ಮಸ್ಕತ್ :ಒಮಾನ್ ಭಾರತೀಯರ ಮೇಲಿನ ಪ್ರವೇಶ ನಿಷೇಧವನ್ನು ತೆಗೆದುಹಾಕಿದೆ. ಲಸಿಕೆಯ ಎರಡು ಡೋಸ್ ತೆಗೆದುಕೊಂಡವರು ಸೆಪ್ಟೆಂಬರ್ 1ರಿಂದ ದೇಶಕ್ಕೆ ಮರಳಬಹುದು.
ಎರಡನೇ ಡೋಸ್ ಪಡೆದು ಕನಿಷ್ಠ 14 ದಿನಗಳು ಕಳೆದವರಿಗೆ ಮಾತ್ರ ಪ್ರವೇಶ ಸಾಧ್ಯ ಎಂದು ನಾಗರಿಕ ವಿಮಾನಯಾನ ಪ್ರಾಧಿಕಾರ ಘೋಷಿಸಿದೆ.
ಭಾರತ ಸೇರಿದಂತೆ 18 ದೇಶಗಳ ಪ್ರಯಾಣಿಕರ ನಿಷೇಧವನ್ನು ತೆಗೆದುಹಾಕಲಾಗಿದೆ. ಒಮಾನ್ ಅನುಮೋದಿಸಿದ ಲಸಿಕೆಗಳನ್ನು ಪಡೆದವರಿಗೆ ಮಾತ್ರ ಮರಳಲು ಅವಕಾಶ. ಆಕ್ಸ್‌ಫರ್ಡ್ ಅಸ್ಟ್ರಾಜೆನೆಕಾ, ಫೈಜರ್, ಸ್ಪುಟ್ನಿಕ್ ಮತ್ತು ಸಿನೋವಾಕ್ ಲಸಿಕೆಗಳನ್ನು ಒಮಾನ್‌ನಲ್ಲಿ ಅನುಮೋದಿಸಲಾಗಿದೆ.
ರಸ್ತೆ , ಸಮುದ್ರ ಮತ್ತು ವಾಯು ಮಾರ್ಗಗಳ ಮೂಲಕ ಒಮಾನ್‌ಗೆ ತೆರಳುವ ಎಲ್ಲಾ ಪ್ರಯಾಣಿಕರಿಗೆ ಇದು ಅನ್ವಯ.ಕಳೆದ ನಾಲ್ಕು ತಿಂಗಳಿನಿಂದ ಒಮಾನ್‌ಗೆ ಪ್ರಯಾಣ ನಿಷೇಧ ಜಾರಿಯಲ್ಲಿದೆ. ಇದರನ್ವಯ, ಸಾವಿರಾರು ವಲಸಿಗರು ಭಾರತದಲ್ಲಿ ಉಳಿಯುವಂತಾಗಿದೆ. ಒಮಾನಿನ ಹೊಸ ನಿರ್ಧಾರವು ಸಮಾಧಾನಕರವಾಗಿದೆ.ಇಂದು ಸಂಜೆ ವಿವಿಧ ವಿಮಾನಯಾನ ಸಂಸ್ಥೆಗಳು ಟಿಕೆಟ್ ಬುಕ್ಕಿಂಗ್ ಆರಂಭಿಸುವ ಸಾಧ್ಯತೆಯಿದೆ.
















ಇನ್ನಷ್ಟು ಸುದ್ದಿಗಳು
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ