ಅಬುಧಾಬಿ: ಕೋವಿಡ್ 19 ರೂಪಾಂತರ ಒಮಿಕ್ರಾನ್ ಹರಡುವ ಹಿನ್ನೆಲೆಯಲ್ಲಿ ,ನೈಜೀರಿಯಾ, ಕೀನ್ಯಾ, ರುವಾಂಡಾ ಮತ್ತು ಇಥಿಯೋಪಿಯಾದಿಂದ ನೇರ ವಿಮಾನಗಳಲ್ಲಿ ಯುಎಇಗೆ ಆಗಮಿಸುವವರಿಗೆ ರಾಷ್ಟ್ರೀಯ ತುರ್ತು ಪರಿಸ್ಥಿತಿ, ಬಿಕ್ಕಟ್ಟು ಮತ್ತು ವಿಪತ್ತು ನಿರ್ವಹಣೆ (NCEMA) ಮತ್ತು ಜನರಲ್ ಸಿವಿಲ್ ಏವಿಯೇಷನ್ ಅಥಾರಿಟಿ ನಿನ್ನೆ ಹೊಸ ಪ್ರಯಾಣ ಮಾನದಂಡಗಳನ್ನು ಬಿಡುಗಡೆ ಮಾಡಿದೆ.
ತಿದ್ದುಪಡಿ ಮಾಡಲಾದ ಕಾನೂನಿನ ಪ್ರಕಾರ, ಈ ನಾಲ್ಕು ದೇಶಗಳಿಂದ ನೇರ ವಿಮಾನಗಳಲ್ಲಿ ಯುಎಇಗೆ ಆಗಮಿಸುವವರು 48 ಗಂಟೆಗಳ ಒಳಗೆ ಪಡೆದ ಪಿಸಿಆರ್ ನೆಗಟಿವ್ ಫಲಿತಾಂಶವನ್ನು ಹೊಂದಿರಬೇಕು. ಅದೂ ಅಲ್ಲದೇ, ಹೊರಟು 6 ಗಂಟೆಗಳ ಒಳಗೆ ವಿಮಾನ ನಿಲ್ದಾಣದಲ್ಲೂ ರಾಪಿಡ್ ಟೆಸ್ಟ್ ನ್ನೂ ನಡೆಸಬೇಕಾಗಿದೆ.
ಟ್ರಾನ್ಸಿಟ್ ಫ್ಲೈಟ್‌ಗಳಲ್ಲಿ ಯುಎಇಗೆ ಆಗಮಿಸುವವರು, 48 ಗಂಟೆಗಳ ಒಳಗಿನ PCR ಋಣಾತ್ಮಕ ಪರೀಕ್ಷೆಯ ಫಲಿತಾಂಶ ಮತ್ತು ಹೊರಟು 6 ಗಂಟೆಗಳ ಒಳಗೆ ವಿಮಾನ ನಿಲ್ದಾಣದಲ್ಲಿ ನಡೆಸಿದ ಪಿಸಿಆರ್ ಪರೀಕ್ಷೆಯ ಫಲಿತಾಂಶವನ್ನೂ ಕೈಯಲ್ಲಿರಿಸಬೇಕಾಗಿದೆ. ಜೊತೆಗೆ ಯುಎಇ ಗೆ ಹೊರಡುವ ಮುಂಚಿತವಾಗಿ ಟ್ರಾನ್ಸಿಟ್ ವಿಮಾನ ನಿಲ್ದಾಣದಲ್ಲೂ ರಾಪಿಡ್ ಟೆಸ್ಟ್ ನಡೆಸುವ ಅಗತ್ಯವಿದೆ.
ವಿಮಾನಗಳ ವೇಳಾಪಟ್ಟಿಯಲ್ಲಿನ ಬದಲಾವಣೆಗಳು, ಯಾವುದೇ ವಿಳಂಬಗಳು ಅಥವಾ ಇತರ ಅಡಚಣೆಗಳಿಲ್ಲ ಎಂಬುದನ್ನು ಖಚಿತಪಡಿಸಲು , ಪ್ರಯಾಣಿಕರು ತಮ್ಮ ವಿಮಾನಯಾನ ಸಂಸ್ಥೆಗಳೊಂದಿಗೆ ನಿಯಮಿತವಾಗಿ ಸಂವಹನ ನಡೆಸಬೇಕು ಎಂದು ಹೊಸ ಮಾನದಂಡಗಳಲ್ಲಿ ಪ್ರತ್ಯೇಕವಾಗಿ ಹೇಳಲಾಗಿದೆ.
















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?
ಅನಿವಾಸಿಗಳಿಗೆ ನೆಮ್ಮದಿ: ಕುವೈತ್ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳ ಸಂಚಾರಕ್ಕೆ ಅನುಮತಿ
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
ಸೌದಿಯಲ್ಲಿ ತಪಾಸಣೆ ತೀವ್ರ: ಒಂದೇ ವಾರದಲ್ಲಿ 10,700 ನಿಯಮ ಉಲ್ಲಂಘಕರ ಬಂಧನ- 8,000 ಮಂದಿ ಗಡೀಪಾರು
ದುಬೈ ಏರ್ಪೋರ್ಟ್ನಲ್ಲಿ ಅನಾಥ ಬ್ಯಾಗ್: ಓಪನ್ ಮಾಡಿದ ಅಧಿಕಾರಿಗಳಿಗೆ ಶಾಕ್- ಒಳಗೇನಿತ್ತು ಗೊತ್ತೇ?
ದುಬೈ ಮಿನಿಬಸ್ ಅಪಘಾತ: ಆರು ಮಂದಿ ಭಾರತೀಯರು ಸಹಿತ ಎಂಟು ಮಂದಿ ಮೃತ್ಯು
ಸೌದಿ ಅರೇಬಿಯಾದಲ್ಲಿ ತೀವ್ರಗೊಂಡ ಬಿಸಿಲಿನ ಬೇಗೆ- ಹವಾಮಾನ ಇಲಾಖೆಯಿಂದ ಹೈ ಅಲರ್ಟ್!
ಅಪಾರ್ಟ್ಮೆಂಟ್ ಕೇಂದ್ರೀಕರಿಸಿ ಅನೈತಿಕ ಚಟುವಟಿಕೆ- ನಜ್ರಾನ್ನಲ್ಲಿ 12 ವಿದೇಶಿಗರ ಬಂಧನ
ಕುವೈತ್ ವಿಮಾನ ನಿಲ್ದಾಣದ ಮೇಲೆ ದಾಳಿ: ಗಾಯಗೊಂಡವರಲ್ಲಿ 13 ಮಂದಿ ಭಾರತೀಯರು