ರಿಯಾದ್: ಸಂಪೂರ್ಣ ಕೋವಿಡ್ ಮುಕ್ತಗೊಳ್ಳುವವರೆಗೆ ರಜೆಯಲ್ಲಿ ಸ್ವದೇಶಕ್ಕೆ ತೆರಳಿದವರಿಗೆ ಸೌದಿ ಅರೇಬಿಯಾಕ್ಕೆ ಪ್ರವೇಶವಿಲ್ಲ ಎಂದು ಜನರಲ್ ಡೈರಕ್ಟರೇಟ್ ಆಫ್ ಪಾಸ್ಪೋರ್ಟ್ (ಜವಾಝಾತ್) ತಿಳಿಸಿದೆ.
ಸೌದಿಯಲ್ಲಿನ ಕೋವಿಡ್ ಪ್ರಕರಣಗಳು ನಿಯಂತ್ರಣಕ್ಕೆ ಬಂದ ನಂತರವಷ್ಟೇ ವಿದೇಶೀಯರ ಮರು ಪ್ರವೇಶ ವೀಸಾಗಳಿಗೆ ಅನುಮತಿ ನೀಡಲಾಗುವುದು. ಸೌದಿಗೆ ಹಿಂದಿರುಗುವ ಸಮಯವನ್ನು ಅಧಿಕೃತವಾಗಿ ಘೋಷಿಸಲಾಗುತ್ತದೆ.
ಮುಂದಿನ ದಿನಗಳಲ್ಲಿ ಮರು ಪ್ರವೇಶ ವೀಸಾ(ರೀ ಎಂಟ್ರೀ) ವಿಸ್ತರಣೆ ಬಗ್ಗೆ ಸಚಿವಾಲಯ ಪ್ರಕಟಿಸಲಿದೆ. ಇದರೊಂದಿಗೆ,ಸ್ವದೇಶಕ್ಕೆ ತೆರಳಿದ ನಂತರ ರೀ ಎಂಟ್ರಿ ವಿಸ್ತರಿಸಲಾಗದೆ ಉಳಿದಿರುವವರಿಗೂ ಮರು ಪ್ರವೇಶ ಸಾಧ್ಯವಾಗಲಿದೆ. ಈ ಕುರಿತು ಅಧಿಕೃತ ಪ್ರಕಟಣೆಗಾಗಿ ಕಾಯಬೇಕೆಂದು ಜವಾಝಾತ್ ಇಲಾಖೆ ಟ್ವಿಟರ್ನಲ್ಲಿ ತಿಳಿಸಿದೆ.
ಸೌದಿ ಅರೇಬಿಯಾದಿಂದ ತೆರಳಿದ ನಂತರ ಅಂತರರಾಷ್ಟ್ರೀಯ ವಿಮಾನಗಳು ರದ್ದಾದ ಕಾರಣ ಲಕ್ಷಾಂತರ ವಲಸಿಗರು ಸ್ವದೇಶದಲ್ಲೇ ಬಾಕಿ ಉಳಿದಿದ್ದು,ರೀ ಎಂಟ್ರಿ ವಿಸ್ತರಿಸಲು ಸಾಧ್ಯವಾಗದೆ ಕೆಲಸ ಕಳಕೊಳ್ಳುವ ಭೀತಿಯಲ್ಲಿದ್ದವರಿಗೆ ಇದೊಂದು ಆಶಾದಾಯಕ ಸುದ್ದಿಯಾಗಿದೆ.















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?
ಅನಿವಾಸಿಗಳಿಗೆ ನೆಮ್ಮದಿ: ಕುವೈತ್ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳ ಸಂಚಾರಕ್ಕೆ ಅನುಮತಿ
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
ಸೌದಿಯಲ್ಲಿ ತಪಾಸಣೆ ತೀವ್ರ: ಒಂದೇ ವಾರದಲ್ಲಿ 10,700 ನಿಯಮ ಉಲ್ಲಂಘಕರ ಬಂಧನ- 8,000 ಮಂದಿ ಗಡೀಪಾರು
ದುಬೈ ಏರ್ಪೋರ್ಟ್ನಲ್ಲಿ ಅನಾಥ ಬ್ಯಾಗ್: ಓಪನ್ ಮಾಡಿದ ಅಧಿಕಾರಿಗಳಿಗೆ ಶಾಕ್- ಒಳಗೇನಿತ್ತು ಗೊತ್ತೇ?
ದುಬೈ ಮಿನಿಬಸ್ ಅಪಘಾತ: ಆರು ಮಂದಿ ಭಾರತೀಯರು ಸಹಿತ ಎಂಟು ಮಂದಿ ಮೃತ್ಯು
ಸೌದಿ ಅರೇಬಿಯಾದಲ್ಲಿ ತೀವ್ರಗೊಂಡ ಬಿಸಿಲಿನ ಬೇಗೆ- ಹವಾಮಾನ ಇಲಾಖೆಯಿಂದ ಹೈ ಅಲರ್ಟ್!
ಅಪಾರ್ಟ್ಮೆಂಟ್ ಕೇಂದ್ರೀಕರಿಸಿ ಅನೈತಿಕ ಚಟುವಟಿಕೆ- ನಜ್ರಾನ್ನಲ್ಲಿ 12 ವಿದೇಶಿಗರ ಬಂಧನ
ಕುವೈತ್ ವಿಮಾನ ನಿಲ್ದಾಣದ ಮೇಲೆ ದಾಳಿ: ಗಾಯಗೊಂಡವರಲ್ಲಿ 13 ಮಂದಿ ಭಾರತೀಯರು