ಅಬುದಾಬಿ: ಭಾರತೀಯ ವಲಸಿಗರಲ್ಲಿ ಕೊರೊನಾ ವೈರಸ್ ಸೋಂಕು (ಕೋವಿಡ್–19) ದೃಢಪಟ್ಟರೆ, ಅವರನ್ನು ಪ್ರತ್ಯೇಕವಾಗಿರಿಸುವ ಸಂಬಂಧ ಪರ್ಯಾಯ ವಸತಿ ಕಲ್ಪಿಸಲು ಯುಎಯಿಯಲ್ಲಿನ ಭಾರತದ ರಾಯಭಾರ ಕಚೇರಿ ಮುಂದಾಗಿದೆ.
‘ಸಾಕಷ್ಟು ಸಂಖ್ಯೆಯ ಭಾರತೀಯರು ಇಲ್ಲಿ ವಾಸಿಸುತ್ತಿದ್ದಾರೆ. ಅವರಲ್ಲಿ ಯಾರಿಗಾದರೂ ಕೋವಿಡ್–19 ಇರುವುದು ದೃಢಪಟ್ಟರೆ, ಸೋಂಕು ಇತರರಿಗೆ ಹರಡುವುದನ್ನು ತಡೆಯುವ ಸಲುವಾಗಿ ಸೋಂಕಿತರಿಗೆ ಪರ್ಯಾಯ ವ್ಯವಸ್ಥೆ ಒದಗಿಸಬೇಕಾಗುತ್ತದೆ. ಈ ಸಂಬಂಧ ಇಲ್ಲಿನ ಆರೋಗ್ಯ ಇಲಾಖೆಯೊಂದಿಗೆ ಯೋಜನೆ ಸಿದ್ಧಪಡಿಸಲಾಗುತ್ತಿದೆ’ ಎಂದು ಭಾರತದ ರಾಯಭಾರಿ ಪವನ್ ಕಪೂರ್ ಹೇಳಿರುವುದನ್ನು ಉಲ್ಲೇಖಿಸಿ ಖಲೀಜ್ ಟೈಮ್ಸ್ ವರದಿ ಮಾಡಿದೆ.
‘ಅವಿವಾಹಿತರಲ್ಲಿ ಕೆಲವರನ್ನು ಕ್ವಾರಂಟೈನ್ ಮಾಡಲಾಗಿದೆ. ಅವರಿಗೆ ಊಟ ಅಥವಾ ಅಡುಗೆ ತಯಾರಿಸಲು ಬೇಕಾದ ಪದಾರ್ಥಗಳಿರುವ ಕಿಟ್ಗಳನ್ನು ಪೂರೈಕೆ ಮಾಡಲಾಗಿದೆ’ ಎಂದೂ ಅವರು ಹೇಳಿದ್ದಾರೆ.
‘ಭಾರತ ಸರ್ಕಾರ ಅಂತರರಾಷ್ಟ್ರೀಯ ವಿಮಾನಗಳ ಹಾರಾಟವನ್ನು ಆರಂಭಿಸಿದ ಕೂಡಲೇ ಇಲ್ಲಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆದೊಯ್ಯುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು’ ಎಂದೂ ಅವರು ಹೇಳಿದ್ದಾರೆ.
ನೆರವಿಗೆ ಸಂಪರ್ಕಿಸಿ: ಯುಎಇಯಲ್ಲಿರುವ ಭಾರತೀಯರು ವೈದ್ಯಕೀಯ ನೆರವು ಬೇಕಾದಲ್ಲಿ ಇ–ಮೇಲ್ ca.abudhabi@mea.gov.in ಹಾಗೂ ಯಾವುದೇ ತುರ್ತು ಸೇವೆ ಬೇಕಾದಲ್ಲಿ ದೂರವಾಣಿ ಸಂಖ್ಯೆ 0508995583 ಸಂಪರ್ಕಿಸಬಹುದು ಎಂದು ರಾಯಭಾರ ಕಚೇರಿ ತಿಳಿಸಿದೆ.















ಇನ್ನಷ್ಟು ಸುದ್ದಿಗಳು
ಅಣು-ವಿಕಿರಣ ಸೋರಿಕೆಯಾದರೆ ಏನು ಮಾಡಬೇಕು?; ಜಾಗರೂಕತೆಯ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದ CDAA
ಒಮಾನ್:ಕಾರ್ಮಿಕ ಕಾಯ್ದೆ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ- ಫೀಲ್ಡ್ ತಪಾಸಣೆಗೆ ಮುಂದಾದ ಕಾರ್ಮಿಕ ಸಚಿವಾಲಯ
ರಸ್ತೆ ಬದಿಯ ಪೈಪ್ ಸರಿಪಡಿಸಿದ ಭಾರತೀಯ ಡೆಲಿವರಿ ಯುವಕ – ದುಬೈ ಸರ್ಕಾರದ ಗೌರವ
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ