ಉಳ್ಳಾಲ: ಕರ್ನಾಟಕ ರಾಜ್ಯ ಸುನ್ನೀ ಸ್ಟುಡೆಂಟ್ಸ್ ಫೆಡರೇಶನ್(ಎಸ್ಸೆಸ್ಸೆಫ್ ) ಇದರ ಕಿನ್ಯ ಮೀಂಪ್ರಿ ಶಾಖೆಯ ವತಿಯಿಂದ ಶಾಖಾ ವ್ಯಾಪ್ತಿಯ ರೈಂಬೋ ವಿಧ್ಯಾರ್ಥಿಗಳ ಇಲಲ್ ಹಬೀಬ್ ರೈಂಬೋ ಫೆಸ್ಟ್ 2K20 ಹಾಗೂ ಮೀಲಾದ್ ಕಾನ್ಫರೆನ್ಸ್, ಮೌಲಿದ್ ಮಜ್ಲಿಸ್ ಕಾರ್ಯಕ್ರಮವು ನವಂಬರ್ 8 ಆದಿತ್ಯವಾರ ಬುಖಾರಿ ಜುಮಾ ಮಸ್ಜಿದಿನಲ್ಲಿ ಸ್ವಾಗತ ಸಮಿತಿ ಚೆಯರ್ಮಾನ್ ನೌಫಲ್ ಅಹ್ಸನಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಪ್ರಸ್ತುತ ಕಾರ್ಯಕ್ರಮಗಳ ಉದ್ಘಾಟನಾ ಸಮಾವೇಶವು ಬೆಳಿಗ್ಗೆ 9 ಗಂಟೆಗೆ ಜರಗಿತು. ಬುಖಾರಿ ಜುಮಾ ಮಸೀದಿಯ ಅಧ್ಯಕ್ಷರಾದ ಅಶ್ಅರಿಯ ಮುಹಮ್ಮದಲಿ ಸಖಾಫಿ ದುಆ ನೆರವೇರಿಸಿದರು.ಖತೀಬರಾದ ಉಸ್ಮಾನ್ ಸಖಾಫಿ ಉದ್ಘಾಟಿಸಿದರು.ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಸಭೆಗೆ ನೇತೃತ್ವ ನೀಡಿದರು.
ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಸದಸ್ಯರಾದ ಕೆ.ಎಚ್ ಇಸ್ಮಾಯಿಲ್ ಸಅದಿ ,ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲಾ ಪ್ರ.ಕಾರ್ಯದರ್ಶಿ ಇಬ್ರಾಹಿಂ ಖಲೀಲ್ ಮುಸ್ಲಿಯಾರ್ ಹಾಗೂ ಎಸ್ ವೈ ಎಸ್ ಮೀಂಪ್ರಿ ಬ್ರಾಂಚ್ ಪ್ರ.ಕಾರ್ಯದರ್ಶಿ ಫಾರೂಕ್ ಸಖಾಫಿಯವರು ಸಂದೇಶ ಭಾಷಣ ಮಾಡಿದರು.ನಂತರ ಸಂಜೆ 5.45ರ ತನಕ ಮಕ್ಕಳ ವೈವಿಧ್ಯಮಯ ಕಲಾ ಕಾರ್ಯಕ್ರಮಗಳೊಂದಿಗೆ ರೈಂಬೋ ಫೆಸ್ಟ್ ನಡೆಯಿತು.ತೀರ್ಪುಗಾರರಾಗಿ ಉಸ್ಮಾನ್ ಝುಹ್ರಿ ಹಾಗೂ ಎಸ್ಸೆಸ್ಸಫ್ ಕಿನ್ಯ ಸೆಕ್ಟರ್ ಪ್ರ.ಕಾರ್ಯದರ್ಶಿ ಬಶೀರ್ ಕೂಡಾರ ಆಗಮಿಸಿದ್ದರು.

ಮಗ್ರಿಬ್ ನಮಾಝಿನ ಬಳಿಕ ನಡೆದ ಇಲಲ್ ಹಬೀಬ್ ಮೀಲಾದ್ ಕಾನ್ಫರೆನ್ಸ್ ಹಾಗೂ ಮೌಲಿದ್ ಮಜ್ಲಿಸ್ ಕಾರ್ಯಕ್ರಮಕ್ಕೆ ಸಯ್ಯಿದ್ ಅಲವಿ ತಂಙಳ್ ಕಿನ್ಯ ಹಾಗೂ ಉಸ್ಮಾನ್ ಸಖಾಫಿ ನೇತೃತ್ವ ನೀಡಿದರು. ಸಯ್ಯಿದ್ ಜಲಾಲುದ್ದೀನ್ ಅಲ್ ಬುಖಾರಿ ದುಆಗೆ ನೇತೃತ್ವ ನೀಡಿದರು. ಎಸ್ಸೆಸ್ಸೆಫ್ ಕಿನ್ಯ ಸೆಕ್ಟರ್ ಅಧ್ಯಕ್ಷರು ಸಯ್ಯಿದ್ ಝೈನುಲ್ ಆಬಿದ್ ತಂಙಳ್ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಕಿನ್ಯ ಸೆಕ್ಟರ್ ದಅವಾ ಕನ್ವೀನರ್ ಇರ್ಫಾನ್ ಮುಸ್ಲಿಯಾ ಖುತುಬಿ ನಗರ ಮುಖ್ಯಪ್ರಭಾಷಣಗೈದರು. ಎಸ್ ವೈ ಎಸ್ ದೇರಳಕಟ್ಟೆ ಸೆಂಟರ್ ಪ್ರ.ಕಾರ್ಯದರ್ಶಿ ಇಸ್ಮಾಯಿಲ್ ಮೀಂಪ್ರಿ, ಮೀಂಪ್ರಿ ಬ್ರಾಂಚ್ ಅಧ್ಯಕ್ಷರಾದ ಅಲಿ ಕುಂಞಿ , ಎಸ್ಸೆಸ್ಸೆಫ್ ಮಾಜಿ ಶಾಖಾ ಅಧ್ಯಕ್ಷರು ಸಯ್ಯಿದ್ ತ್ವಾಹ ತಂಙಳ್ ಹಾಗೂ ಇನ್ನಿತರ ನೇತಾರರು ಉಪಸ್ಥಿತರಿದ್ದರು. ನಂತರ ವಿಧ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸ್ವಾಗತ ಸಮಿತಿ ಕನ್ವೀನರ್ ಸಫ್ವಾನ್ ಸ್ವಾಗತಿಸಿ ವೈಸ್ ಕನ್ವೀನರ್ ಅನಸ್ ಮುಸ್ಲಿಯಾರ್ ಧನ್ಯವಾದ ಹೇಳಿದರು.
















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ