ರಿಯಾದಿನ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅಂಕೋಲ ನಿವಾಸಿ ಅಮ್ಜದ್ ಖಾನ್ ಸತ್ತಾರ್ ಖಾನ್ ಎಂಬ ವ್ಯಕ್ತಿಯೊಬ್ಬರು 14/06/2021ರಂದು ಹೃದಯಾಘಾತದಿಂದ ನಿಧನರಾದ ಸುದ್ದಿಯನ್ನು ರಿಯಾದ್ ಝೋನ್ ಸಾಂತ್ವನ ಇಲಾಖೆಗೆ ಮೃತ ವ್ಯಕ್ತಿಯ ಸಂಬಂಧಿಗಳು ತಿಳಿಸಿದಾಗ ತಕ್ಷಣ ಕಾರ್ಯಪ್ರವೃತ್ತರಾದ ಸಾಂತ್ವನ ಇಲಾಖೆಯ ಅಧ್ಯಕ್ಷರಾದ ಮಜೀದ್ ವಿಟ್ಲ ಮತ್ತು ದಮ್ಮಾಮ್ ಝೋನ್ ಸಾಂತ್ವನ ಇಲಾಖೆಯ ಕಾರ್ಯದರ್ಶಿ ಭಾಷಾ ಗಂಗಾವಳಿಯವರು ಭಾರತೀಯ ರಾಯಭಾರಿ ಕಚೇರಿಯ ಮತ್ತು ಊರಿನಿಂದ ಬೇಕಾದ ದಾಖಲೆಗಳನ್ನು ತ್ವರಿತವಾಗಿ ಮಾಡಿಸಿ 16/06/2021 ರಂದು ಕರ್ನಾಟಕ ಕಲ್ಚರಲ್ ಫೌಂಡೇಶನ್ ಸಾಂತ್ವನ ತಂಡ ಮತ್ತು ಮೃತ ವ್ಯಕ್ತಿಯ ಸಂಬಂಧಿಗಳ ಸಹಕಾರದೊಂದಿಗೆ ರಿಯಾದಿನ ನಸೀಮ್ ಕಬ್ರ್ ಸ್ಥಾನದಲ್ಲಿ ದಫನ ಕಾರ್ಯವನ್ನು ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಕೆಸಿಎಫ್ ರಿಯಾದ್ ನಾಯಕರಾದ ಸಿದ್ದೀಕ್ ಮದನಿ, ಐಎನ್‌ಸಿ ನೇತಾರ ನಝೀರ್ ಹಾಜಿ ಕಾಶಿಪಟ್ಣ, ಝೋನ್ ಅಧ್ಯಕ್ಷರಾದ ಹನೀಫ್ ಕಣ್ಣೂರು, ಝೋನ್ ಪಬ್ಲಿಷಿಂಗ್ ವಿಂಗ್ ಕಾರ್ಯದರ್ಶಿ ಫಾರೂಕ್ ಪಾಣೆಮಂಗಳೂರು ಮತ್ತು ಮೃತ ವ್ಯಕ್ತಿಯ ಸಂಬಂಧಿಗಳಾದ ಬಶೀರ್ ಮತ್ತು ಮುಹಮ್ಮದ್ ಹಾಗೂ ಮೃತ ವ್ಯಕ್ತಿಯ ಕಂಪೆನಿ ಸಂಪೂರ್ಣವಾಗಿ ಸಹಕಾರ ನೀಡಿದರು. ಮೃತರು ಪತ್ನಿ ಮತ್ತು ಮೂವರು ಮಕ್ಕಳನ್ನು ಅಗಲಿದ್ದಾರೆ. ಮೃತರ ಕುಟುಂಬಸ್ಥರು, ಗೆಳೆಯರು ಮತ್ತು ಕೆಸಿಎಫ್ ನಾಯಕರು ಭಾಗಿಯಾಗಿ ಮೃತರಿಗಾಗಿ ದುವಾ ನೆರವೇರಿಸಿದರು.
















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ