ಮಂಗಳೂರು: ನಿನ್ನೆಯಷ್ಟೇ ಬಂಟ್ವಾಳದ ಅಮ್ಟಾಡಿಯ 16 ವರ್ಷದ ಬಾಲಕಿಗೆ ಮತ್ತು ಬರುವ ಚಾಕಲೇಟ್ ನೀಡಿ ಅಪಹರಣ ಮಾಡಿ ಸಾಮೂಹಿಕವಾಗಿ ಅತ್ಯಾಚಾರ ನಡೆಸಲಾಗಿದೆ ಎಂಬ ಸುದ್ದಿ ಹಬ್ಬಿತ್ತು. ಆದರೆ ಪೊಲೀಸ್ ತನಿಖೆ ಈ ಪ್ರಕರಣಕ್ಕೆ ತಿರುವು ನೀಡಿದೆ. ಪೊಲೀಸರು ನಾಲ್ವರು ಆರೋಪಿಗಳನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದ್ದು, ಮಾಹಿತಿ ಲಭ್ಯವಾಗಿದೆ.
ಘಟನೆಯ ವಿವರ: ಅಕ್ಟೋಬರ್ 8ರಂದು ಈ ಘಟನೆ ನಡೆದಿದ್ದು, ಮಂಗಳೂರಿನ ಸಿಟಿ ಮಹಲ್ ಬಳಿ ಬಾಲಕಿ ಆರೋಪಿಗಳನ್ನು ಭೇಟಿಯಾಗಿದ್ದಾಳೆ. ಬಾಲಕಿ ಆರೋಪಿಗಳಲ್ಲಿ ಒಬ್ಬನಾದ ಉಡುಪಿ ಜಿಲ್ಲೆಯ ಕಾಪು ನಿವಾಸಿ ಶರತ್ ಶೆಟ್ಟಿ ಎಂಬಾತನ ಫೇಸ್ ಬುಕ್ ಸ್ನೇಹಿತೆಯಾಗಿದ್ದಳು. ಬಳಿಕ ಮೊಬೈಲ್ನಲ್ಲಿ ಇಬ್ಬರ ನಡುವೆ ಸಲುಗೆಯ ಮಾತುಕತೆಯಾಗಿದೆ. ಆರೋಪಿ ಶರತ್ ಬಾಲಕಿಯನ್ನು ತನ್ನ ಸ್ನೇಹಿತ ಮಾರುತಿ ಮಂಜುನಾಥ್ಗೆ ಪರಿಚಯ ಮಾಡಿಕೊಟ್ಟಿದ್ದಾನೆ. ಬಳಿಕ ಬಾಲಕಿ ಮಂಜುನಾಥ್ ಜೊತೆಗೆ ಸಲುಗೆಯಿಂದ ಇದ್ದಳು. ಮಂಜುನಾಥ್ ಜೊತೆ ವಾಟ್ಸಪ್ನಲ್ಲಿ ಅಶ್ಲೀಲ ವಿಡಿಯೋ ಚಾಟ್ ಕೂಡಾ ಮಾಡಿದ್ದಳು.
ಅಕ್ಟೋಬರ್ 8ರಂದು ಬಾಲಕಿಯನ್ನು ಆರೋಪಿ ಶರತ್ ಶೆಟ್ಟಿ ಮಂಗಳೂರಿಗೆ ಬರಲು ಹೇಳಿದ್ದಾಳೆ. ನಗರದ ಸಿಟಿ ಮಹಲ್ ಬಳಿ ಭೇಟಿಯಾದ ಇವರು ಬಳಿಕ ಲಾಡ್ಜ್ಗೆ ತೆರಳಿದ್ದಾರೆ. ಲಾಡ್ಜ್ ನಲ್ಲಿ ಶರತ್ ಶೆಟ್ಟಿ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದು, ಬಳಿಕ ಶರತ್ ಶೆಟ್ಟಿ ತನ್ನ ಸ್ನೇಹಿತ ಇದಾಯತ್ತುಲ್ಲನಿಗೆ ಕರೆ ಮಾಡಿ ಬರಲು ಹೇಳಿದ್ದಾನೆ.
ಇದಾಯುತ್ತಲ್ಲನೂ ಬಾಲಕಿಯ ಅತ್ಯಾಚಾರ ಮಾಡಿ ತೆರಳಿದ್ದಾನೆ. ಅತ್ಯಾಚಾರ ಮಾಡಲು ಅವಕಾಶ ನೀಡಿದ್ದ ಲಾಡ್ಜ್ ಸಿಬ್ಬಂದಿ ಸತೀಶ್, ಇಬ್ಬರು ಅತ್ಯಾಚಾರ ಮಾಡಿದ ಬಳಿಕ ಬಾಲಕಿಗೆ ಲೈಂಗಿಕ ಶೋಷಣೆ ಮಾಡಿದ್ದಾನೆ. ನಂತರ ಬಾಲಕಿ ಮಂಗಳೂರಿನಿಂದ ಬಸ್ ಮೂಲಕ ಬಂಟ್ವಾಳಕ್ಕೆ ತೆರಳಿದ್ದಾಳೆ. ಅತ್ಯಾಚಾರವಾದ ಬಗ್ಗೆ ಸ್ಥಳೀಯನೋರ್ವನ ಬಳಿ ಹೇಳಿ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾಳೆ.
ಬಾಲಕಿ ದೂರು ದಾಖಲು ಮಾಡುತ್ತಿದ್ದಂತೆಯೇ ಪೊಲೀಸ್ ತಂಡಗಳು ಆರೋಪಿಗಳ ಹೆಡೆಮುರಿ ಕಟ್ಟಿದೆ. ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿಯಲ್ಲಿ ಕಾಪು ನಿವಾಸಿ ಕೆ. ಶರತ್ ಶೆಟ್ಟಿ, ಮಾರುತಿ ಮಂಜುನಾಥ್, ಲಾಡ್ಜ್ ಸಿಬ್ಬಂದಿ ಸತೀಶ್ ಮತ್ತು ಇದಾಯುತ್ತಲ್ಲನನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸಕ್ಷನ್ 366 (A), 376 (D), 506 ಮತ್ತು ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.
ಆದರೆ, ಅತ್ಯಾಚಾರ ಬಳಿಕ ಯುವತಿಯನ್ನು ಬ್ರಹ್ಮರಕೊಟ್ಲುವಿನಲ್ಲಿ ಕಾರಿನಲ್ಲಿ ಬಂದಿಳಿಸಲಾಗಿದೆ ಮತ್ತು ಅದು ಸಿಸಿ ಟಿವಿಯಲ್ಲಿ ದಾಖಲಾಗಿದೆ ಎಂದು ವರದಿಯಾಗಿತ್ತು. ಇದರ ಬಗ್ಗೆ ಸಾರ್ವಜನಿಕರಿಗೆ ಸಂದೇಹ ಮುಂದುವರಿದಿದೆ.