janadhvani

Kannada Online News Paper

ಸರ್ಕಾರಿ ನೌಕರನಿಂದ ಗಾಂಧಿ ಹಂತಕ ಗೋಡ್ಸೆಗೆ ಜಯಕಾರ- ಜಾಲತಾಣದಲ್ಲಿ ವ್ಯಾಪಕ ಆಕ್ರೋಶ

ಬೆಳ್ತಂಗಡಿ(ಫೆ.3):- ರಾಷ್ಟ್ರಪಿತ ಮಹಾತ್ಮ ಗಾಂಧಿಯನ್ನು ಹತ್ಯೆಗೈದ ದಿನವಾದ ಜನವರಿ 30 ರಂದು ಸರ್ಕಾರಿ ನೌಕರನಾದ ಬಾರ್ಯ ಗ್ರಾಮದ ಅಂಛೆ ಕಚೇರಿಯಲ್ಲಿ ಅಂಚೆ ಪಾಲಕನಾಗಿರುವ ಅಕ್ಷಯ್ ಕುಮಾರ್ ಎಂಬಾತ ಗಾಂಧಿಯನ್ನು ಹತ್ಯೆಗೈದ ನಾಥುರಾಮ್ ಗೋಡ್ಸೆ ಪರವಾಗಿ ವಾಟ್ಸಾಪ್ ಸ್ಟೇಟಸ್ ಹಾಕಿದ್ದು, ವ್ಯಾಪಕ ಸಾರ್ವಜನಿಕ ಆಕ್ರೋಶಕ್ಕೆ ಗುರಿಯಾಗಿದೆ.

ಅಖಂಡ ಭಾರತದ ವಿಭಜನೆಗೆ ಸೇಡು ತೀರಿಸಿಕೊಂಡ ದಿನ,ಹಿಂದೂ ಹುಲಿ ನಾಥುರಾಮ್ ಗೋಡ್ಸೆ,ಜೈ ನಾಥೂರಾಮ್ ಎಂಬ ಟೈಟಲ್ ಹಾಕಿದ ಪೋಸ್ಟರ್ ನ್ನು ತನ್ನ ವಾಟ್ಸಪ್ ಸ್ಟೇಟಸ್ ಗೆ ಹಾಕಿ ರಾಷ್ಟ್ರಪಿತ ಗಾಂಧಿ ಹತ್ಯೆಯನ್ನು ಸಮರ್ಥಿಸಿ ಹಾಗೂ ಹತ್ಯಕೋರ ಗಾಂಧಿ ಹಂತಕ ನಾಥುರಾಮ್ ಗೋಡ್ಸೆಯ ಪರವಾಗಿ ಸ್ಟೇಟಸ್ ಹಾಕಿ ಈ ದೇಶದ ಶಾಂತಿಪ್ರಿಯ ಜನರ ಮನಸ್ಸನ್ನು ಘಾಸಿಗೊಳಿಸಿದ್ದಾನೆ.

ಇಂತಹಾ ದೇಶದ್ರೋಹ ಕೃತ್ಯವನ್ನು ಎಸಗಿ ಗಲಭೆಗೆ ಪ್ರಚೋದನೆ ಎಸಗುವಂತಹ ಕೃತ್ಯವನ್ನು ಎಸಗಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರಿ ಸೇವೆಯಲ್ಲಿ ಇದ್ದು ದೇಶದ್ರೋಹ ಕೃತ್ಯ ಎಸಗಿದ ಈತನ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.