆಗಿದ್ದ ಪ್ರಮುಖ ವಿದ್ವಾಂಸ ಕೆ.ಎನ್. ಅಬ್ದುಲ್ಲಾ ಮುಸ್ಲಿಯಾರ್ ತಾಝೆಕ್ಕೋಡ್ (ಪೆರಿಂದಲ್ ಮಣ್ಣ, ಮಲಪ್ಪುರಂ ಜಿಲ್ಲೆ, ಕೇರಳ) ಇಂದು ಮುಂಜಾನೆ (ಫೆಬ್ರವರಿ 18,2022 ಶುಕ್ರವಾರ) ತನ್ನ ತಾಝೆಕ್ಕೋಡಿನ ವಸತಿಯಲ್ಲಿ ನಿಧನರಾಗಿದ್ದಾರೆ. ಅವರಿಗೆ ತೊಂಬತ್ತೊಂದು ವಯಸ್ಸಾಗಿತ್ತು.
ತಾಝೆಕ್ಕೋಡ್ ಮೊಹಲ್ಲಾ ಖಾಝಿ ಮತ್ತು ಅಧ್ಯಕ್ಷರಾಗಿದ್ದರು.ಅವರ ನಿಧನಕ್ಕೆ ಸುನ್ನೀ ಯುವಜನ ಸಂಘ ರಾಜ್ಯ ಸಮಿತಿಯು ತೀವ್ರ ಸಂತಾಪ ವ್ಯಕ್ತಪಡಿಸಿದೆ
ಪತ್ನಿ ಆಸಿಯಾ ಮಡತ್ತೊಡಿ,ಮಕ್ಕಳಾದ ಫಾರೂಖ್,ಖದೀಜ,ಅಸ್ಮಾ,ಅಳಿಯ ಮಂಗಳೂರು ಜೆಪ್ಪು ಮುದರ್ರಿಸ್ ಮುಹಮ್ಮದ್ ಮದನಿ ಸಮೇತ ಅಪಾರ ಬಂಧು ಬಳಗ ಮತ್ತು ಸಾವಿರಾರು ಶಿಷ್ಯಂದಿರನ್ನು ಅವರು ಅಗಲಿದ್ದಾರೆ. ದಫನ ಕಾರ್ಯವು ಇಂದು ಸಂಜೆ ನಾಲ್ಕು ಗಂಟೆಗೆ ತಾಝೆಕ್ಕೋಡ್ ಜುಮಾ ಮಸ್ಜಿದ್ ಖಬರ್ಸ್ಥಾನದಲ್ಲಿ ನಡೆಯಲಿದೆ.
ತಾಜುಲ್ ಉಲಮಾರ ಶಿಷ್ಯರಲ್ಲಿ ಪ್ರಮುಖರೂ, ಸಮಸ್ತ ಮುಶಾವರ ಸದಸ್ಯರೂ ಆಗಿದ್ದ ಅವರು ಎಲ್ಲ ಜ್ಞಾನ ಶಾಖೆಗಳಲ್ಲಿ ಪರಿಣತರೂ ಕವಿಯೂ ಉಜ್ವಲ ವಾಗ್ಮಿಯೂ ಆಗಿದ್ದರು.ಅರೇಬಿಕ್ ಕವಿತೆಗಳು ಮತ್ತು ಬುರ್ದಾ ಮತ್ತು ರಝಾನತ್ನ ಕಾವ್ಯಾತ್ಮಕ ಅನುವಾದಗಳನ್ನು ಒಳಗೊಂಡಂತೆ ಅರೇಬಿಕ್ ಮತ್ತು ಮಲಯಾಳಂ ಭಾಷೆಗಳಲ್ಲಿ ವಿವಿಧ ಕೃತಿಗಳನ್ನು ರಚಿಸಿದ್ದಾರೆ. ಸಾವಿರಾರು ಮದನಿ ಉಲಮಾಗಳ ಪ್ರಧಾನ ಗುರುವರ್ಯರೂ ಆಗಿದ್ದಾರೆ.
ಅವರ ಹೆಸರಲ್ಲಿ ಎಸ್.ವೈ.ಎಸ್.ಶಾಖೆಗಳಲ್ಲಿ ಪ್ರಾರ್ಥನಾ ಸಂಗಮಗಳನ್ನು ಏರ್ಪಡಿಸಲು ಮತ್ತು ಮಯ್ಯಿತ್ ನಮಾಝ್ ನಿರ್ವಹಿಸಲು ರಾಜ್ಯಾಧ್ಯಕ್ಷ ಡಾ.ಎಮ್ಮೆಸ್ಸೆಂ ಝೈನೀ ಕಾಮಿಲ್ ವಿನಂತಿಸಿದ್ದಾರೆ.
















ಇನ್ನಷ್ಟು ಸುದ್ದಿಗಳು
ಮಂಗಳೂರಿನ MRPL ಘಟಕದಲ್ಲಿ ಭಾರೀ ಸ್ಫೋಟ: ದಟ್ಟ ಹೊಗೆ, ಸುತ್ತಮುತ್ತಲಿನ ಮನೆಗಳಿಗೆ ಹಾನಿ- ಹಲವರಿಗೆ ಗಾಯ
ಅಣು-ವಿಕಿರಣ ಸೋರಿಕೆಯಾದರೆ ಏನು ಮಾಡಬೇಕು?; ಜಾಗರೂಕತೆಯ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದ CDAA
ಗಂಟೆಗಟ್ಟಲೆ ರೀಲ್ಸ್ ಸ್ಕ್ರೋಲಿಂಗ್- ದೇಹದ ಮೇಲೆ ಪರಿಣಾಮ!
ಒಮಾನ್:ಕಾರ್ಮಿಕ ಕಾಯ್ದೆ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ- ಫೀಲ್ಡ್ ತಪಾಸಣೆಗೆ ಮುಂದಾದ ಕಾರ್ಮಿಕ ಸಚಿವಾಲಯ
ರಸ್ತೆ ಬದಿಯ ಪೈಪ್ ಸರಿಪಡಿಸಿದ ಭಾರತೀಯ ಡೆಲಿವರಿ ಯುವಕ – ದುಬೈ ಸರ್ಕಾರದ ಗೌರವ
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್