ಕೊವಿಡ್ ನಿರ್ಬಂಧಗಳ ಮಧ್ಯೆ, ತ್ಯಾಗ ಬಲಿದಾನದ ಹಬ್ಬವಾದ ಈದುಲ್ ಅದ್ಹಾ ಅಥವಾ ಬಕ್ರೀದ್ ನ್ನು ಗಲ್ಫ್ ರಾಷ್ಟ್ರಗಳಲ್ಲಿ ಇಂದು ಆಚರಿಸಲಾಗುತ್ತಿದೆ.ಅನಿವಾಸಿ ಭಾರತೀಯರು ಈದ್ ಆಚರಣೆಗೆ ಸಜ್ಜಾಗಿದ್ದಾರೆ.
ಪ್ರವಾದಿ ಇಬ್ರಾಹಿಂ (ಅ.ಸ) ಮತ್ತು ಅವರ ಸುಪುತ್ರ ಇಸ್ಮಾಯಿಲ್ (ಅ. ಸ) ಅವರ ತ್ಯಾಗದ ಸ್ಮರಣೆಯಾಗಿದೆ ಈದುಲ್ ಅದ್’ಹಾ. ಕೋವಿಡ್ ನಿರ್ಬಂಧದೊಂದಿಗೆ ಈ ವರ್ಷ ಸೌದಿ ಅರೇಬಿಯಾ, ಯುಎಇ, ಕುವೈತ್ ಮತ್ತು ಕತಾರ್‌ನ ಈದ್ಗಾ ಮತ್ತು ಮಸೀದಿಗಳಲ್ಲಿ ಈದ್ ಪ್ರಾರ್ಥನೆ ನಡೆಯಲಿದೆ.
ಆದಾಗ್ಯೂ, ಒಮಾನ್‌ನಲ್ಲಿ ಹಬ್ಬಕ್ಕೆ ಪೂರ್ಣ ಲಾಕ್‌ಡೌನ್ ಪ್ರಾರಂಭವಾಗುತ್ತದೆ. ಮನೆಯಲ್ಲಿ ಈದ್ ಪ್ರಾರ್ಥನೆ ಮಾಡಬೇಕೆಂದು ಸೂಚಿಸಲಾಗಿದೆ.ಬಹ್ರೇನ್‌ನಲ್ಲಿ, ಗ್ರ್ಯಾಂಡ್ ಮಸೀದಿಯಲ್ಲಿ 30 ಜನರಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಲಾಗಿದೆ.
ಯುಎಇಯಲ್ಲಿ ಈದ್ ಪ್ರಾರ್ಥನೆ ಮತ್ತು ಕುತುಬಾ 15 ನಿಮಿಷಕ್ಕೆ ಸೀಮಿತಗೊಳಿಸಲಾಗಿದೆ. ಪ್ರಾರ್ಥನೆಗೆ 15 ನಿಮಿಷಗಳ ಮೊದಲು ಈದ್ಗಾ ಮತ್ತು ಮಸೀದಿಗಳು ತೆರೆಯಲಾಗುವುದು. ಪ್ರಾರ್ಥನೆಯ ಬಳಿಕ ತಕ್ಷಣ ಮುಚ್ಚಲಾಗುವುದು.
ಹಬ್ಬಕ್ಕೆ ಸಂಬಂಧಿಸಿದಂತೆ ವಿವಿಧ ಕೊಲ್ಲಿ ರಾಷ್ಟ್ರಗಳಲ್ಲಿ ಒಂದು ವಾರದ ರಜೆಯನ್ನು ಘೋಷಿಸಲಾಗಿದೆ. ಪ್ರತಿ ರಜಾದಿನಗಳ ನಂತರ ಕೋವಿಡ್ ಪ್ರಕರಣ ಮತ್ತು ಮರಣಗಳು ಹೆಚ್ಚುತ್ತಿವೆ ಎಂಬ ಅಧ್ಯಯನದ ಆಧಾರದ ಮೇಲೆ ಈದ್ ಆಚರಣೆಗಳು ಹೆಚ್ಚಿನ ಎಚ್ಚರಿಕೆಯಿಂದ ನಡೆಯಲಿದೆ.
















ಇನ್ನಷ್ಟು ಸುದ್ದಿಗಳು
SIR ಪ್ರಕ್ರಿಯೆ: ಮತದಾರರ ಹಕ್ಕು ರಕ್ಷಣೆಗೆ ಸಿಪಿಐ(ಎಂ) ಆಗ್ರಹ- ಮುಖ್ಯಮಂತ್ರಿಗಳಿಗೆ ಮನವಿ
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಕೆಸಿಎಫ್ ಯುಎಇ: MRF ಯೋಜನೆಗೆ ಅಧಿಕೃತ ಚಾಲನೆ- 3,000ಕ್ಕೂ ಹೆಚ್ಚು ಸದಸ್ಯರ ಸೇರ್ಪಡೆ ಗುರಿ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?
ಕಣ್ಣೂರು: ಕೊನೆಗೂ ನಿಟ್ಟುಸಿರು ಬಿಟ್ಟ ಪ್ರಯಾಣಿಕರು; ಆತಂಕ ಸೃಷ್ಟಿಸಿದ್ದ ಜಿದ್ದಾ ವಿಮಾನ ಸುರಕ್ಷಿತ ಲ್ಯಾಂಡಿಂಗ್
ಕದನ ವಿರಾಮವಲ್ಲ, ಅಮೆರಿಕ ಮತ್ತು ಇಸ್ರೇಲ್ ಸೋಲೊಪ್ಪಿಕೊಂಡ ಕ್ಷಣ: ಯುದ್ಧ ಪ್ರೇಮಿಗಳು ಹಿಂದೆ ಸರಿಯಲು ನಿಜವಾದ ಕಾರಣವೇನು?
ಅನಿವಾಸಿಗಳಿಗೆ ನೆಮ್ಮದಿ: ಕುವೈತ್ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳ ಸಂಚಾರಕ್ಕೆ ಅನುಮತಿ
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
SჄS ಬೆಳ್ತಂಗಡಿ ಝೋನ್: ಸಾಂತ್ವನ ಫಂಡ್ ಹಸ್ತಾಂತರ
ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳಿಗೆ ಮರು ಅರ್ಜಿ ಕಡ್ಡಾಯ- ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್