ಪಡುಬಿದ್ರಿ : ಎಸ್ಸೆಸ್ಸೆಫ್ ಹೆಜಮಾಡಿ ಕೋಡಿ ಶಾಖೆಯ ವಾರ್ಷಿಕ ಮಹಾಸಭೆ ಯು ಡಿಸೆಂಬರ್ 21 ರಂದು ಹೆಜಮಾಡಿ ಕೋಡಿಯ ಕುವ್ವತುಲ್ ಇಸ್ಲಾಮ್ ಮದ್ರಸ ಸಭಾಂಗಣದಲ್ಲಿ ಸಂಜೆ 6.30 ಕ್ಕೆ ಪ್ರಾರಂಭಗೊಂಡು ರಾತ್ರಿ 9.00 ಗಂಟೆಯ ವರೆಗೆ ಶಾಖಾಧ್ಯಕ್ಷರಾದ ಶೈಖ್ ಸಿರಾಜುದ್ದೀನ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸ್ಥಳೀಯ ಮಸ್ಜಿದ್ ಖತೀಬರಾದ ಅಲ್ಹಾಜ್ ಅಬುಲ್ ಬುಶ್ರಾ ಕೆ.ಅಬೂಬಕರ್ ಸಿದ್ದೀಕ್ ಮುಸ್ಲಿಯಾರ್ ದುಆ ಗೈದು ಸಭೆಯನ್ನು ಉದ್ಘಾಟಿಸಿದರು.ಎಸ್.ವೈ.ಎಸ್ ಹೆಜಮಾಡಿ ಕೋಡಿ ಬ್ರಾಂಚ್ ಅಧ್ಯಕ್ಷರಾದ ಅಲ್ಹಾಜ್ ಬಶೀರ್ ಮದನಿ, ಹೆಜಮಾಡಿ ಗ್ರಾ.ಪಂ. ಸದಸ್ಯರಾದ ಅಬ್ದುರ್ರಹ್ಮಾನ್ ಪುತ್ತು, ಅಬ್ದುಲ್ ಖಾದರ್ ಮುಸ್ಲಿಯಾರ್, ಶುಭಾಶಂಸ ನುಡಿದರು. ಕಾರ್ಯದರ್ಶಿ ಉಸ್ಮಾನ್ ವರದಿ ವಾಚಿಸಿದರು. ಸಿಮಾನ್ ಕೋಡಿ ಲೆಕ್ಕಪತ್ರ ಮಂಡಿಸಿದರು ಸಭೆಯು ಅನುಮೋದಿಸಿತು. ಶಾಖಾಧ್ಯಕ್ಷರಾದ ಶೈಖ್ ಸಿರಾಜುದ್ದೀನ್ ರವರ ಅಧ್ಯಕ್ಷೀಯ ಭಾಷಣ ದೊಂದಿಗೆ ಸಮಿತಿಯು ಬರ್ಕಾಸುಗೊಂಡಿತು.

ನಂತರ 2020-21 ರ ನೂತನ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಫಾರುಕ್ ಬಂಟ್ವಾಳ್ ಪ್ರ.ಕಾರ್ಯದರ್ಶಿ ಯಾಗಿ ಸಿರಾಜುದ್ದೀನ್ ಕೋಶಾಧಿಕಾರಿ ಯಾಗಿ ಅಬ್ದುಲ್ ರಹ್ಮಾನ್ ಸಿಮಾನ್ ಉಪಾಧ್ಯಕ್ಷರುಗಳು ಶೈಖ್ ಸಿರಾಜುದ್ದೀನ್ ಹಾಗೂ ಸಂಶುದ್ದೀನ್ ಕಾರ್ಯದರ್ಶಿಗಳಾಗಿ ಸಯ್ಯಿದ್ ಸುಂದುಸ್ ತಂಙಳ್, ಸಾಬಿತ್ ಬಿನ್ ಹಮೀದ್ , ಝೈದ್, ಹಫೀಝ್, ಸಿಯಾಬ್, ಶಹದ್ ರವರುಗಳನ್ನು ಕಾರ್ಯಕಾರಿ ಸಮಿತಿ ಸದಸ್ಯರಾಗಿ ನಬೀಲ್ ಕೋಡಿ, ಮುಹಮ್ಮದ್ ಸಮೀರ್ ಕೋಡಿ,ಇರ್ಶಾದ್ ಕೋಡಿ, ಎಂ.ಎಚ್ ತಸ್ರೀಫ್, ಉಸ್ಮಾನ್, ಮುಹಮ್ಮದ್ ಅಲಿ, ಇಮ್ರಾನ್, ಸಾಬಿತ್ ಬಿನ್ ಶೇಕಬ್ಬಹ, ಶಿಯನ್, ಫಾರಿಶ್, ಸಿದ್ದೀಕ್, ಫಾಲಿಲ್, ಸಾಬಿತ್ ಬಿನ್ ಸಲಾಂ, ಶಾಹಿಲ್ ಇವರುಗಳು ಆಯ್ಕೆಯಾದರು.
ವೀಕ್ಷಕರಾಗಿ ಮೆಹ್ಫೂಝ್ ಕನ್ನಂಗಾರ್ ಹಾಗೂ ದಾವೂದ್ ಕನ್ನಂಗಾರ್ ಆಗಮಿಸಿದ್ದರು. ಡಿವಿಷನ್ ಪ್ರ.ಕಾರ್ಯದರ್ಶಿ ಮುಹಮ್ಮದ್ ರಕೀಬ್ ಕನ್ನಂಗಾರ್ ನೂತನ ಸಮಿತಿಗೆ ರೂಪುರೇಷೆ ನೀಡಿದರು. ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಅಶ್ರಫ್ ರಝಾ ಅಂಜದಿ ಹಾಗೂ ಕಾಪು ಡಿವಿಷನ್ ಅಧ್ಯಕ್ಷರಾದ ಶಾಹುಲ್ ಹಮೀದ್ ನ ಈಮಿ ಸಂಘಟನಾ ತರಭೇತಿ ನೀಡಿದರು. ಸಿರಾಜುದ್ದೀನ್ ಸ್ವಾಗತಿಸಿ ವಂದಿಸಿದರು. ಮುಹಮ್ಮದ್ ಸಮೀರ್ ಕೋಡಿ ನಿರೂಪಿಸಿದರು.
















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ