janadhvani

Kannada Online News Paper

ನಿರ್ಬಂಧ ತೆರವು:ನಿಗದಿಯಂತೆ ದುಬೈ ಪ್ರಯಾಣ ನಡೆಯಲಿದೆ- ಏರ್ ಇಂಡಿಯಾ ಎಕ್ಸ್‌ಪ್ರೆಸ್

ನವದೆಹಲಿ: ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮತ್ತು ಅಲ್ಲಿಂದ ಬರುವ ಎಲ್ಲಾ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳು ಮೂಲ ವೇಳಾಪಟ್ಟಿಯಂತೆ ನಾಳೆ, ಸೆಪ್ಟೆಂಬರ್ 19,2020 ರಿಂದ ಕಾರ್ಯನಿರ್ವಹಿಸಲಿವೆ.

ಏರ್ ಇಂಡಿಯಾ ಎಕ್ಸ್‌ಪ್ರೆಸ್ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ಪ್ರಕಟಣೆ ನೀಡಿದೆ.

ಕಳೆದ ಕೆಲವು ವಾರಗಳಲ್ಲಿ ಎರಡು ಬಾರಿ ಕೊರೊನಾ ವೈರಸ್‌ ಪಾಸಿಟಿವ್ ಸರ್ಟಿಫಿಕೇಟ್ ಹೊಂದಿರುವ ಪ್ರಯಾಣಿಕರನ್ನು ಕರೆತಂದಿರುವ ಆರೋಪದ ಹಿನ್ನೆಲೆಯಲ್ಲಿ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನಗಳನ್ನು ಅಕ್ಟೋಬರ್‌ 2ರವರೆಗೆ ನಿಷೇಧಿಸಿ ‘ದುಬೈ ನಾಗರಿಕ ವಾಯುಯಾನ ಪ್ರಾಧಿಕಾರ’ (ಡಿಸಿಎಎ) ಆದೇಶ ಹೊರಡಿಸಿತ್ತು.

ಯುಎಇ ಸರ್ಕಾರದ ಕಾನೂನಿನ ಪ್ರಕಾರ, ಭಾರತದಿಂದ ಪ್ರಯಾಣಿಸುವ ಪ್ರತಿಯೊಬ್ಬ ಪ್ರಯಾಣಿಕರ ಬಳಿ ವಿಮಾನ ಪ್ರಯಾಣ ಆರಂಭಿಸುವ 96ಗಂಟೆಗಳ ಮೊದಲು ಆರ್ ಟಿ-ಪಿಸಿಆರ್ ಮೂಲಕ ಪರೀಕ್ಷೆ ನಡೆಸಿ ಕೊರೊನಾ ವೈರಸ್‌ ನೆಗೆಟಿವ್ ವರದಿಯ ಒರಿಜಿನಲ್ ಸರ್ಟಿಫಿಕೇಟ್‌ ಹೊಂದಿರುವುದು ಕಡ್ಡಾಯವಾಗಿದೆ.

ಇದನ್ನೂ ಓದಿರಿ...