janadhvani

Kannada Online News Paper

ಖತಾರ್: ಒಂದೇ ದಿನದಲ್ಲಿ 238 ಮಂದಿಗೆ ಕರೋನಾ ಸೋಂಕು ಪತ್ತೆ- ಆತಂಕ

ದೋಹಾ: ಖತರ್‌ನಲ್ಲಿ ಮತ್ತೆ 238 ಮಂದಿಯಲ್ಲಿ ಕೋವಿಡ್ 19 ಪತ್ತೆಯಾಗಿದ್ದು, ದೇಶದಲ್ಲಿ ಕೊರೋನ ಪತ್ತೆಯಾದವರ ಸಂಖ್ಯೆಯು 262ಕ್ಕೆ ಏರಿದೆ. ಅವರೆಲ್ಲರೂ ಅನಿವಾಸಿಗಳು ಎನ್ನಲಾಗಿದೆ. ರೋಗ ಪೀಡಿತರ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಒಂದೇ ದಿನದಲ್ಲಿ ಇಷ್ಟು ಜನರಲ್ಲಿ ಕೋವಿಡ್ 19 ಪತ್ತೆ ಹಚ್ಚಲಾಗಿದ್ದು ಆತಂಕ ಮೂಡಿಸಿದೆ. ಒಂದೇ ಕೇಂದ್ರದಲ್ಲಿ ಇಷ್ಟು ಮಂದಿಗೆ ಕೋವಿಡ್ 19 ಸೋಂಕು ಪತ್ತೆಯಾಗಿದ್ದು, ಕಳೆದ ರವಿವಾರ ಕೋವಿಡ್ ಸೋಂಕಿಗೆ ಒಳಗಾದವರಿಂದ ಇಷ್ಟು ಜನರಿಗೆ ಹರಡುವಂತಾಗಿದೆ. ಇವರೆಲ್ಲರನ್ನೂ ಪ್ರತ್ಯೇಕ ಚಿಕಿತ್ಸಾ ಕೇಂದ್ತಕ್ಕೆ ಸ್ಥಳಾಂತರಿಸಲಾಗಿದೆ. ಜನರು ಅತ್ಯಂತ ಜಾಗರೂಕತೆ ವಹಿಸುವಂತೆ ಸಚಿವಾಲಯ ಎಚ್ಚರಿಕೆ ನೀಡಿದೆ.

error: Content is protected !! Not allowed copy content from janadhvani.com