ರಿಯಾದ್: ಸೌದಿಯಲ್ಲಿ ಕೋವಿಡ್ 19 ವೈರಸ್ ಪರಿಣಾಮವಾಗಿ ಉದ್ಭವಿಸಿರುವ ಆರ್ಥಿಕ ಬಿಕ್ಕಟ್ಟನ್ನು ಸರಾಗಗೊಳಿಸುವ ಸಲುವಾಗಿ 120 ಬಿಲಿಯನ್ ರಿಯಾಲಿನ ಪ್ಯಾಕೇಜ್ ಅನ್ನು ಸೌದಿ ಸರ್ಕಾರ ಘೋಷಿಸಿದೆ. ಈ ಯೋಜನೆಯನ್ನು ಹಣಕಾಸು ಸಚಿವ ಮತ್ತು ಯೋಜನಾ ಸಚಿವ ಮೊಹಮ್ಮದ್ ಬಿನ್ ಅಬ್ದುಲ್ಲಾ ಅಲ್-ಜದನ್ ಘೋಷಿಸಿದ್ದಾರೆ.
ಹೊಸ ಪ್ಯಾಕೇಜ್ ನಲ್ಲಿ ವಲಸಿಗರಿಗೆ ಹೆಚ್ಚು ಅನುಕೂಲಕರವಾದ ಕ್ರಮಗಳು ಒಳಗೊಂಡಿದೆ. ಖಾಸಗಿ ಮತ್ತು ಸಣ್ಣ ಉದ್ಯಮಗಳು ಮತ್ತು ಅವುಗಳ ಆರ್ಥಿಕ ಚಟುವಟಿಕೆಗಳನ್ನು ಬೆಂಬಲಿಸಲು ಸರ್ಕಾರ ತುರ್ತು ಯೋಜನೆಗಳನ್ನು ಸಿದ್ಧಪಡಿಸಿದೆ.
ಹಣಕಾಸು ಸಚಿವಾಲಯದ ಹೊಸ ಪ್ರಕಟಣೆಗಳು:
- 2020 ರ ಜೂನ್ 30 ರವರೆಗೆ, ಇಖಾಮಾ ಅವಧಿ ಹೊಂದಿರುವವರು ಮತ್ತು ಈಗಾಗಲೇ ಇಖಾಮಾ ಅವಧಿ ಮುಗಿದಿರುವವರಿಗೆ ಲೆವಿ ಪಾವತಿಸದೆ ಮೂರು ತಿಂಗಳ ಇಖಾಮಾ ಅವಧಿ ವಿಸ್ತರಿಸಿ ನೀಡಲಾಗುವುದು.
- ಹೊಸ ಕೆಲಸದ ವೀಸಾಕ್ಕಾಗಿ ಶುಲ್ಕ ಪಾವತಿಸಿದ ನಂತರ, ವೀಸಾ ಸ್ಟ್ಯಾಂಪಿಂಗ್ ಗಾಗಿ ಕಾಯುತ್ತಿರುವವರಿಗೆ ಹಣ ಮರುಪಾವತಿ ಇಲ್ಲವೇ ವೀಸಾ ಸ್ಟ್ಯಾಂಪಿಂಗ್ ಅವಧಿಯನ್ನು ಮೂರು ತಿಂಗಳವರೆಗೆ ವಿಸ್ತರಿಸಲಾಗುವುದು.
- ವೀಸಾ ಸ್ಟ್ಯಾಂಪಿಂಗ್ ಪೂರ್ಣಗೊಂಡವರಿಗೂ ಈ ಪ್ರಯೋಜನ ಲಭಿಸಲಿದೆ.
- ಮರು ಪ್ರವೇಶ ವೀಸಾ ನೀಡಿದ ನಂತರ ಸೌದಿ ಅರೇಬಿಯಾದಲ್ಲೇ ಉಳಿದಿರುವ ವಿದೇಶಿಯರಿಗೆ ಮರು ಪ್ರವೇಶದ ಅವಧಿಯನ್ನು ಮೂರು ತಿಂಗಳವರೆಗೆ ವಿಸ್ತರಿಸಲು ಉದ್ಯೋಗದಾತರಿಗೆ ಅವಕಾಶವಿದೆ, ಇದಕ್ಕಾಗಿ ಯಾವುದೇ ವಿಶೇಷ ಶುಲ್ಕ ವಿಧಿಸಲಾಗುವುದಿಲ್ಲ. ಸ್ವದೇಶದಲ್ಲಿದ್ದು, ಪ್ರಯಾಣ ಮೊಟಕುಗೊಂಡವರಿಗೂ ಇದು ಅನ್ವಯ.
- ಮೌಲ್ಯವರ್ಧಿತ ತೆರಿಗೆ, ಅಬಕಾರಿ ತೆರಿಗೆ, ಆದಾಯ ತೆರಿಗೆ ಮತ್ತು ಝಕಾತ್ ಪಾವತಿಸಲು ಮೂರು ತಿಂಗಳ ವಿಳಂಬವನ್ನು ಅನುಮತಿಸಲಾಗಿದೆ.
- ಮುಂಗಡ ಷರತ್ತುಗಳು ಅನ್ವಯಿಸದೆ ಹೊಸ ಹಣಕಾಸು ವರ್ಷಕ್ಕೆ ನಿಯಂತ್ರಣವಿಲ್ಲದೆ ಝಕಾತ್ ಪ್ರಮಾಣಪತ್ರಗಳನ್ನು ನೀಡಲಾಗುವುದು.
- ಝಕಾತ್ ಮತ್ತು ಮೌಲ್ಯವರ್ಧಿತ ತೆರಿಗೆಗಳನ್ನು ಗಡುವಾಗಿ ಸ್ವೀಕರಿಸಲಾಗುವುದು.
- ದೇಶದಲ್ಲಿ ಆಮದು ಮಾಡಿಕೊಳ್ಳುವ ಸರಕುಗಳ ಮೇಲಿನ ಸುಂಕವನ್ನು 30 ದಿನಗಳವರೆಗೆ ವಿಧಿಸಲಾಗುವುದಿಲ್ಲ.
- ಖಾಸಗಿ ವಲಯದಿಂದ ಪಾವತಿಸಬೇಕಾದ ಸರ್ಕಾರಿ ಸೇವಾ ಶುಲ್ಕ ಮತ್ತು ಪುರಸಭೆಯ ಶುಲ್ಕವನ್ನು ಪಾವತಿಸಲು ಮೂರು ತಿಂಗಳ ಸಮಯನ್ನು ಅನುಮತಿಸಲಾಗಿದೆ.















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ