ರಿಯಾದ್ : ಸೌದಿ ಅರೇಬಿಯಾವು ಕರೋನವೈರಸ್ ಹರಡುವುದನ್ನು ತಡೆಗಟ್ಟಲು ದೇಶಾದ್ಯಂತ ವಿಧಿಸಲಾದ ಭಾಗಶಃ ಕರ್ಫ್ಯೂ ಅನ್ನು ಬಿಗಿಗೊಳಿಸುತ್ತಿದೆ. ರಿಯಾದ್, ಮಕ್ಕಾ ಮತ್ತು ಮದೀನಾ ನಗರಗಳಲ್ಲಿ ಸಂಜೆ ಮೂರರಿಂದಲೇ ಕರ್ಫ್ಯೂ ಆರಂಭಗೊಳ್ಳಲಿದೆ.
ಅದೇ ರೀತಿ ಈ ಮೂರು ಪ್ರಾಂತ್ಯಗಳಿಗೆ ಪ್ರವೇಶ ಅಥವಾ ನಿರ್ಗಮನವನ್ನುಕೂಡ ನಿಷೇಧಿಸಲಾಗಿದೆ. ಗುರುವಾರದಿಂದ ಇದು ಜಾರಿಗೆ ಬರಲಿದೆ ಎಂದು ರಾಜ್ಯ ಸುದ್ದಿ ಸಂಸ್ಥೆ ಎಸ್‌ಪಿಎ ವರದಿ ಮಾಡಿದೆ.
ಸೋಂಕಿನಲ್ಲಿ ಸುಮಾರು ಕಾಲು ಭಾಗದಷ್ಟು ಏರಿಕೆ ದಾಖಲಿಸಿದ ನಂತರ ಸೌದಿ ಅರೇಬಿಯಾ ಸೋಮವಾರ ಕರ್ಫ್ಯೂ ಜಾರಿಗೊಳಿಸಿತು. ಮಂಗಳವಾರ ಕೊರೋನಾ ಬಾಧಿತ ಮೊದಲ ಮರಣವನ್ನು ವರದಿ ಮಾಡಿದೆ ಮತ್ತು 205 ಹೊಸ ಪ್ರಕರಣಗಳು ಒಟ್ಟು 767 ಕ್ಕೆ ತಲುಪಿದೆ.
ಏಕಾಏಕಿ ಅಂತಾರಾಷ್ಟ್ರೀಯ ವಿಮಾನಯಾನಗಳನ್ನು ಸ್ಥಗಿತಗೊಳಿಸುವುದು, ಉಮ್ರಾ ತೀರ್ಥಯಾತ್ರೆ ಸ್ಥಗಿತಗೊಳಿಸುವುದು, ಮಸೀದಿಗಳು, ಶಾಲೆಗಳು, ಮಾಲ್‌ಗಳು ಮತ್ತು ರೆಸ್ಟೋರೆಂಟ್‌ಗಳನ್ನು ಮುಚ್ಚುವುದು ಮತ್ತು ರಾತ್ರಿಯ ಕರ್ಫ್ಯೂ ಹೇರುವುದು ಸೇರಿದಂತೆ ತೀವ್ರ ಕ್ರಮಗಳನ್ನು ಸೌದಿ ಅರೇಬಿಯಾ ಕೈಗೊಂಡಿದೆ.















ಇನ್ನಷ್ಟು ಸುದ್ದಿಗಳು
ಜಿಸಿಸಿ: ಮಾದಕ ಜಾಲದ ವಿರುದ್ಧ ಮತ್ತಷ್ಟು ಕಠಿಣ ನಿಯಮ- ಮರಣದಂಡನೆ ಶಿಕ್ಷೆ
ಮಕ್ಕಾದಲ್ಲಿ ಹಜ್ ನಿಯಮ ಉಲ್ಲಂಘನೆ: ನೂರಾರು ವಿದೇಶಿಯರ ಬಂಧನ
ಯುಎಇ: ವೈಯಕ್ತಿಕ ವಾಟ್ಸಾಪ್ ಚಾಟ್ ಮತ್ತು ಫಾರ್ವರ್ಡ್ಗಳಿಗೂ ಸೈಬರ್ ಕಾನೂನು ಅನ್ವಯ
ಸೌದಿ: ಪಾರ್ಕ್ನಲ್ಲಿ ಆಟವಾಡುತ್ತಿದ್ದಾಗ ವಿದ್ಯುತ್ ಶಾಕ್- ಆರು ವರ್ಷದ ಬಾಲಕ ಮೃತ್ಯು
ಪ್ರಯಾಣಿಕರ ಸಂಕಷ್ಟಕ್ಕೆ ತೆರೆ: ಕುವೈತ್ ವಿಮಾನ ನಿಲ್ದಾಣದ ಕಾರ್ಯಾಚರಣೆ ಪುನಾರಂಭ
ಶುಭ ಸುದ್ದಿ : ಭಾರತ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಲಗೇಜ್ ಮಿತಿ ಹೆಚ್ಚಳ
ಆರು ವಿಭಾಗ ಜನರಿಗೆ ಮಕ್ಕಾ ಪ್ರವೇಶಕ್ಕೆ ಅನುಮತಿ- ಅಬ್ಶೀರ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ
ಶುಭ ಸುದ್ದಿ: ಕತಾರ್ನಲ್ಲಿ ವಿಮಾನ ಸೇವೆಗಳು ಯಥಾಸ್ಥಿತಿಗೆ
ಹಜ್ ಯಾತ್ರಿಕರಿಗೆ ಲಗೇಜ್ ರಹಿತ ಪ್ರಯಾಣ- ಸೌದಿ ಸಚಿವಾಲಯದ ಹೊಸ ಯೋಜನೆ
ಸೌದಿ: ವೀಸಾ ಅವಧಿ ಮುಕ್ತಾಯ- ಸ್ವದೇಶಕ್ಕೆ ಮರಳಲಾಗದೆ ಸಾವಿರಾರು ಮಂದಿ ಸಂಕಷ್ಟದಲ್ಲಿ