janadhvani

Kannada Online News Paper

ಹಳೆಯಂಗಡಿ: ಟಯರ್ ಸ್ಪೋಟಗೊಂಡು ಹೆದ್ದಾರಿಯಲ್ಲಿಯೇ ಮಗುಚಿಬಿದ್ದ ಕಾರು

ವರದಿ: ಅದ್ದಿ ಬೊಳ್ಳೂರು

ಮಂಗಳೂರು: ನ,13:ಚಲಿಸುತ್ತಿದ್ದ ಹಾಗೆ ಕಾರಿನ ಮುಂದಿನ ಟಯರ್ ಸ್ಪೋಟಗೊಂಡು ಹೆದ್ದಾರಿಯಲ್ಲಿ ಮಗುಚಿ ಬಿದ್ದ ಘಟನೆ ಹಳೆಯಂಗಡಿ ಸಮೀಪ ಪಾವಂಜೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.

ಉಡುಪಿಯಿಂದ ಮಂಗಳೂರು ಕಡೆಗೆ ಮಾರುತಿ ಸ್ವಿಫ್ಟ್ ಕಾರಿನಲ್ಲಿ ತೆರಳುತ್ತಿದ್ದ ಮುಸ್ತಫ ಎಂಬುವವರು ಪಾವಂಜೆ ದೇವಸ್ಥಾನದ ಮುಂದಿನ ಹೆದ್ದಾರಿಯಲ್ಲಿ ಚಲಿಸುತ್ತಿದ್ದಂತೆ ಮುಂದಿನ ಟಯರ್ ಸ್ಪೋಟಗೊಂಡ ಪರಿಣಾಮ ಚಾಲಕನ ನಿಯಂತ್ರಣಕ್ಕೆ ಬಾರದ ಕಾರು ಮಗುಚಿ ಬಿದ್ದು ಪಕ್ಕದ ರಸ್ತೆ ಬದಿಯಲ್ಲಿ ಪಾರ್ಕ್ ಮಾಡಿದ್ದ ಇನ್ನೊಂದು ಕಾರಿಗೆ ಗುದ್ದಿದೆ

ಚಾಲಕ ಸೀಟ್ ಬೆಲ್ಟ್ ಧರಿಸಿದ್ದರಿಂದ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ, ಘಟನೆಯಿಂದಾಗಿ ಹೆದ್ದಾರಿಯಲ್ಲಿ ಕೆಲಹೊತ್ತು ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದ್ದರಿಂದ ಮಂಗಳೂರು ಉತ್ತರ ಸಂಚಾರಿ ಠಾಣೆಯ ಪೊಲೀಸರು ಸ್ಥಳಕ್ಕಾಗಮಿಸಿ ಸಂಚಾರ ಸುಗಮಗೊಳಿಸಿದರು.