ಜಿದ್ದಾ,ಮಾ.12: ಭಾರತ ಸೇರಿದಂತೆ ಕರೋನಾ ಹರಡುವ ಭೀತಿ ಇರುವ ದೇಶಗಳಿಗೆ ಸೌದಿ ಅರೇಬಿಯಾ ತಾತ್ಕಾಲಿಕ ಪ್ರಯಾಣ ನಿಷೇಧ ಹೇರಿದೆ ಎಂದು ಅಧಿಕೃತ ಸುದ್ದಿ ಸಂಸ್ಥೆ ಎಸ್‌ಪಿಎ ವರದಿ ಮಾಡಿದೆ.
ಭಾರತ ಜೊತೆಗೆ, ಯುರೋಪಿಯನ್ ಯೂನಿಯನ್ ದೇಶಗಳು, ಸ್ವಿಸ್ ಕಾನ್ಫೆಡರೇಶನ್, ಪಾಕಿಸ್ತಾನ, ಶ್ರೀಲಂಕಾ, ಫಿಲಿಪೈನ್ಸ್, ಸುಡಾನ್, ಇಥಿಯೋಪಿಯಾ, ದಕ್ಷಿಣ ಸುಡಾನ್, ಎರಿಟ್ರಿಯಾ, ಕೀನ್ಯಾ, ಜಿಬೌಟಿ ಮತ್ತು ಸೊಮಾಲಿಯಾವನ್ನು ನಿಷೇಧಿಸಲಾಗಿದೆ.
ಸೌದಿ ಅರೇಬಿಯಾಕ್ಕೆ ಭೇಟಿ ನೀಡುವ 14 ದಿನಗಳ ಮೊದಲು ಈ ದೇಶಗಳಲ್ಲಿ ವಾಸಿಸುವವರಿಗೆ ಈ ನಿಷೇಧ ಅನ್ವಯಿಸುತ್ತದೆ.
ಈ ದೇಶಗಳಲ್ಲಿನ ಸೌದಿ ಪ್ರಜೆಗಳು ಮತ್ತು ಸೌದಿ ಇಖಾಮಾ ಹೊಂದಿರುವವರು 72 ಗಂಟೆಗಳಲ್ಲಿ ಸೌದಿಗೆ ಮರಳಲು ಅವಕಾಶವನ್ನು ಕಲ್ಪಿಸಲಾಗಿದೆ.
72 ಗಂಟೆಗಳ ಕಾಲಮಿತಿ ಮುಕ್ತಾಯಗೊಂಡರೆ, ಸೌದಿ ಪ್ರಯಾಣವನ್ನು ನಿಷೇಧಿಸಲಾಗುತ್ತದೆ. ನಿಷೇಧ ಎಷ್ಟು ದಿನ ಮುಂದುವರಿಯುತ್ತದೆ ಎಂಬುವುದನ್ನು ಸಚಿವಾಲಯ ಸ್ಪಷ್ಟಪಡಿಸಿಲ್ಲ. ಪ್ರಯಾಣ ನಿಷೇಧವನ್ನು ಅನಿರ್ದಿಷ್ಟಾವಧಿ ವಿಸ್ತರಿಸಿದ್ದಲ್ಲಿ, ಸೌದಿಯಲ್ಲಿ ಸಂದರ್ಶನ ವೀಸಾ ಅವಧಿ ಮುಗಿದವರು, ನಿರ್ಗಮನ, ಮರು ಪ್ರವೇಶ ಪಡೆದವರು ಹಿಂದಿರುಗುವ ಬಗ್ಗೆ ಆತಂಕಗೊಂಡಿದ್ದಾರೆ. ಈ ಬಗ್ಗೆ ಪಾಸ್‌ಪೋರ್ಟ್ ಇಲಾಖೆಯಿಂದ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
ಆದರೆ ಸೌದಿಯಲ್ಲಿನ ಆರೋಗ್ಯ ವಲಯದಲ್ಲಿನ ಉದ್ಯೋಗಿಗಳನ್ನು ಪ್ರಯಾಣ ನಿಷೇಧದಿಂದ ಕೈಬಿಡಲಾಗಿದೆ.















ಇನ್ನಷ್ಟು ಸುದ್ದಿಗಳು
ಜಿಸಿಸಿ: ಮಾದಕ ಜಾಲದ ವಿರುದ್ಧ ಮತ್ತಷ್ಟು ಕಠಿಣ ನಿಯಮ- ಮರಣದಂಡನೆ ಶಿಕ್ಷೆ
ಮಕ್ಕಾದಲ್ಲಿ ಹಜ್ ನಿಯಮ ಉಲ್ಲಂಘನೆ: ನೂರಾರು ವಿದೇಶಿಯರ ಬಂಧನ
ಯುಎಇ: ವೈಯಕ್ತಿಕ ವಾಟ್ಸಾಪ್ ಚಾಟ್ ಮತ್ತು ಫಾರ್ವರ್ಡ್ಗಳಿಗೂ ಸೈಬರ್ ಕಾನೂನು ಅನ್ವಯ
ಸೌದಿ: ಪಾರ್ಕ್ನಲ್ಲಿ ಆಟವಾಡುತ್ತಿದ್ದಾಗ ವಿದ್ಯುತ್ ಶಾಕ್- ಆರು ವರ್ಷದ ಬಾಲಕ ಮೃತ್ಯು
ಪ್ರಯಾಣಿಕರ ಸಂಕಷ್ಟಕ್ಕೆ ತೆರೆ: ಕುವೈತ್ ವಿಮಾನ ನಿಲ್ದಾಣದ ಕಾರ್ಯಾಚರಣೆ ಪುನಾರಂಭ
ಶುಭ ಸುದ್ದಿ : ಭಾರತ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಲಗೇಜ್ ಮಿತಿ ಹೆಚ್ಚಳ
ಆರು ವಿಭಾಗ ಜನರಿಗೆ ಮಕ್ಕಾ ಪ್ರವೇಶಕ್ಕೆ ಅನುಮತಿ- ಅಬ್ಶೀರ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ
ಶುಭ ಸುದ್ದಿ: ಕತಾರ್ನಲ್ಲಿ ವಿಮಾನ ಸೇವೆಗಳು ಯಥಾಸ್ಥಿತಿಗೆ
ಹಜ್ ಯಾತ್ರಿಕರಿಗೆ ಲಗೇಜ್ ರಹಿತ ಪ್ರಯಾಣ- ಸೌದಿ ಸಚಿವಾಲಯದ ಹೊಸ ಯೋಜನೆ
ಸೌದಿ: ವೀಸಾ ಅವಧಿ ಮುಕ್ತಾಯ- ಸ್ವದೇಶಕ್ಕೆ ಮರಳಲಾಗದೆ ಸಾವಿರಾರು ಮಂದಿ ಸಂಕಷ್ಟದಲ್ಲಿ