janadhvani

Kannada Online News Paper

ಪ್ರತಿಭೋತ್ಸವ ಪ್ರತಿಭೆಗಳು ಇತರರಿಗೆ ಮಾದರಿಯಾಗಲಿ- ವಖ್ಫ್ ಬೋರ್ಡ್ ಅಧ್ಯಕ್ಷ ಶಾಫೀ ಸಅದಿ

ಮಂಗಳೂರು :ಕಳೆದ ಇಪ್ಪತ್ತು ವರ್ಷಗಳಿಂದ ಕರ್ನಾಟಕ ಎಸ್ಸೆಸ್ಸೆಫ್ ನಡೆಸಿ ಬರುತ್ತಿರುವ ಪ್ರತಿಭೋತ್ಸವಗಳಿಂದ ನೂರಾರು ಪ್ರತಿಭೆಗಳು ಇಂದು ಸಮಾಜದಲ್ಲಿ ಸಾಧನೆಗಳಿಗೆ ಕಾರಣರಾಗುತ್ತಿದ್ದಾರೆ. ಅವರು ಇತರೆ ಯುವ ಸಮೂಹಕ್ಕೆ ಮಾದರಿಯಾಗಿದ್ದು ನೀವೂ ಕೂಡ ನಿಮ್ಮ ನಂತರದ ಯುವಕರಿಗೆ ಮಾದರಿಯಾಗಬೇಕು ಎಂದು ಪ್ರತಿಭಾವಂತ ವಿದ್ಯಾರ್ಥಿಗಳೊಂದಿಗೆ ರಾಜ್ಯ ವಖಫ್ ಬೋರ್ಡ್ ಅಧ್ಯಕ್ಷ ಎನ್.ಕೆ.ಎಂ. ಶಾಫೀ ಸಅದಿ ಬೆಂಗಳೂರು ಕರ್ನಾಟಕ ರಾಜ್ಯ
ಹಮ್ಮಿಕೊಂಡ ಪ್ರತಿಭೋತ್ಸವದಲ್ಲಿ ಅವರು ಮಾತನಾಡುತ್ತಾ ಹೇಳಿದರು.

ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅಬ್ದುಲ್ ಲತೀಫ್ ಸ’ಅದಿ ಶಿವಮೊಗ್ಗ ಅಧ್ಯಕ್ಷತೆ ವಹಿಸಿದ್ದರು. ಕೆ.ಎಂ.ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ವಖಫ್ ಬೋರ್ಡ್ ನೂತನ ಅಧ್ಯಕ್ಷರಾದ ಮೌಲಾನಾ ಎನ್ ಕೆ.ಎಂ ಶಾಫಿ ಸಅದಿ ಬೆಂಗಳೂರುರವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ, ಖಾಝಿ ಇಬ್ರಾಹಿಮ್ ಮುಸ್ಲಿಯಾರ್, ಇನ್ಫಾಲ್ ಮಾಲಿಕ ನಾಸಿರ್ ಚಿಕ್ಕಮಗಳೂರು, ಯಾಕೂಬ್ ಯೂಸುಫ್ ಶಿವಮೊಗ್ಗ, ಶರೀಫ್ ಹಾಜಿ, ಐ.ಎನ್.ಸಿ.ಅಧ್ಯಕ್ಷ ಶೇಖ್ ಬಾವ ದುಬೈ, ಬಿ.ಎಂ. ಮುಮ್ತಾಜ್ ಅಲಿ,ರಾಜ್ಯ ಕೋಶಾಧಿಕಾರಿ ಸುಫ್ಯಾನ್ ಸಖಾಫಿ, ಮೊದಲಾದವರು ಉಪಸ್ಥಿತರಿದ್ದರು.

ಪ್ರತಿಭೋತ್ಸವ ಸಮಿತಿ ಚಯರ್ಮೇನ್ ಕೆ.ಎಂ ಮುಸ್ತಫಾ ನ’ಈಮೀ ಸ್ವಾಗತಿಸಿದರು.ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ ಧನ್ಯವಾದವಿತ್ತರು.