ಕಿನ್ಯಾ :ಭಾರತದ ಸ್ವಾತಂತ್ರ್ಯೊತ್ಸವದ ಅಮೃತ ವರ್ಷಾಚರಣೆಯ ಪ್ರಯುಕ್ತ ಪ್ರಜಾ ಭಾರತ ಉಳಿಯಲಿ ಎಂಬ ಧ್ಯೇಯ ವಾಕ್ಯದೊಂದಿಗೆ SSF ಕಿನ್ಯಾ ಸೆಕ್ಟರ್ ಹಾಗೂ SSF ಬೆಳರಿಂಗೆ ಯುನಿಟ್ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮ ಹಾಗೂ ಆಝಾದಿ ಸಪ್ತಾಹ ಕಾರ್ಯಕ್ರಮವು SSF ಬೆಳರಿಂಗೆ ಶಾಖಾಧ್ಯಕ್ಷರಾದ ಹಾರಿಸ್ ಸಖಾಫಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕರ್ನಾಟಕ ರಾಜ್ಯ ಮುಸ್ಲಿಂ ಜಮಾಅತ್ ನಾಯಕರಾದ ಕೆ.ಎಚ್. ಇಸ್ಮಾಯಿಲ್ ಸಅದಿ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಉಧ್ಘಾಟನಾ ಭಾಷಣದಲ್ಲಿ ಹನೀಫ್ ಸಖಾಫಿ ಕುತುಬಿ ನಗರ ರವರು ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿದರು.
ಸೆಕ್ಟರ್ ಅಧ್ಯಕ್ಷರಾದ ನೌಫಲ್ ಅಹ್ಸನಿ ಹಾಗೂ ಕಿನ್ಯ ಗ್ರಾಮ ಪಂಚಾಯತ್ ಸದಸ್ಯರಾದ ಫಯಾಝ್ ಕಿನ್ಯ ಶುಭಹಾರೈಸಿದರು.”ಪ್ರಜಾಭಾರತ ಉಳಿಯಲಿ” ಎಂಬ ವಿಷಯದಲ್ಲಿ ಇರ್ಫಾನ್ ಅಬ್ದುಲ್ಹಾ ನೂರಾನಿ ವಿಷಯ ಮಂಡಿಸಿದರು. ಹಾಗೂ ಮೆಹಬೂಬ್ ಸಖಾಫಿ ಕಿನ್ಯ ಮುಖ್ಯ ಭಾಷಣ ಮಾಡಿದರು.


ಈ ಸಂದರ್ಭದಲ್ಲಿ ಕೆ.ಸಿ.ಎಫ್. ಬಹ್ರೈನ್ ನಾಯಕರಾದ ಹನೀಫ್ ಸಾಗ್, SYS ಕಿನ್ಯ ಸೆಂಟರ್ ಕೋಶಾಧಿಕಾರಿ ಉಸ್ಮಾನ್ ಝಹ್ರಿ, SSF ಉಳ್ಳಾಲ ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿ ಆಶಿಕ್ ಕಿನ್ಯ, ಉಮರ್ ಝಹ್ರಿ, ಸೆಕ್ಟರ್ ಮೀಡಿಯ ಕಾರ್ಯದರ್ಶಿ ಇರ್ಫಾನ್ ಮುಸ್ಲಿಯಾರ್, SYS ಹಾಗೂ SSF ನ ಸಕ್ರೀಯ ಕಾರ್ಯಕರ್ತರು ಉಪಸ್ಥಿತರಿದ್ದರು.
ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಬಶೀರ್ ಕೂಡಾರ ಸ್ವಾಗತಿಸಿ ವಂದಿಸಿದರು.
















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ