ದುಬೈ: ಇಸ್ಲಾಂ ಮತ್ತು ಮುಸ್ಲಿಂ ಸಮುದಾಯವನ್ನು ಅವಹೇಳಿಸುವ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ ಮೂವರು ಭಾರತೀಯರನ್ನು ಯುಎಇ ಯಲ್ಲಿ ಕೆಲಸದಿಂದ ಕಿತ್ತೊಗೆಯಲಾಗಿದೆ.
ಅಝಾದಿಯಾ ಗ್ರೂಪ್‌ನ ರೆಸ್ಟೊರೆಂಟ್‌ಗಳಲ್ಲಿ ಶೆಫ್ ಆಗಿದ್ದ ರಾವತ್ ರೋಹಿ ಹಾಕಿದ ಪೋಸ್ಟ್, ಮುಸ್ಲಿಂ ಸಮುದಾಯದ ವಿರುದ್ಧ ಇತ್ತೆಂದು ಪರಿಗಣಿಸಿ ಆತನನ್ನು ಕೆಲಸದಿಂದ ಕಿತ್ತೊಗೆಯಲಾಗಿದ್ದು ತನಿಖೆಗೂ ಗುರಿಪಡಿಸಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಶಾರ್ಜಾದ ನ್ಯುಮಿಕ್ಸ್ ಆಟೊಮೇಷನ್‌ನಲ್ಲಿ ಸ್ಟೋರ್ ಕೀಪರ್ ಆಗಿದ್ದ ಸಚಿನ್ ಕಿನ್ನಿಗೋಳಿ, ಟ್ರಾನ್ಸ್‌ಗಾರ್ಡ್ ಗ್ರೂಪ್‌ನ ವಿಶಾಲ್ ಠಾಕೂರ್ ಕೂಡ ತಮ್ಮ ಪೋಸ್ಟ್‌ಗಳಿಂದಾಗಿ ಕೆಲಸದಿಂದ ವಜಾಗೊಂಡಿದ್ದಾರೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.
ಯಾವುದೇ ರೀತಿಯ ಧಾರ್ಮಿಕ ಮತ್ತು ಜನಾಂಗೀಯ ತಾರತಮ್ಯವನ್ನು ಯುಎಇ ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧ ಎಂದು 2015ರಲ್ಲೇ ಘೋಷಿಸಿದೆ.
ಕೆಲ ವಾರಗಳಿಂದ ಇಂಥ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿದ್ದು, ಇದುವರೆಗೂ ಆರಕ್ಕೂ ಅಧಿಕ ಮಂದಿ ಇಂಥದ್ದೇ ಪೋಸ್ಟ್‌ಗಳಿಂದಾಗಿ ಕಾನೂನು ಶಿಕ್ಷೆಗೆ ಒಳಗಾಗುವ ಭೀತಿ ಅನುಭವಿಸುತ್ತಿದ್ದಾರೆ ಭಾರತೀಯರು.
ಯುಎಇಯಲ್ಲಿ ಭಾರತೀಯ ರಾಯಭಾರಿಯಾಗಿರುವ ಪವನ್ ಕಪೂರ್ ಅವರು ಜನಾಂಗೀಯ ದ್ವೇಷ, ಯಾವುದೇ ಧರ್ಮಗಳನ್ನು ನಿಂದಿಸುವ ಪೋಸ್ಟ್‌ಗಳನ್ನು ಹಾಕಬೇಡಿ ಎಂದು ಭಾರತೀಯ ನಿವಾಸಿಗಳಿಗೆ ಎಚ್ಚರಿಸಿದ್ದಾರೆ















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?
ಅನಿವಾಸಿಗಳಿಗೆ ನೆಮ್ಮದಿ: ಕುವೈತ್ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳ ಸಂಚಾರಕ್ಕೆ ಅನುಮತಿ
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
ಸೌದಿಯಲ್ಲಿ ತಪಾಸಣೆ ತೀವ್ರ: ಒಂದೇ ವಾರದಲ್ಲಿ 10,700 ನಿಯಮ ಉಲ್ಲಂಘಕರ ಬಂಧನ- 8,000 ಮಂದಿ ಗಡೀಪಾರು
ದುಬೈ ಏರ್ಪೋರ್ಟ್ನಲ್ಲಿ ಅನಾಥ ಬ್ಯಾಗ್: ಓಪನ್ ಮಾಡಿದ ಅಧಿಕಾರಿಗಳಿಗೆ ಶಾಕ್- ಒಳಗೇನಿತ್ತು ಗೊತ್ತೇ?
ದುಬೈ ಮಿನಿಬಸ್ ಅಪಘಾತ: ಆರು ಮಂದಿ ಭಾರತೀಯರು ಸಹಿತ ಎಂಟು ಮಂದಿ ಮೃತ್ಯು
ಸೌದಿ ಅರೇಬಿಯಾದಲ್ಲಿ ತೀವ್ರಗೊಂಡ ಬಿಸಿಲಿನ ಬೇಗೆ- ಹವಾಮಾನ ಇಲಾಖೆಯಿಂದ ಹೈ ಅಲರ್ಟ್!
ಅಪಾರ್ಟ್ಮೆಂಟ್ ಕೇಂದ್ರೀಕರಿಸಿ ಅನೈತಿಕ ಚಟುವಟಿಕೆ- ನಜ್ರಾನ್ನಲ್ಲಿ 12 ವಿದೇಶಿಗರ ಬಂಧನ
ಕುವೈತ್ ವಿಮಾನ ನಿಲ್ದಾಣದ ಮೇಲೆ ದಾಳಿ: ಗಾಯಗೊಂಡವರಲ್ಲಿ 13 ಮಂದಿ ಭಾರತೀಯರು