ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ಕತ್ತೆಯ ಸಗಣಿಯಿಂದ ನಕಲಿ ಮೆಣಸಿನ ಹುಡಿ, ಅರಶಿಣ ಹುಡಿ ಹಾಗೂ ಇನ್ನಿತರ ಮಸಾಲೆ ಹುಡಿಗಳನ್ನು ತಯಾರಿಸುತ್ತಿದ್ದ ಕಾರ್ಖಾನೆಯೊಂದರ ಮಾಲಿಕ ಅನೂಪ್ ವರ್ಶ್ನೀ ಯವರನ್ನು ಹತ್ರಾಸ್ ಪೋಲೀಸರು ಬಂಧಿಸಿದ್ದಾಗಿ ವರದಿಯಾಗಿದೆ.
ಇಂದು ಬೆಳಿಗ್ಗೆ ಪೋಲೀಸರು ಕಾರ್ಖಾನೆಯಲ್ಲಿ ರೈಡ್ ಮಾಡಿದಾಗ 300kg ಗಿಂತಲೂ ಅಧಿಕ ನಕಲಿ ಮಸಾಲೆ ಹುಡಿಗಳು ಪತ್ತೆಯಾಗಿದೆ. ಸರಿಸುಮಾರು 27 ರೀತಿಯ ಮಸಾಲೆಹುಡಿಗಳನ್ನು ಪರೀಕ್ಷೆಗೆ ಕಳುಹಿಸಿಲಾಗಿದೆ.
ನಕಲಿ ಮಸಾಲೆ ಹುಡಿಗಳನ್ನು ತಯಾರಿಸುವುದಲ್ಲದೇ ಕಾರ್ಖಾನೆಯ ಪರವಾನಿಗೆ ತೋರಿಸುವುದರಲ್ಲೂ ಮಾಲಿಕರು ವಿಫಲರಾಗಿದ್ದಾರೆ ಎಂದು ಪೋಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.







