ದುಬೈ: ಚಲನಚಿತ್ರ ನಿರ್ದೇಶಕ ಅನಿವಾಸಿ ಕೇರಳೀಯ ಉದ್ಯಮಿಯೊಬ್ಬ ಟ್ವೀಟ್ ಮಾಡಿದ ಕವಿತೆಯಲ್ಲಿ ಧಾರ್ಮಿಕ ವ್ಯಕ್ತಿಗಳು ಕೋವಿಡ್ ಅನ್ನು ಹರಡುತ್ತಿದ್ದಾರೆ ಎಂದಿದ್ದು, ಇದೀಗ ವಿವಾದ ಸೃಷ್ಟಿಸಿದೆ. ಏರೀಸ್ ಸಂಸ್ಥೆಯ ಮುಖ್ಯಸ್ಥ ಮತ್ತು ಚಲನಚಿತ್ರ ನಿರ್ಮಾಪಕ ಸೋಹನ್ ರಾಯ್ ಟ್ವೀಟ್ ಮಾಡಿದ ವ್ಯಕ್ತಿಯಾಗಿದ್ದು, ಪ್ರತ್ಯೇಕ ಧರ್ಮವನ್ನು ಪ್ರತಿಬಿಂಬಿಸುವ ಚಿತ್ರದೊಂದಿಗೆ ಕವನವನ್ನು ಹರಡಿದ ಬಗ್ಗೆ ವರದಿಯಾಗಿದೆ.
ಇದನ್ನು ಸಂಘ ಪರಿವಾರದ ಗುಂಪುಗಳು ಪ್ರಚಾರ ಮಾಡುತ್ತಿದ್ದಂತೆ, ಆತನ ವಿರುದ್ಧ ಕ್ರಮ ಕೈಗೊಳ್ಳುವ ಬೇಡಿಕೆ ಬಲಗೊಳ್ಳುತ್ತಿದೆ. ಘಟನೆಗೆ ಕ್ಷಮೆಯಾಚಿಸುತ್ತಾ ಸೋಹನ್, ವಿಡಿಯೋವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದು, ಕವನವಕ್ಕೆ ಬಳಸಿಕೊಂಡ ಗ್ರಾಫಿಕ್ಸ್ ಅನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂಬುದಾಗಿ ಆತ ವಿವರಣೆ ನೀಡಿದ್ದ.
ಈ ಕವಿತೆಯನ್ನು ನಿಝಾಮುದ್ದೀನ್ ಕೋವಿಡ್ ಮತ್ತು ನಿಝಾಮುದ್ದೀನ್ ಕರೋನಾ ಪ್ರಕರಣ ಮುಂತಾದ ಹ್ಯಾಶ್‌ಟ್ಯಾಗ್‌ಗಳ ಜೊತೆಗೆ ಮಸೀದಿಯಿಂದ ಹೂರಬರುವ ಮುಸ್ಲಿಮರ ಗ್ರಾಫಿಕ್ಸ್‌ನೊಂದಿಗೆ ಪೋಸ್ಟ್ ಮಾಡಲಾಗಿದೆ.
ಧರ್ಮ ಪ್ರಚಾರಕರ ಆಜ್ಞೆಯ ಮೇರೆಗೆ ವೈರಾಣುಗಳು ದೇಶದಲ್ಲಿ ಹರಡುತ್ತವೆ ಎಂದು ಕವನದಲ್ಲಿ ಪ್ರತಿಬಿಂಬಿಸಿರುವ ಆತ,ಪೋಸ್ಟ್ ಮಾಡಿರುವ ಅನೇಕ ಕವನಗಳಲ್ಲಿ ಯಾವುದಾದರೂ, ಸಾಮಾಜಿಕ ವಿಮರ್ಶೆಯಾಗಿ, ಸಮಾಜಕ್ಕೆ ಅವಮಾನ ಮಾಡುತ್ತಿದ್ದ ಎಂಬ ಆಕ್ಷೇಪ ಕೇಳಿಬಂದಿದ್ದವು. ಮಹಿಳಾ ವಿರೋಧಿ ಮತ್ತು ಅತಿಥಿ ಕೆಲಸಗಾರರಿಗೆ ಅವಮಾನಗಳನ್ನು ಉಂಟು ಮಾಡುವ ಕವನಗಳನ್ನು ಈ ಹಿಂದೆ ಆತ ಪೋಸ್ಟ್ ಮಾಡಿದ್ದ.
ಫೇಸ್ಬುಕ್ ಮತ್ತು ಯೂಟ್ಯೂಬ್ ಕಾವ್ಯವನ್ನು ಹೈಡ್ ಮಾಡಲಾಗಿದ್ದು, ಟ್ವಿಟರ್‌ನಲ್ಲಿ ಇನ್ನೂ ಉಳಿಸಿಕೊಳ್ಳಲಾಗಿದೆ. ‘ಡ್ಯಾಂ’ ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕರನಾಗಿರುವ ಆತ
ಯುಎಇಯಲ್ಲಿ ವರ್ಷಗಳಿಂದ ವ್ಯವಹಾರ ನಡೆಸುತ್ತಿದ್ದ ಎನ್ನಲಾಗಿದೆ.
ಒಂದು ಡಾಲರ್‌ಗೆ ಒಂದು ಭಾರತೀಯ ರೂಪಾಯಿ
ಸಮಾನ ಎನ್ನುವ ಸುಬ್ರಹ್ಮಣ್ಯನ್ ಸ್ವಾಮಿಯ ಕಲ್ಪನೆಯ ಪ್ರಚಾರಕರಾಗಿದ್ದ.
ಸೋಷಿಯಲ್ ಮೀಡಿಯಾ ಮೂಲಕ ಧ್ವೇಷವನ್ನು ಹರಡುವವರ ವಿರುದ್ಧ ಅರಬ್ ದೇಶಗಳ ಪ್ರಮುಖರು ನಿನ್ನೆಯಷ್ಟೇ ಅಪಸ್ವರ ಎತ್ತಿದ್ದು,ಈ ಹಿನ್ನೆಲೆಯಲ್ಲಿ ಈ ಕವಿತೆಯ ವಿರುದ್ಧದ ಪ್ರತಿಭಟನೆ ವ್ಯಾಪಕಗೊಳ್ಳುತ್ತಿದೆ.















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ