ಬಿಜೆಪಿ ನಾಯಕರ ದೃಷ್ಟಿಯಲ್ಲಿ ಮಾತ್ರ ಶ್ರೀನಿವಾಸಮೂರ್ತಿ ಅಮಾಯಕ ಇರಬಹುದು ಆದರೆ, ವಾಸ್ತವ ಬೇರೆಯೇ ಇದೆ.
ಬೆಂಗಳೂರು, ಆಗಸ್ಟ್ 17; ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅಮಾಯಕ ಏನಲ್ಲ. ಇನ್ನೂ ಡಿಜೆ ಹಳ್ಳಿ ಗಲಭೆಗೆ ಕಾಂಗ್ರೆಸ್ ಪಕ್ಷ ಕಾರಣವಲ್ಲ. ಬದಲಿಗೆ ಇಂದೊಂದು ಪಕ್ಕಾ ಗೇಮ್ ಪ್ಲಾನ್ ಎಂದು ಮಾಜಿ ಕಾಂಗ್ರೆಸ್ ಶಾಸಕ ಬಿ. ಪ್ರಸನ್ನ ಆರೋಪಿಸಿದ್ದಾರೆ.
ಡಿಜೆ ಹಳ್ಳಿ ಗಲಭೆ ಸಂಬಂಧ ಇಂದು ಟಿ.ವಿ ಮಾಧ್ಯಮವೊಂದರ ಜೊತೆಗೆ ತಮ್ಮ ಮನದ ಇಂಗಿತವನ್ನು ಹಂಚಿಕೊಂಡಿರುವ ಬಿ. ಪ್ರಸನ್ನ, “ನನಗೆ ಹಾಗೂ ಅಖಂಡ ಶ್ರೀನಿವಾಸಮೂರ್ತಿಗೆ ಆಗ್ತಾ ಇರಲಿಲ್ಲ. ಯಾವಾಗಲೂ ಅವರು ನನ್ನ ರಾಜಕೀಯ ಎದುರಾಳಿ. ಆದರೆ, ಆತ ಅಮಾಯಕ ಏನಲ್ಲ. ಬಿಜೆಪಿ ನಾಯಕರ ದೃಷ್ಟಿಯಲ್ಲಿ ಮಾತ್ರ ಶ್ರೀನಿವಾಸಮೂರ್ತಿ ಅಮಾಯಕ ಇರಬಹುದು ಆದರೆ, ವಾಸ್ತವ ಬೇರೆಯೇ ಇದೆ.
ಕಾಂಗ್ರೆಸ್ ಕಾರ್ಯಕರ್ತರ ಸಮಸ್ಯೆಗೆ ಅಖಂಡ ಶ್ರೀನಿವಾಸಮೂರ್ತಿ ಎಂದಿಗೂ ಸೂಕ್ತವಾಗಿ ಸ್ಪಂದಿಸುತ್ತಿರಲಿಲ್ಲ. ಹೀಗಾಗಿ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಅಖಂಡ ಶ್ರೀನಿವಾಸ್ ಕುರಿತು ಅಸಮಾಧಾನವಿತ್ತು” ಎಂದು ತಿಳಿಸಿದ್ದಾರೆ.
ಇನ್ನೂ ಡಿಜೆ ಹಳ್ಳಿ ಗಲಭೆಯನ್ನು ಪಕ್ಕಾ ಗೇಮ್ ಪ್ಲಾನ್ ಎಂದು ಉಲ್ಲೇಖಿಸಿರುವ ಬಿ. ಪ್ರಸನ್ನ, “ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಬೇಗನೇ ಕ್ರಮ ಕೈಗೊಳ್ಳದಿರುವುದೇ ಕಾರಣ. ಮಹಮ್ಮದ್ ಪೈಗಂಬರ್ ವಿರುದ್ಧ ನವೀನ್ ಎಂಬ ವ್ಯಕ್ತಿ ವಿವಾದಾತ್ಮಕ ಪೋಸ್ಟ್ ಮಾಡಿದ್ದೇ ಈ ಗಲಭೆಗೆ ಕಾರಣ. ಹಿಂದೆ ಎಂಎಲ್ಎ ಮಿಸ್ಸಿಂಗ್ ಅಂತಾ ಒಬ್ಬ ವ್ಯಕ್ತಿ ಪೋಸ್ಟ್ ಮಾಡಿದ್ದಕ್ಕೆ ಕೆಲವೇ ಕ್ಷಣದಲ್ಲಿ ಅವನನ್ನು ಬಂಧಿಸಲಾಗಿತ್ತು.
ಆದರೆ, ನವೀನ್ ಬಂಧನಕ್ಕೆ ಪೊಲೀಸರು ತಡ ಮಾಡಿದ್ದು ಏಕೆ? ಇದೇ ಕಾರಣಕ್ಕೆ ಗಲಭೆಯಾಗಿದೆ. ಇವನ್ನೆಲ್ಲಾ ಗಮನಿಸಿದರೆ ಈ ಗಲಭೆ ಪಕ್ಕಾ ಗೇಮ್ ಪ್ಲಾನ್ ಎಂಬುದು ಸ್ಪಷ್ಟವಾಗುತ್ತದೆ. ಈ ಗಲಭೆಯ ಮೂಲಕ ಯಾರೋ ಕೈ ಕಾಯಿಸಿಕೊಳ್ಳುವ ಕೆಲಸ ಆಗ್ತಿದೆ. ಆದರೆ, ಅದು ಯಾರು? ಯಾವ ರೀತಿಯಲ್ಲಿ ಇವೆಲ್ಲಾ ಆಗುತ್ತಿದೆ? ಎಂಬುದು ಮಾತ್ರ ಗೊತ್ತಾಗುತ್ತಿಲ್ಲ” ಎಂದು ಆರೋಪಿಸಿದ್ದಾರೆ.















ಇನ್ನಷ್ಟು ಸುದ್ದಿಗಳು
ರಾಜ್ಯ ಸರ್ಕಾರಕ್ಕೆ ದಕ್ಷಿಣ ಕನ್ನಡ ಜಿಲ್ಲಾ ವಖ್ಫ್ ಸಲಹಾ ಸಮಿತಿಯಿಂದ ಅಭಿನಂದನೆಗಳು
ನೌಕರರ ಮಿಂಚಿನ ಮುಷ್ಕರ : ಅಂತಾರಾಷ್ಟ್ರೀಯ ವಿಮಾನಯಾನ ರದ್ದು
ಭಜರಂಗದಳ ಮಾಜಿ ರಾಜ್ಯ ಸಂಚಾಲಕ ರಘು ಪರಾರಿ
‘ಎನ್ ಹಾನ್ಸ್ ಇಂಡಿಯಾ ಕಾನ್ಫರೆನ್ಸ್’- ಮಂಗಳೂರಿನ ಸಮಾವೇಶಕ್ಕೆ ಕ್ಷಣಗಣನೆ
ಖುರ್ಆನ್ ದುರ್ವ್ಯಾಖ್ಯಾನಕಾರರಿಂದ ಇಸ್ಲಾಂಗೆ ಭಾರೀ ಹಾನಿಯುಂಟಾಗುತ್ತಿದೆ- ಡಾ. ಝೈನೀ ಕಾಮಿಲ್
ಪಬ್ಲಿಕ್ ಟಿವಿಯ ರಂಗನಾಥ್ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಿಸುವಂತೆ ನ್ಯಾಯಾಲಯ ಆದೇಶ
‘ಕೈ’ ಪಾಲಯಕ್ಕೆ ಸಿಎಂ ಇಬ್ರಾಹಿಂ ಗುಡ್ ಬೈ – ಜೆಡಿಎಸ್ ಸೇರುವುದು ಖಚಿತ.?
ಮದ್ರಸಾಗಳಲ್ಲಿ, ಜನಗಳ ಮಧ್ಯೆ ಸೌಹಾರ್ದ, ಸಹಬಾಳ್ವೆ, ಭ್ರಾತೃತ್ವ ಸಂಬಂಧಗಳನ್ನು ಬೆಳೆಸಲು ಕಲಿಸಲಾಗುತ್ತಿದೆ- ರಾಜ್ಯ ಸರ್ಕಾರ
ರೌಳತುಲ್ ಉಲೂಂ ಓಲ್ಡ್ ಸ್ಟೂಡೆಂಟ್ಸ್ ಉಕ್ಕುಡ ಆಯೋಜಿಸಿದ ಸ್ನೇಹ ಸಂಗಮ
ರಾಜ್ಯದಲ್ಲಿ ನೈಟ್ ಕರ್ಪ್ಯೂ- ರಾತ್ರಿ 10 ರಿಂದ ಯಾವುದೇ ವಾಹನಗಳ ಓಡಾಟಕ್ಕೆ ಅವಕಾಶವಿಲ್ಲ