ಅಬುಧಾಬಿ: ದ್ವೇಷ ಪೂರಿತ ವಾರ್ತೆಗಳ ಮೂಲಕ ನಿರಂತರ ವಿವಾದ ಸೃಷ್ಟಿಸಿದ ಝೀ ನ್ಯೂಸ್ ಎಡಿಟರ್ ಇನ್ ಚೀಫ್ ಸುಧೀರ್ ಚೌಧರಿಯನ್ನು ಅಬುಧಾಬಿಯ ಕಾರ್ಯಕ್ರಮದಿಂದ ಹೊರಗಿಡಲಾಗಿದೆ ಎಂಬುದಾಗಿ ವರದಿಯಾಗಿದೆ. ರಾಜಕುಮಾರಿ ಹಿಂದ್ ಫೈಸಲ್ ಅಲ್ ಖಾಸಿಂ, “ತನ್ನ ಶಾಂತಿಯ ನಾಡಿಗೆ ಅಸಹಿಷ್ಣುವಾದ ಈ ಭಯೋತ್ಪಾದಕನನ್ನು ಏಕೆ ಕರೆತರುತ್ತಿದ್ದೀರಿ? ಯುಎಇಗೆ ಇಂತಹ ದ್ವೇಷಿಗಳನ್ನು ಸ್ವಾಗತಿಸುವುದಿಲ್ಲ” ಎಂದು ಹಿಂದ್ ಟೀಟ್ ಮಾಡಿದ್ದರು.
ಅಬುದಾಭಿ ಚಾರ್ಟೆಡ್ ಅಕೌಂಟ್ ಒಕ್ಕೂಟವು ನವೆಂಬರ್ 25, 26ರಂದು ಆಯೋಜಿಸಿದ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರನಾಗಿ ಚೌಧರಿಯವರಿಗೆ ಆಹ್ವಾನ ನೀಡಲಾಗಿತ್ತು. ರಾಜಕುಮಾರಿ ವಿರೋಧ ವ್ಯಕ್ತಪಡಿಸಿದ ಬೆನ್ನಿಗೆ ಅವರನ್ನು ಕಾರ್ಯಕ್ರಮದಿಂದ ಹೊರಗಿಡಲಾಗಿದ್ದು, ಇದನ್ನು ರಾಜಕುಮಾರಿಯವರೇ ತಿಳಿಸಿದ್ದಾರೆ.
ಸಿಎಎ ವಿರೋಧಿ ಹೋರಾಟವನ್ನು ಸುದೀರ್ ಭಯೋತ್ಪಾದನೆ ಎಂಬಂತೆ ಚಿತ್ರಿಕರಿಸಿದ್ದರು. ಕೊರೋನದ ಆರಂಭಿಕ ಕಾಲದಲ್ಲಿ ತಬ್ಲೀಗ್ ಜಮಾಅತ್ ವಿರುದ್ಧ ಝೀ ನ್ಯೂಸ್ ನಿಂತರ ತೇಜೋವಧೆ ನಡೆಸಿತ್ತು. ಭೂಮಿ ಜಿಹಾದ್, ಲವ್ ಜಿಹಾದ್ ಮುಂತಾದ ಸುಳ್ಳು ವರದಿಯನ್ನು ತನ್ನ ಚ್ಯಾನೆಲ್ ಮೂಲಕ ಚೌಧರಿ ನಿರಂತರ ಪ್ರಸಾರ ಮಾಡಿದ್ದರು.
“ಸುಧೀರ್ ಚೌಧರಿಯ ಅಬುಧಾಬಿ ಚಾರ್ಟೆಡ್ ಅಕೌಂಟೆಂಟ್ ಪ್ಯಾನೆಲ್ ಹೊರಗಿಟ್ಟಿದೆ ಎಂದು ಇನ್ಸಿಟಿಟ್ಯೂಟ್ ಆಫ್ ಚಾರ್ಟೆಡ್್ರ ಅಕೌಟೆಂಟ್ ಆಫ್ ಇಂಡಿಯಾ(ಐಡಿಎಐ) ಅಬುಧಾಬಿ ಚಾಪ್ಟರ್ ಸದಸ್ಯರು ಬರೆದ ಪತ್ರದ ಪ್ರತಿಯನ್ನೂ ರಾಜಕುಮಾರಿ ಟೀಟ್ ಮಾಡಿದರು.
“ನಕಲಿ ವರದಿಗಳು, ಇಸ್ಲಾಮೊಫೋಬಿಯ ಕೋಮು ವಿದ್ವೇಷ, ನಕಲಿ ದಾಖಲೆ ತಯಾರು ಮಾಡಿದ ವಿಷಯದಲ್ಲಿ ಚೌಧರಿ ಆರೋಪಿಯಾಗಿದ್ದಾರೆ. ಪ್ರಮುಖ ಪ್ರೊಪೇಶನಲ್ ಸಂಘಟನೆ, ಪ್ರೊಫೆಶನಲ್ ಅಲ್ಲದ ಒಬ್ಬ ಪತ್ರಕರ್ತನಿಗೆ ವೇದಿಕೆ ನೀಡಿ ನಮ್ಮ ನಾಡಿನ ಗೌರವ, ಅಂತಸ್ತನ್ನು ಕಡಿಮೆ ಮಾಡುವುದಾ ಎಂದು ರಾಜಕುಮಾರಿ ಪ್ರಶ್ನಿಸಿದ್ದಾರೆ. ನಂತರ ಸುಧೀರ್ ಚೌಧರಿಯವರನ್ನು ಕಾರ್ಯಕ್ರಮದಿಂದ ಹೊರಗಿಡಲಾಯಿತು. ಎಂದು ರಾಜಕುಮಾರಿ ಟೀಟ್ ಮಾಡಿದ್ದಾರೆ.
ಭಾರತದಲ್ಲಿ ಮುಸ್ಲಿಮರನ್ನು ಗುರಿಯಾಗಿಟ್ಟು ಕಠೋರ ಇಸ್ಲಾಮೋ ಪೋಬಿಕ್ ಶೋಗಳಿಗೆ ಹೆಸರುವಾಸಿಯಾದ ಬಲಪಂಥೀಯ ಆ್ಯಂಕರ್ ಖ್ಯಾತಿಗೆ ಸುಧೀರ್ ಚೌಧರಿ ಹೆಸರುವಾಸಿಯಾಗಿದ್ದಾರೆ. ಅವರ ಪ್ರೈಂ ಟೈಮ್ ಶೋಗಳು ಮುಸ್ಲಿಮರನ್ನು ಆಕ್ರಮಿಸಲು ಪ್ರೇರೇಪಿಸುವ ರೀತಿಯಲ್ಲಿವೆ. ನೀವು ಯಾಕೆ ಅಸಹಿಷ್ಣುವಾದ ಒಬ್ಬ ಭಯೋತ್ಪಾದಕನನ್ನು ಯುಎಇಗೆ ಕರೆತರುವುದು. ಶಾಂತವಾದ ನನ್ನ ದೇಶಕ್ಕೆ ನೀವು ಇಸ್ಲಾಮೊಫೋಬಿಯ ಮತ್ತು ದ್ವೇಷವನ್ನು ಯಾಕೆ ತರುತ್ತಿದ್ದೀರಿ. ಎಂದು ರಾಜಕುಮಾರಿ ಟ್ವಿಟ್ ಮಾಡಿ ಪ್ರಶ್ನಿಸಿದ್ದರು.

















ಇನ್ನಷ್ಟು ಸುದ್ದಿಗಳು
ಇಸ್ಲಾಂ ಧರ್ಮ ಮುಸ್ಲಿಮೇತರರ ವಿರೋಧಿಯಲ್ಲ; ಸಹಬಾಳ್ವೆಯೇ ಅದರ ಮೂಲ ಮಂತ್ರ- ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಕರ್ನಾಟಕ ಜಮ್ಇಯ್ಯತುಲ್ ಉಲಮಾ ಮುಶಾವರಕ್ಕೆ ಶಾಫಿ ಸಅದಿ ನೇಮಕ- ಸುಲ್ತಾನುಲ್ ಉಲಮಾ ಘೋಷಣೆ
ಉಳ್ಳಾಲ ದರ್ಗಾ ಆಡಳಿತ ಮಂಡಳಿ ಚುನಾವಣೆ: ಅಧಿಕಾರಿಗಳ ನೇಮಕ ಮಾಡಿದ ವಕ್ಫ್ ಮಂಡಳಿ
ನಾಳೆ (ಮೇ 2): ಪುತ್ತೂರಿನಲ್ಲಿ ‘ಮಾದರಿ ಮದುವೆ ಅಭಿಯಾನ’ ಸಮಾರೋಪ- ಕರ್ನಾಟಕ ಮುಸ್ಲಿಂ ಜಮಾಅತ್ ಯಶಸ್ವಿಗೆ ಕರೆ
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಆತ್ಮಕಥೆ ‘ಪ್ರೀತಿಯಿಂದ’ ಇಂದು ಬಿಡುಗಡೆ
ನಾಳೆ ‘ಮಾದರಿ ಮದುವೆ ಅಭಿಯಾನ’ ಸಮಾರೋಪ : ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ
ಎಸ್ವೈಎಸ್ ಮಾದರಿ ಮದುವೆ ಅಭಿಯಾನ: ನಾಳೆ ಪುತ್ತೂರಿನಲ್ಲಿ ಸಮಾರೋಪ ಸಮ್ಮೇಳನ
ಏರ್ ಇಂಡಿಯಾ ಎಕ್ಸ್ಪ್ರೆಸ್: ಹೆಚ್ಚಿನ ವಿಮಾನ ಸೇವೆಗಳ ಪುನರಾರಂಭ
ಗ್ರಾಹಕರ ಗಮನಕ್ಕೆ: ಎಲ್ಪಿಜಿ ಸಿಲಿಂಡರ್ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ