janadhvani

Kannada Online News Paper

ಈ ವರದಿಯ ಧ್ವನಿಯನ್ನು ಆಲಿಸಿ

ಕೊವಿಡ್ ನಿರ್ಬಂಧಗಳ ಮಧ್ಯೆ, ತ್ಯಾಗ ಬಲಿದಾನದ ಹಬ್ಬವಾದ ಈದುಲ್ ಅದ್ಹಾ ಅಥವಾ ಬಕ್ರೀದ್ ನ್ನು ಗಲ್ಫ್ ರಾಷ್ಟ್ರಗಳಲ್ಲಿ ಇಂದು ಆಚರಿಸಲಾಗುತ್ತಿದೆ.ಅನಿವಾಸಿ ಭಾರತೀಯರು ಈದ್ ಆಚರಣೆಗೆ ಸಜ್ಜಾಗಿದ್ದಾರೆ.

ಪ್ರವಾದಿ ಇಬ್ರಾಹಿಂ (ಅ.ಸ) ಮತ್ತು ಅವರ ಸುಪುತ್ರ ಇಸ್ಮಾಯಿಲ್ (ಅ. ಸ) ಅವರ ತ್ಯಾಗದ ಸ್ಮರಣೆಯಾಗಿದೆ ಈದುಲ್ ಅದ್’ಹಾ. ಕೋವಿಡ್ ನಿರ್ಬಂಧದೊಂದಿಗೆ ಈ ವರ್ಷ ಸೌದಿ ಅರೇಬಿಯಾ, ಯುಎಇ, ಕುವೈತ್ ಮತ್ತು ಕತಾರ್‌ನ ಈದ್ಗಾ ಮತ್ತು ಮಸೀದಿಗಳಲ್ಲಿ ಈದ್ ಪ್ರಾರ್ಥನೆ ನಡೆಯಲಿದೆ.

ಆದಾಗ್ಯೂ, ಒಮಾನ್‌ನಲ್ಲಿ ಹಬ್ಬಕ್ಕೆ ಪೂರ್ಣ ಲಾಕ್‌ಡೌನ್ ಪ್ರಾರಂಭವಾಗುತ್ತದೆ. ಮನೆಯಲ್ಲಿ ಈದ್ ಪ್ರಾರ್ಥನೆ ಮಾಡಬೇಕೆಂದು ಸೂಚಿಸಲಾಗಿದೆ.ಬಹ್ರೇನ್‌ನಲ್ಲಿ, ಗ್ರ್ಯಾಂಡ್ ಮಸೀದಿಯಲ್ಲಿ 30 ಜನರಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಲಾಗಿದೆ.

ಯುಎಇಯಲ್ಲಿ ಈದ್ ಪ್ರಾರ್ಥನೆ ಮತ್ತು ಕುತುಬಾ 15 ನಿಮಿಷಕ್ಕೆ ಸೀಮಿತಗೊಳಿಸಲಾಗಿದೆ. ಪ್ರಾರ್ಥನೆಗೆ 15 ನಿಮಿಷಗಳ ಮೊದಲು ಈದ್ಗಾ ಮತ್ತು ಮಸೀದಿಗಳು ತೆರೆಯಲಾಗುವುದು. ಪ್ರಾರ್ಥನೆಯ ಬಳಿಕ ತಕ್ಷಣ ಮುಚ್ಚಲಾಗುವುದು.

ಹಬ್ಬಕ್ಕೆ ಸಂಬಂಧಿಸಿದಂತೆ ವಿವಿಧ ಕೊಲ್ಲಿ ರಾಷ್ಟ್ರಗಳಲ್ಲಿ ಒಂದು ವಾರದ ರಜೆಯನ್ನು ಘೋಷಿಸಲಾಗಿದೆ. ಪ್ರತಿ ರಜಾದಿನಗಳ ನಂತರ ಕೋವಿಡ್ ಪ್ರಕರಣ ಮತ್ತು ಮರಣಗಳು ಹೆಚ್ಚುತ್ತಿವೆ ಎಂಬ ಅಧ್ಯಯನದ ಆಧಾರದ ಮೇಲೆ ಈದ್ ಆಚರಣೆಗಳು ಹೆಚ್ಚಿನ ಎಚ್ಚರಿಕೆಯಿಂದ ನಡೆಯಲಿದೆ.

error: Content is protected !! Not allowed copy content from janadhvani.com