janadhvani

Kannada Online News Paper

ಸೌದಿ: ಕರ್ಫ್ಯೂ ವಿರುದ್ಧ ಸಾಮಾಜಿಕ ತಾಣಗಳಲ್ಲಿ ಪೋಸ್ಟ್- 30 ಲಕ್ಷ ರಿಯಾಲ್ ದಂಡ

ರಿಯಾದ್: ಕೋವಿಡ್ ಹರಡುವುದನ್ನು ತಡೆಯಲು ಸೌದಿ ಅರೇಬಿಯಾದಲ್ಲಿ ಘೋಷಿಸಲಾದ ಕರ್ಫ್ಯೂ ವಿರುದ್ಧ ಸಾಮಾಜಿಕ ಮಾಧ್ಯಮಗಳ ಮೂಲಕ ಪೋಸ್ಟ್ ಪ್ರಕಟಿಸಿದರೆ, ಕಠಿಣ ಶಿಕ್ಷೆಯನ್ನು ನೀಡಲಾಗುದು.

ಕರ್ಫ್ಯೂ ಉಲ್ಲಂಘಿಸುವ ಅಥವಾ ಇತರರನ್ನು ಉಲ್ಲಂಘಿಸುವಂತೆ ಪ್ರಚೋದಿಸುವ ಚಿತ್ರಗಳು, ವಿಡಿಯೋ ಮತ್ತು ಆಡಿಯೊ ತುಣುಕುಗಳನ್ನು ತಯಾರಿಸುವ, ಪೋಸ್ಟ್ ಮಾಡುವ ಮತ್ತು ಹಂಚಿಕೊಳ್ಳುವವರಿಗೆ ಐದು ವರ್ಷಗಳ ಜೈಲು ಶಿಕ್ಷೆ ಮತ್ತು 30 ಲಕ್ಷ ರಿಯಾಲ್ ವರೆಗೆ (ಸುಮಾರು 6ಕೊಟಿ 7ಲಕ್ಷ ರೂ. ವರೆಗೆ) ದಂಡ ವಿಧಿಸಲಾಗುವುದು ಎಂದು ಸೌದಿ ಪಬ್ಲಿಕ್ ಪ್ರಾಸಿಕ್ಯೂಷನ್ ಎಚ್ಚರಿಸಿದೆ.

ಅಧಿಕೃತ ಟ್ವೀಟ್‌ನಲ್ಲಿ ಈ ಘೋಷಣೆ ಮಾಡಲಾಗಿದ್ದು, ಸಾರ್ವಜನಿಕ ಕಾನೂನುಗಳನ್ನು ಉಲ್ಲಂಘಿಸುವುದು, ಪ್ರೇರಣೆ ನೀಡುವುದು ಮತ್ತು ಪ್ರಚಾರ ಮಾಡುವುದು ದೊಡ್ಡ ಅಪರಾಧವಾಗಿದೆ. ಅಪರಾಧಿಗಳ ವಿರುದ್ಧ ಮಾಹಿತಿ ತಂತ್ರಜ್ಞಾನ ಅಪರಾಧ ತಡೆ ಕಾಯ್ದೆಯ 6 ನೇ ವಿಧಿ ಪ್ರಕಾರ, ಐದು ವರ್ಷಗಳ ಜೈಲು ಶಿಕ್ಷೆ ಮತ್ತು 30 ಲಕ್ಷ ರಿಯಾಲ್ ವರೆಗೆ ತಕ್ಷಣದ ಶಿಕ್ಷೆಯನ್ನು ವಿಧಿಸಲಾಗುತ್ತದೆ.