ಪುತ್ತೂರು: ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಸಾಧನೆಗಳ ಮೂಲಕ ಮುಂದುವರೆದು , ಕಡಬ ತಾಲೂಕಿನ ಹೆಸರನ್ನು ರಾಜ್ಯ ಮಟ್ಟದಲ್ಲಿ ಮಿಂಚುವಂತೆ ಮಾಡುತ್ತಿರುವ ಯುವ ಪ್ರತಿಭೆ ಸಮ್ಯಕ್ತ್.ಜೈನ್ ರವರ ಸಾಧನೆಗೆ ಇದೀಗ ಮತ್ತೊಂದು ಗರಿ ಸೇರ್ಪಡೆಗೊಂಡಿದೆ.
ಗುರುಕುಲ ಕಲಾ ಪ್ರತಿಷ್ಠಾನ ರಾಜ್ಯ ಘಟಕ ತುಮಕೂರು ಇತ್ತೀಚೆಗೆ ಅಂತರ್ಜಾಲದ ಮುಖೇನ “ಗುರುಕುಲ ಪ್ರತಿಷ್ಠಾನ ಅನಾವರಣ ಸ್ಪರ್ಧೆ” ಯನ್ನು ರಾಜ್ಯ ಮಟ್ಟದಲ್ಲಿ ಆಯೋಜಿಸಿತ್ತು. ಇದರಲ್ಲಿ ಕಡಬ,ನೂಜಿಬಾಳ್ತಿಲ ಗ್ರಾಮದ ಸಮ್ಯಕ್ತ್.ಜೈನ್ ರವರು ಸ್ಪರ್ಧಾ ಸ್ಫೂರ್ತಿಯಿಂದ ಭಾಗವಹಿಸಿ , ಸಂಸ್ಥೆಯು ಕೊಡಲ್ಪಡುವ ರಾಜ್ಯ ಮಟ್ಟದ ಡಾ॥ಕವಿತಾಕೃಷ್ಣ ಗೌರವಾರ್ಥ ಪ್ರಶಸ್ತಿ ಗೆ ಭಾಜನರಾಗಿರುತ್ತಾರೆ.

ತನ್ನ ಪ್ರಬುದ್ಧ ಬರವಣಿಗೆಯ ಮುಖೇನ ಸದ್ದು ಮಾಡುತ್ತಿರುವ ಇವರು , ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಬರೆಯುವ ಹವ್ಯಾಸ ಹೊಂದಿದ್ದು ತುಳು ಹಾಗು ಕನ್ನಡ ಭಾಷೆಗಳಲ್ಲಿ ಕೃತಿ ರಚಿಸುವ ಪ್ರವೃತ್ತಿಯುಳ್ಳವರಾಗಿದ್ದಾರೆ.
ಕವಿ , ಉತ್ತಮ ಲೇಖಕ ,ವಿಮರ್ಶಕ , ಯುವ ಚಿಂತಕ , ನಾಟಕ ರಚನೆಕಾರರಾಗಿ ಗುರುತಿಸಿಕೊಂಡಿರುವ ಇವರು ತನ್ನ ಎಳೆ ವಯಸ್ಸಿನಲ್ಲಿಯೇ ಮೂರು ಕವನಸಂಕಲನಗಳನ್ನು ಬರೆದು ಬಿಡುಗಡೆಗೊಳಿಸಿರುತ್ತಾರೆ.
ಇವರು ನೂಜಿಬಾಳ್ತಿಲ ಬಸದಿ ಶ್ರೀ ಧರಣೇಂದ್ರ ಇಂದ್ರ ಮತ್ತು ಶ್ರೀಮತಿ ಮಂಜುಳಾರವರ ಸುಪುತ್ರ.















ಇನ್ನಷ್ಟು ಸುದ್ದಿಗಳು
ರಾಜ್ಯ ಸರ್ಕಾರಕ್ಕೆ ದಕ್ಷಿಣ ಕನ್ನಡ ಜಿಲ್ಲಾ ವಖ್ಫ್ ಸಲಹಾ ಸಮಿತಿಯಿಂದ ಅಭಿನಂದನೆಗಳು
‘ಎನ್ ಹಾನ್ಸ್ ಇಂಡಿಯಾ ಕಾನ್ಫರೆನ್ಸ್’- ಮಂಗಳೂರಿನ ಸಮಾವೇಶಕ್ಕೆ ಕ್ಷಣಗಣನೆ
ಪಬ್ಲಿಕ್ ಟಿವಿಯ ರಂಗನಾಥ್ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಿಸುವಂತೆ ನ್ಯಾಯಾಲಯ ಆದೇಶ
‘ಕೈ’ ಪಾಲಯಕ್ಕೆ ಸಿಎಂ ಇಬ್ರಾಹಿಂ ಗುಡ್ ಬೈ – ಜೆಡಿಎಸ್ ಸೇರುವುದು ಖಚಿತ.?
ಮದ್ರಸಾಗಳಲ್ಲಿ, ಜನಗಳ ಮಧ್ಯೆ ಸೌಹಾರ್ದ, ಸಹಬಾಳ್ವೆ, ಭ್ರಾತೃತ್ವ ಸಂಬಂಧಗಳನ್ನು ಬೆಳೆಸಲು ಕಲಿಸಲಾಗುತ್ತಿದೆ- ರಾಜ್ಯ ಸರ್ಕಾರ
ರೌಳತುಲ್ ಉಲೂಂ ಓಲ್ಡ್ ಸ್ಟೂಡೆಂಟ್ಸ್ ಉಕ್ಕುಡ ಆಯೋಜಿಸಿದ ಸ್ನೇಹ ಸಂಗಮ
ರಾಜ್ಯದಲ್ಲಿ ನೈಟ್ ಕರ್ಪ್ಯೂ- ರಾತ್ರಿ 10 ರಿಂದ ಯಾವುದೇ ವಾಹನಗಳ ಓಡಾಟಕ್ಕೆ ಅವಕಾಶವಿಲ್ಲ
ಜನವರಿಯಲ್ಲಿ ಸಿಎಂ ಬೊಮ್ಮಾಯಿ ಬದಲಾವಣೆ ಖಚಿತ- ಸಿಎಂ ಇಬ್ರಾಹಿಂ
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸಭೆಯಲ್ಲಿ ಕೈಗೊಂಡ ನಿರ್ಣಯಗಳು
ಮತಾಂತರ ನಿಷೇಧ ಮಸೂದೆ- ಹೈಕೋರ್ಟ್ ಮೆಟ್ಟಿಲೇರಲು ಮುಂದಾದ ಕ್ರೈಸ್ತರು