ನವದೆಹಲಿ : ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯು ಮೇ. 4ರಿಂದ ತನ್ನ ದೇಶೀಯ ವಿಮಾನ ಯಾನ ಸೇವೆಯನ್ನು ಆರಂಭಿಸಲಿದೆ. ಲಾಕ್ಡೌನ್ ಎರಡನೇ ಭಾಗದ ಅವಧಿ ಮೇ 3ಕ್ಕೆ ಕೊನೆಗೊಳ್ಳಲಿದ್ದು ಮಾರನೇ ದಿನದಿಂದಲೇ ವಿಮಾನ ಹಾರಾಟ ಆರಂಭಿಸಲು ಏರ್ ಇಂಡಿಯಾ ಉತ್ಸುಕವಾಗಿದೆ.
ಈ ನಿಟ್ಟಿನಲ್ಲಿ ಮೇ 4ರಿಂದ ದೇಶೀಯ ವಿಮಾಣ ಪ್ರಯಾಣಕ್ಕೆ ಏರ್ ಇಂಡಿಯಾ ಈಗಾಗಲೇ ತನ್ನ ಮುಂಗಡ ಸೇವೆಯನ್ನು ಆರಂಭಿಸಿದೆ. ಲಾಕ್ಡೌನ್ ಮತ್ತೆ ಮುಂದುವರಿಯಬಹುದೇನೋ ಎಂಬ ಆತಂಕಗಳಿಗೆ ತೆರ ಎಳೆಯುವಂತೆ ಏರ್ ಇಂಡಿಯಾ ಸೀಟು ಕಾದಿರಿಸುವಿಕೆ ಶುರು ಹಚ್ಚಿಕೊಂಡಿದೆ.
ಆದರೆ ಇದೇ ವೇಳೆ ಅಂತಾರಾಷ್ಟ್ರೀಯ ಹಾರಾಟಕ್ಕೆ ಗ್ರಾಹಕರು ಜೂನ್ ಒಂದರವರೆಗೆ ಕಾಯಬೇಕು ಎಂದೂ ಏರ್ ಇಂಡಿಯಾ ಹೇಳಿದೆ. ಬೆಂಗಳೂರು, ಮುಂಬಯಿ, ಕೋಲ್ಕೊತಾ, ಚೆನ್ನೈ ಮತ್ತು ಹೊಸದಿಲ್ಲಿ ವಲಯಗಳಲ್ಲಿ ವಿಮಾನ ಹಾರಾಟಕ್ಕೆ ಸೀಟು ಕಾದಿರಿಸುವಿಕೆಯನ್ನು ಮೊದಲಿಗೆ ಆರಂಭವಾಗಲಿದೆ.
ಏರ್ ಇಂಡಿಯಾದ ಈ ಮೇಲ್ಪಂಕ್ತಿಯನ್ನು ನೋಡಿ ಖಾಸಗಿ ವಲಯದ ಯಾಣ ಸಂಸ್ಥೆಗಳು ಕೂಡ ಬುಕಿಂಗ್ ಆರಂಭಿಸಲು ಮುಂದಾಗಿವೆ. ಮೇ 4ರಿಂದ ಸೇವೆ ಸಿದ್ಧ ಎಂದು ಇಂಡಿಗೊ ಏರ್ಲೈನ್ಸ್ ಹೇಳಿದೆ.















ಇನ್ನಷ್ಟು ಸುದ್ದಿಗಳು
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ: ಏರ್ ಇಂಡಿಯಾ ಮತ್ತು ಇಂಡಿಗೋ ವಿಮಾನ ಹಾರಾಟ ರದ್ದು
ಚೀನಾದಲ್ಲಿ HMPV ವೈರಸ್ ವ್ಯಾಪಕ,ಆಸ್ಪತ್ರೆಗಳು ಫುಲ್: ಆತಂಕ ಬೇಡ- ಕೇಂದ್ರ ಸರ್ಕಾರ
ನೌಕರರ ಮಿಂಚಿನ ಮುಷ್ಕರ : ಅಂತಾರಾಷ್ಟ್ರೀಯ ವಿಮಾನಯಾನ ರದ್ದು
ಅಲ್ಪಸಂಖ್ಯಾತರ ಧಾರ್ಮಿಕ ಸ್ಥಳಗಳ ಮೇಲಿನ ದಾಳಿ ಖಂಡನೀಯ: ತೆಲಂಗಾಣ ಸಿಎಂಗೆ ಎ ಪಿ ಉಸ್ತಾದ್ ಪತ್ರ
ಲಂಚ: ಮೇಘಾ ಇಂಜಿನಿಯರಿಂಗ್ ವಿರುದ್ಧ ಸಿಬಿಐ ಪ್ರಕರಣ – 966 ಕೋಟಿ ಮೌಲ್ಯದ ಎಲೆಕ್ಟೋರಲ್ ಬಾಂಡ್ಗಳನ್ನು ಖರೀದಿಸಿದ್ದ ಕಂಪನಿ ಮೇಘಾ
ಸಮಗ್ರ ಅಭಿವೃದ್ಧಿ ಗೆ ಅಂಬೇಡ್ಕರ್ ತತ್ವ ಪಾಲನೆ ಅಗತ್ಯ : ದ್ರೌಪದಿ ಮುರ್ಮು
ಹರಿಯಾಣ : ಶಾಲಾ ಬಸ್ ಪಲ್ಟಿ; ಆರು ಮಕ್ಕಳು ಸಾವು ಈದ್ ರಜೆಯಲ್ಲೂ ತೆರೆದಿದ್ದ ಶಾಲೆ!
ಭಜರಂಗದಳ ಮಾಜಿ ರಾಜ್ಯ ಸಂಚಾಲಕ ರಘು ಪರಾರಿ
ಮುಸ್ಲಿಂ 2ಬಿ ಮೀಸಲು ರದ್ಧತಿ ಮತಬ್ಯಾಂಕ್ ಭದ್ರಪಡಿಸುವ ಸರಕಾರದ ನಡೆ ಖಂಡನೀಯ- ಎಸ್ ವೈ ಎಸ್
ದೇವಸ್ಥಾನಕ್ಕೆ ಮಾಂಸ ಎಸೆದು, ಕೋಮುಗಲಭೆ- ಪ್ರಮುಖ ಆರೋಪಿ ಚಂಚಲ್ ತ್ರಿಪಾಠಿ ಬಂಧನ