ರಿಯಾದ್| ಈ ವರ್ಷದ ಪವಿತ್ರ ಹಜ್ ಚಟುವಟಿಕೆಗಳಿಗೆ ಆನ್‌ಲೈನ್ ನೋಂದಣಿ ಪ್ರಕ್ರಿಯೆಯು ಜುಲೈ 10 ಶುಕ್ರವಾರದಂದು ಕೊನೆಗೊಳ್ಳಲಿದೆ ಎಂದು ಸೌದಿ ಹಜ್ ಸಚಿವಾಲಯ ಪ್ರಕಟಿಸಿದೆ. ನೋಂದಣಿಗೆ ಇಲ್ಲಿ ಕ್ಲಿಕ್ ಮಾಡಿ
ಯಾತ್ರಿಕರ ಪಟ್ಟಿಯನ್ನು ಜುಲೈ 21 ರಂದು ಪ್ರಕಟಿಸಲಾಗುವುದು. ಈ ವರ್ಷ ಆನ್‌ಲೈನ್‌ನಲ್ಲಿ ಅರ್ಜಿದಾರರನ್ನು ಆಯ್ಕೆ ಮಾಡಲಾಗುತ್ತದೆ.
ಹಜ್ ಅರ್ಜಿದಾರರು ಈ ಹಿಂದೆ ಹಜ್ ನಿರ್ವಹಿಸಿರುವುದಿಲ್ಲ ಎಂಬ ಪ್ರತಿಜ್ಞೆ ಹಾಗೂ ಕೊರೋನಾ ಸೋಂಕಿಗೆ ಒಳಗಾಗಿಲ್ಲ ಮತ್ತು ಮಧುಮೇಹ, ಅಧಿಕ ರಕ್ತದೊತ್ತಡ, ಹೃದ್ರೋಗ ಅಥವಾ ಉಸಿರಾಟದ ಕಾಯಿಲೆಗಳಿಲ್ಲ ಎಂದೂ ಆರೋಗ್ಯ ಸಚಿವಾಲಯವು ಅಂಗೀಕರಿಸಿದ ಮಾನದಂಡಗಳನ್ನು ಸ್ವೀಕರಿಸಲು ಸಿದ್ಧನೆಂದೂ ಆನ್‌ಲೈನ್ ನೋಂದಣಿ ವೇಳೆ ದಾಖಲೆಯ ಮೂಲಕ ಅರ್ಜಿದಾರ ಖಚಿತಪಡಿಸಬೇಕು. ಹಜ್ ಮುಗಿದ ಬಳಿಕ 14 ದಿನಗಳ ಕಾಲ ಕ್ವಾರಂಟೈನ್ ನಲ್ಲೂ ಇರಬೇಕಾಗಿದೆ.
ಜಾಗತಿಕವಾಗಿ ಕೋವಿಡ್ ಹರಡಿರುವ ಹಿನ್ನೆಲೆಯಲ್ಲಿ, ಯಾತ್ರಿಕರ ಸುರಕ್ಷತೆಯ ದೃಷ್ಟಿಯಿಂದ ಈ ವರ್ಷದ ಹಜ್ ಅನ್ನು ಸೌದಿಯಲ್ಲಿರುವವರಿಗೆ ಮಾತ್ರವಾಗಿ ಇಳಿಸಲಾಗಿದೆ. 20 ರಿಂದ 50 ವರ್ಷದೊಳಗಿನ ಸೌದಿ ಅರೇಬಿಯಾದಲ್ಲಿ ವಾಸಿಸುವ ವಿದೇಶಿಯರು ಮತ್ತು ಸ್ಥಳೀಯರಿಗೆ ಈ ವರ್ಷದ ಹಜ್‌ನಲ್ಲಿ ಭಾಗವಹಿಸಲು ಅವಕಾಶವಿದೆ.
ಕಳೆದ ವರ್ಷ ಹಜ್‌ಗಾಗಿ 2,489,406 ಲಕ್ಷ ಭಕ್ತರು ಪವಿತ್ರ ಭೂಮಿಗೆ ಭೇಟಿ ನೀಡಿದ್ದರು. ಈ ಪೈಕಿ 1,855,027 ವಿದೇಶಗಳ ಮತ್ತು 634,379 ದೇಶೀಯ ಯಾತ್ರಾರ್ಥಿಗಳಾಗಿದ್ದಾರೆ.















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?
ಅನಿವಾಸಿಗಳಿಗೆ ನೆಮ್ಮದಿ: ಕುವೈತ್ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳ ಸಂಚಾರಕ್ಕೆ ಅನುಮತಿ
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
ಸೌದಿಯಲ್ಲಿ ತಪಾಸಣೆ ತೀವ್ರ: ಒಂದೇ ವಾರದಲ್ಲಿ 10,700 ನಿಯಮ ಉಲ್ಲಂಘಕರ ಬಂಧನ- 8,000 ಮಂದಿ ಗಡೀಪಾರು
ದುಬೈ ಏರ್ಪೋರ್ಟ್ನಲ್ಲಿ ಅನಾಥ ಬ್ಯಾಗ್: ಓಪನ್ ಮಾಡಿದ ಅಧಿಕಾರಿಗಳಿಗೆ ಶಾಕ್- ಒಳಗೇನಿತ್ತು ಗೊತ್ತೇ?
ದುಬೈ ಮಿನಿಬಸ್ ಅಪಘಾತ: ಆರು ಮಂದಿ ಭಾರತೀಯರು ಸಹಿತ ಎಂಟು ಮಂದಿ ಮೃತ್ಯು
ಸೌದಿ ಅರೇಬಿಯಾದಲ್ಲಿ ತೀವ್ರಗೊಂಡ ಬಿಸಿಲಿನ ಬೇಗೆ- ಹವಾಮಾನ ಇಲಾಖೆಯಿಂದ ಹೈ ಅಲರ್ಟ್!
ಅಪಾರ್ಟ್ಮೆಂಟ್ ಕೇಂದ್ರೀಕರಿಸಿ ಅನೈತಿಕ ಚಟುವಟಿಕೆ- ನಜ್ರಾನ್ನಲ್ಲಿ 12 ವಿದೇಶಿಗರ ಬಂಧನ
ಕುವೈತ್ ವಿಮಾನ ನಿಲ್ದಾಣದ ಮೇಲೆ ದಾಳಿ: ಗಾಯಗೊಂಡವರಲ್ಲಿ 13 ಮಂದಿ ಭಾರತೀಯರು