ಮಂಗಳೂರು: ದೇಶೀಯ ವಿಮಾನ ಯಾನ ಆರಂಭಿಸಲು ವಿಮಾನ ಯಾನ ಸಚಿವಾಲಯ ಸೂಚಿಸಿರುವ ಹಿನ್ನೆಲೆಯಲ್ಲಿ ಸೋಮವಾರದಿಂದ (ಮೇ.25) ಮಂಗಳೂರಿನಿಂದ ಬೆಂಗಳೂರು, ಮುಂಬೈ,, ಚೆನ್ನೈಗೆ ವಿಮಾನಗಳ ಹಾರಾಟ ಆರಂಭವಾಗಲಿದೆ.
ಮೇ 25 ರಿಂದ ಮಂಗಳೂರಿನಿಂದ ಇಂಡಿಗೋದ 3 ವಿಮಾನಗಳು ಮುಂಬೈ, ಬೆಂಗಳೂರು, ಚೆನ್ನೈಗೆ ಸಂಚರಿಸಲಿದೆ. ಸ್ಪೈಸ್ ಜೆಟ್ನ 3 ವಿಮಾನಗಳು ಬೆಂಗಳೂರು, ಮುಂಬೈಗೆ ಸಂಚರಿಸಲಿದೆ. ಏರ್ ಇಂಡಿಯಾ ವೇಳಾಪಟ್ಟಿ ಇನ್ನೂ ಬಿಡುಗಡೆ ಯಾಗಿಲ್ಲ.
ಬೆಂಗಳೂರಿನಿಂದ ಮಂಗಳೂರಿಗೆ ಸ್ಪೈಸ್ ಜೆಟ್ ವಿಮಾನ ಬೆಳಗ್ಗೆ 8.30ಕ್ಕೆ, ರಾತ್ರಿ 7 ಗಂಟೆಗೆ ಮತ್ತು ಇಂಡಿಗೋ ವಿಮಾನ ಸಂಜೆ 5.55ಕ್ಕೆ, ಮಂಗಳೂರಿನಿಂದ ಬೆಂಗಳೂರಿಗೆ ಸ್ಪೈಸ್ ಜೆಟ್ ವಿಮಾನ ಬೆಳಗ್ಗೆ 10.20ಕ್ಕೆ, ರಾತ್ರಿ 9.35 ಹಾಗೂ ಇಂಡಿಗೋ ಸಂಜೆ 7.30ಕ್ಕೆ ಸಂಚರಿಸಲಿದೆ.
ಮುಂಬೈನಿಂದ ಸ್ಪೈಸ್ ಜೆಟ್ ವಿಮಾನ ಬೆಳಗ್ಗೆ 7.05ಕ್ಕೆ, ಇಂಡಿಗೋ ಬೆಳಗ್ಗೆ 9.30ಕ್ಕೆ ಮಂಗಳೂರಿಗೆ ಹೊರಡಲಿವೆ. ಮಂಗಳೂರಿನಿಂದ ಮುಂಬೈಗೆ ಸ್ಪೈಸ್ ಜೆಟ್ ವಿಮಾನ ಬೆಳಗ್ಗೆ 9.05ಕ್ಕೆ ಇಂಡಿಗೋ 11.40 ಕ್ಕೆ ತೆರಳಲಿದೆ. ಚೆನ್ನೈನಿಂದ ಮಂಗಳೂರಿಗೆ ಸಂಜೆ 5.45ಕ್ಕೆ ಹಾಗೂ ಮಂಗಳೂರಿನಿಂದ ಚೆನ್ನೈಗೆ ರಾತ್ರಿ 8.05ಕ್ಕೆ ಇಂಡಿಗೋ ವಿಮಾನ ಸಂಚರಿಸಲಿದೆ ಎಂದು ಇಂಡಿಗೋ ಮತ್ತು ಸ್ಪೈಷ್ ಜೆಟ್ ಪ್ರಕಟನೆ ತಿಳಿಸಿದೆ.















ಇನ್ನಷ್ಟು ಸುದ್ದಿಗಳು
ರಾಜ್ಯ ಸರ್ಕಾರಕ್ಕೆ ದಕ್ಷಿಣ ಕನ್ನಡ ಜಿಲ್ಲಾ ವಖ್ಫ್ ಸಲಹಾ ಸಮಿತಿಯಿಂದ ಅಭಿನಂದನೆಗಳು
ನೌಕರರ ಮಿಂಚಿನ ಮುಷ್ಕರ : ಅಂತಾರಾಷ್ಟ್ರೀಯ ವಿಮಾನಯಾನ ರದ್ದು
ಭಜರಂಗದಳ ಮಾಜಿ ರಾಜ್ಯ ಸಂಚಾಲಕ ರಘು ಪರಾರಿ
‘ಎನ್ ಹಾನ್ಸ್ ಇಂಡಿಯಾ ಕಾನ್ಫರೆನ್ಸ್’- ಮಂಗಳೂರಿನ ಸಮಾವೇಶಕ್ಕೆ ಕ್ಷಣಗಣನೆ
ಖುರ್ಆನ್ ದುರ್ವ್ಯಾಖ್ಯಾನಕಾರರಿಂದ ಇಸ್ಲಾಂಗೆ ಭಾರೀ ಹಾನಿಯುಂಟಾಗುತ್ತಿದೆ- ಡಾ. ಝೈನೀ ಕಾಮಿಲ್
ಪಬ್ಲಿಕ್ ಟಿವಿಯ ರಂಗನಾಥ್ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಿಸುವಂತೆ ನ್ಯಾಯಾಲಯ ಆದೇಶ
‘ಕೈ’ ಪಾಲಯಕ್ಕೆ ಸಿಎಂ ಇಬ್ರಾಹಿಂ ಗುಡ್ ಬೈ – ಜೆಡಿಎಸ್ ಸೇರುವುದು ಖಚಿತ.?
ಮದ್ರಸಾಗಳಲ್ಲಿ, ಜನಗಳ ಮಧ್ಯೆ ಸೌಹಾರ್ದ, ಸಹಬಾಳ್ವೆ, ಭ್ರಾತೃತ್ವ ಸಂಬಂಧಗಳನ್ನು ಬೆಳೆಸಲು ಕಲಿಸಲಾಗುತ್ತಿದೆ- ರಾಜ್ಯ ಸರ್ಕಾರ
ರೌಳತುಲ್ ಉಲೂಂ ಓಲ್ಡ್ ಸ್ಟೂಡೆಂಟ್ಸ್ ಉಕ್ಕುಡ ಆಯೋಜಿಸಿದ ಸ್ನೇಹ ಸಂಗಮ
ರಾಜ್ಯದಲ್ಲಿ ನೈಟ್ ಕರ್ಪ್ಯೂ- ರಾತ್ರಿ 10 ರಿಂದ ಯಾವುದೇ ವಾಹನಗಳ ಓಡಾಟಕ್ಕೆ ಅವಕಾಶವಿಲ್ಲ